ಹೆಂಡತಿ ಮಕ್ಕಳಿದ್ದರೂ ಸ್ಮಿತಾ ಪಾಟೀಲ್‌ನಿಂದ ದೂರವಾಗಲಿಲ್ಲ ರಾಜ್ ಬಬ್ಬರ್!
ಹಿರಿಯ ಬಾಲಿವುಡ್ ನಟ ರಾಜ್ ಬಬ್ಬರ್ (Raj Babbar) ಇಂದು 70ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ, 23 ಜೂನ್ 2022 ರಂದು. ರಾಜ್ ಅವರು ಜೂನ್ 23, 1952 ರಂದು ಯುಪಿಯ ತುಂಡ್ಲಾದಲ್ಲಿ ಜನಿಸಿದ ರಾಜ್ ಬಬ್ಬರ್ ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ಅದಕ್ಕಾಗಿಯೇ ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ಗೆ ಸೇರಿದರು. 1975 ರಲ್ಲಿ ನಟನೆ ಕೋರ್ಸ್ ಮುಗಿಸಿದ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ರಾಜ್ ಬಬ್ಬರ್ ಒಬ್ಬ ಅನುಭವಿ ನಟ, ಅವರು ಇನ್ನೂ ಚಲನಚಿತ್ರ ಜಗತ್ತಿನಲ್ಲಿ ಸಕ್ರಿಯರಾಗಿದ್ದಾರೆ. ಅದೇ ಸಮಯದಲ್ಲಿ, ಅವರು ರಾಜಕೀಯದಲ್ಲಿಯೂ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ರಾಜ್ ಬಬ್ಬರ್ ಅವರ ಪರ್ಸನಲ್ ಸಹ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಇವರ ಮತ್ತು ಸ್ಮಿತಾ ಪಾಟೀಲ್ (Smita Patil ) ಅವರ ಸಂಬಂಧವು ಸಾಕಷ್ಟು ಸದ್ದು ಮಾಡಿತ್ತು.
ಖ್ಯಾತ ಬಾಲಿವುಡ್ ನಟ ರಾಜ್ ಬಬ್ಬರ್ ಬಹಳ ಕಾಲದಿಂದ ರಾಜಕೀಯದಲ್ಲಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದು, 2014 ರ ಚುನಾವಣೆಯಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತರು.
ಬಾಲ್ಯದಿಂದಲೂ ನಟನೆಯಲ್ಲಿದ್ದ ರಾಜ್ ಬಬ್ಬರ್ ಅವರು ವಿದೇಶಗಳಲ್ಲೂ ಸ್ಟೇಜ್ ಶೋಗಳಲ್ಲಿ ಭಾಗವಹಿಸಿದ್ದಾರೆ. ರಾಜ್ ಬಬ್ಬರ್ ಸುಮಾರು 150 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವುಗಳಿಗಿಂತ ಹೆಚ್ಚಾಗಿ ರಾಜ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಾಗಿದ್ದಾರೆ.
ರಾಜ್ ಬಬ್ಬರ್ ಮತ್ತು ಸ್ಮಿತಾ ಪಾಟೀಲ್ ಜೋಡಿಯು ಭಾರೀ ಹಿಟ್ ಆಗಿತ್ತು ಹಾಗೂ ಈ ಜೋಡಿಯ ಸಂಬಂಧವು ಸಾಕಷ್ಟು ಸದ್ದು ಮಾಡಿತ್ತು. ಅವರ ಈ ಸಂಬಂಧದಿಂದ, ಒಂದು ಸಮಯದಲ್ಲಿ ಮಗ ಪ್ರತೀಕ್ ತನ್ನ ಹೆಸರಿನಿಂದ ಬಬ್ಬರ್ ಸರ್‌ನೇಮ್ ಸಹ ತೆಗೆದುಹಾಕಿದ್ದರು.
ರಾಜ್ ಬಬ್ಬರ್ ತಮ್ಮ ಯೌವನದ ದಿನಗಳಿಂದಲೂ ಬಹಳ ಮುಕ್ತ ಮನಸ್ಸಿನ ವ್ಯಕ್ತಿಯಾಗಿದ್ದರು. ನಟ ಸಮಾಜದ ಬಗ್ಗೆ ಕೇರ್ ಮಾಡದೇ ಸ್ಮಿತಾ ಪಾಟೀಲ್ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಲಿವ್-ಇನ್ ಸಂಗಾತಿಯನ್ನಾಗಿ ಮಾಡಿಕೊಂಡರು
ವಾಸ್ತವವಾಗಿ, ರಾಜ್ ಮತ್ತು ಸ್ಮಿತಾ ಒಬ್ಬರನ್ನೊಬ್ಬರು ಇಲ್ಲದೆ ಒಂದು ಕ್ಷಣವೂ ಬದುಕಲು ಸಾಧ್ಯವಾಗದ ಸಮಯ ಬಂದಿತ್ತು. ಇದೇ ಕಾರಣಕ್ಕೆ ಅವರಿಬ್ಬರೂ ಆ ಕಾಲಕ್ಕೆ ಪ್ರಪಂಚವೇ ಲೆಕ್ಕಿಸದೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರಲು ಆರಂಭಿಸಿದ್ದರು. ಈ ಸಂಬಂಧವು ದೀರ್ಘಕಾಲದವರೆಗೆ ಮುಂದುವರೆಯಿತು.
ಆ ಸಮಯದಲ್ಲಿ ರಾಜ್ ಬಬ್ಬರ್ ತನ್ನ ಹೆಂಡತಿ ನಾದಿರಾಗೆ ವಿಚ್ಛೇದನ ನೀಡದೆ ಸ್ಮಿತಾ ಪಾಟೀಲ್ ಅವರನ್ನು ವಿವಾಹವಾದರು. ಇದಕ್ಕಾಗಿ ಅವರು ಟೀಕೆಗೂ ಗುರಿಯಾಗಿದ್ದರು. ರಾಜ್ ಬಬ್ಬರ್ ಎರಡು ಮದುವೆ ಮಾಡಿಕೊಂಡರೂ ಯಾರೊಂದಿಗೂ ಸಂಬಂಧ ಕಡಿದುಕೊಂಡಿಲ್ಲ.
ರಾಜ್ ಅವರ ಮೊದಲ ಪತ್ನಿ ನಾದಿರಾ ಜಹೀರ್‌ನಿಂದ ಇಬ್ಬರು ಮಕ್ಕಳಿದ್ದಾರೆ. ಈ ಇಬ್ಬರು ಮಕ್ಕಳ ಹೆಸರು ಆರ್ಯ ಮತ್ತು ಜೂಹಿ ಬಬ್ಬರ್. ರಾಜ್ ಮತ್ತು ನಾದಿರಾ ಬಬ್ಬರ್ ನಡುವೆ ಮನಸ್ತಾಪವಿದೆ. ಆದರೆ ಇಬ್ಬರೂ ವಿಚ್ಛೇದನ ಪಡೆದಿರಲಿಲ್ಲ.
ಈ ನಡುವೆ, ರಾಜ್ ಬಬ್ಬರ್ ನಟಿ ಸ್ಮಿತಾ ಪಾಟೀಲ್ ಅವರನ್ನು ವಿವಾಹವಾದರು. ಈ ದಂಪತಿಮಗ ಪ್ರತೀಕ್ ಬಬ್ಬರ್. ಆದರೆ ಮಗ ಹುಟ್ಟಿದ ನಂತರ ಸ್ಮಿತಾ ಪಾಟೀಲ್ ನಿಧನರಾದರು.