ಪುಷ್ಪಾ 2 ಕಾಲ್ತುಳಿತ ಪ್ರಕರಣ ಮೃತ ಮಹಿಳೆ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರ
ಟೀಕೆಗಳನ್ನು ಎದುರಿಸುತ್ತಿರುವ ಅಲ್ಲು ಅರ್ಜುನ್ ಮತ್ತು ಪುಷ್ಪ 2 ಚಿತ್ರತಂಡವು ಕಾಲ್ತುಳಿತ ಪ್ರಕರಣದಲ್ಲಿ ಮೃತ ಮಹಿಳೆ ಕುಟುಂಬಕ್ಕೆ ದೊಡ್ಡ ಮೊತ್ತವನ್ನು ನೀಡಿದೆ. ಅಲ್ಲು ಅರವಿಂದ್ ಸ್ವತಃ ಆಸ್ಪತ್ರೆಗೆ ಭೇಟಿ ನೀಡಿ ಈ ಮೊತ್ತವನ್ನು ಹಸ್ತಾಂತರಿಸಿದರು.
ಸಂಧ್ಯಾ ಥಿಯೇಟರ್ ಘಟನೆ
ಈ ಘಟನೆಯಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟರು. ಅವರ ಮಗ ಶ್ರೀ ತೇಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲ್ತುಳಿತ ಉಂಟಾಗಿದ್ದರಿಂದ ಮಹಿಳೆ ಸಾವನ್ನಪ್ಪಿದ್ದರು.
ಕಾಲ್ತುಳಿತದಲ್ಲಿ ಮೃತ ರೇವತಿ ಕುಟುಂಬಕ್ಕೆ ಅಲ್ಲು ಅರ್ಜುನ್ ವೈಯಕ್ತಿಕವಾಗಿ ₹25 ಲಕ್ಷ ನೆರವು ಘೋಷಿಸಿದ್ದರ. ಆದರೆ, ಪರಿಹಾರ ತಕ್ಷಣ ನೀಡದ ಕಾರಣ ಟೀಕೆಗಳು ವ್ಯಕ್ತವಾಗಿದ್ದವು.
ಪುಷ್ಪ 2 ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಘೋಷಿಸಿದ್ದ ₹2 ಕೋಟಿ ನೆರವನ್ನು ಚೆಕ್ ಮೂಲಕ ನೀಡಿದ್ದಾರೆ. ಚಿತ್ರದ ನಿರ್ಮಾಪಕ ದಿಲ್ ರಾಜು, ಅಲ್ಲು ಅರವಿಂದ್, ಇಳಮಂಜಿಲಿ ರವಿ ಭೇಟಿ ನೀಡಿದರು.
ಅಲ್ಲು ಅರ್ಜುನ್ ನೆರವು
ಈ ₹2 ಕೋಟಿಯಲ್ಲಿ ಅಲ್ಲು ಅರ್ಜುನ್ ₹1 ಕೋಟಿ, ಪುಷ್ಪ 2 ನಿರ್ಮಾಪಕರು ಮತ್ತು ಸುಕುಮಾರ್ ತಲಾ ₹50 ಲಕ್ಷ ನೀಡಿದ್ದಾರೆ. ಇಂದು ಚೆಕ್ ಹಸ್ತಾಂತರಿಸಲಾಗಿದೆ.
ಅಲ್ಲು ಅರವಿಂದ್
ಅಲ್ಲು ಅರವಿಂದ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ಶ್ರೀ ತೇಜ್ ಆರೋಗ್ಯದ ಬಗ್ಗೆ ವಿಚಾರಿಸಿ, ಅವರ ತಂದೆಗೆ ಧೈರ್ಯ ತುಂಬಿದ್ದಾಗಿ ತಿಳಿಸಿದರು.
₹2 ಕೋಟಿ ನೀಡುವ ಮುನ್ನ ಮೈತ್ರಿ ಮೂವೀಸ್ ₹50 ಲಕ್ಷ ನೆರವು ಘೋಷಿಸಿತ್ತು. ಚೆಕ್ ಅನ್ನು ಶ್ರೀ ತೇಜ್ ತಂದೆಗೆ ನೀಡಲಾಯಿತು. ಈ ಮೂಲಕ ಪರಿಹಾರ ವಿಳಂಬ ಆರೋಪಕ್ಕೆ ಉತ್ತರ ನೀಡಿದ್ದಾರೆ.