ಗುದ್ದಲಿ ಹಿಡಿದು ಬೀದಿಗಿಳಿದ ರಾಖಿ ಸಾವಂತ್; ಕಸ ಎತ್ತಿ ಮಾದರಿಯಾದ ನಟಿ
ರಾಖಿ ಸಾವಂತ್ ಉತ್ತಮ ಕೆಲಸ ಮಾಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹೌದು ಮುಂಬೈ ಬೀದಿಯಲ್ಲಿ ಕಸ ಎತ್ತುವ ಮೂಲಕ ರಾಖಿ ಸಾವಂತ್ ಮಾದರಿ ಕೆಲಸ ಮಾಡಿದ್ದಾರೆ. ರಾಖಿ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನಟಿ ರಾಖಿ ಸಾವಂತ್ ಸದಾ ವಿವಾದಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಆದರೆ ಇತ್ತೀಚಿಗೆ ಬಾಯ್ ಫ್ರೆಂಡ್ ವಿಚಾರವಾಗಿ ರಾಖಿ ಅಗಾಗಾ ಸದ್ದು ಮಾಡುತ್ತಿರುತ್ತಾರೆ. ಮೈಸೂರು ಮೂಲದ ಆದಿಲ್ ಖಾನ್ ಜೊತೆ ಪ್ರೀತಿಯಲ್ಲಿರುವ ನಟಿ ರಾಖಿ ಸಾವಂತ್ ಮುಂಬೈ ಬೀದಿಯಲ್ಲಿ ಕೈ ಕೈ ಹಿಡಿದು ಓಡಾಡುತ್ತಿರುತ್ತಾರೆ.
ಈ ನಡುವೆಯೂ ರಾಖಿ ಸಾವಂತ್ ಉತ್ತಮ ಕೆಲಸ ಮಾಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹೌದು ಮುಂಬೈ ಬೀದಿಯಲ್ಲಿ ಕಸ ಎತ್ತುವ ಮೂಲಕ ರಾಖಿ ಸಾವಂತ್ ಮಾದರಿ ಕೆಲಸ ಮಾಡಿದ್ದಾರೆ. ರಾಖಿ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ರಾಖಿ ಸಾವಂತ್ ಪ್ರತಿದಿನ ಬೆಳಗ್ಗೆ ಜಿಮ್ ಗೆ ಹೋಗುತ್ತಾರೆ. ಜಿಮ್‌ಗೆ ಹೋಗುವ ವೇಳೆ ರಾಖಿ ರಸ್ತೆಯಲ್ಲಿ ಬಿದ್ದಿರುವ ಕಸ ನೋಡಿದ್ದಾರೆ. ಕಸವನ್ನು ಯಾರು ಎತ್ತಿಲ್ಲವಾ ಎನ್ನುತ್ತಾ ತಾನೆ ಸ್ವತಃ ಗುದ್ದಲಿ ಹಿಡಿದು ಬೀದಿಗೆ ಇಳಿದಿದ್ದಾರೆ.
ಮುಂಬೈನಲ್ಲಿ ಮಳೆ ಬಂದು ರಸ್ತೆ ಬದಿ ಮತ್ತಷ್ಟು ಕಸ ತುಂಬಿಕೊಂಡಿತ್ತು. ಅದನ್ನು ನೋಡಿ ರಾಖಿ ಸಾವಂತ್ ಕಸ ಎತ್ತಿದ್ದಾರೆ. ಗುದ್ದಲಿಯಿಂದ ಕಸವನ್ನು ತೆಗೆದು ಹಾಕಿದ್ದಾರೆ. ರಾಖಿ ಸಾವಂತ್ ಕಸ ಎತ್ತುತ್ತಿರುವ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ರಾಖಿ ಬಿಎಂಸಿ ಅಧಿಕಾರಿಗಳು ಎಲ್ಲೋಗಿದ್ದಾರೆ? ಯಾಕೆ ರಸ್ತೆ ಸ್ವಚ್ಛಗೊಳಿಸಿಲ್ಲ? ಏನು ಪಾರ್ಟಿ ಮಾಡುತ್ತಿದ್ದಾರ ಎಂದು ಕೇಳುತ್ತಾ ಸ್ವತಃ ಗುದ್ದಲಿ ಹಿಡಿದು ಸ್ವಚ್ಛ ಮಾಡಲು ಮುಂದಾಗಿದ್ದಾರೆ. ರಾಖಿ ಸಾವಂತ್ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಖಿ ಸಾವಂತ್ ಇತ್ತೀಚಿಗಷ್ಟೆ ಮಾಜಿ ಪತಿಯ ವಿರುದ್ಧ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು. ಮಾಜಿ ಪತಿಯಿಂದ ದೂರ ಆದ ಬಳಿಕ ರಾಖಿ ಸಾವಂತ್ ಮೈಸೂರು ಮೂಲದ ಆದಿಲ್ ಖಾನ್ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಈ ನಡುವೆ ರಾಖಿ ಮಾಜಿ ಪತಿ ರಿತೇಶ್ ತನ್ನ ಸಾಮಾಜಿಕ ಜಾಲತಾಣ ಖಾತೆಯನ್ನು ಹ್ಯಾಕ್ ಮಾಡಿ ತನ್ನನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ಮುಂಬೈನ ಓಶಿವಾರ್ ಸ್ಟೇಷನ್‌ನಲ್ಲಿ ದೂರು ನೀಡಿದ್ದರು.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿ ರಾಖಿ ಸಾವಂತ್ ತನ್ನ ಮಾಜಿ ಪತಿ ಸಾಮಾಜಿಕ ಜಾಲತಾಣ ಖಾತೆ ಹ್ಯಾಕ್ ಮಾಡಿದ್ದರು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದರು. ರಾಖಿ ಸಾವಂತ್ ಜೋರಾಗಿ ಅಳುತ್ತಿದ್ದ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ.