ಪ್ರಿಯಾಂಕಾ - ದೀಪಿಕಾ: ಯಾರು ಎಷ್ಟು ಹಿಟ್ ಸಿನಿಮಾ ನೀಡಿದ್ದಾರೆ?
ಬಾಲಿವುಡ್‌ನ ಯಾವ ನಟಿಯರು ತಮ್ಮ ಕೆರಿಯರ್‌ನಲ್ಲಿ ಅತಿ ಹೆಚ್ಚು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಗೊತ್ತಾ ನಿಮಗೆ ? ನಿಮ್ಮ ಫೇವರೇಟ್ ಸ್ಟಾರ್‌ನ ಎಷ್ಷು ಫಿಲ್ಮ್ ಬಾಕ್ಸ್‌ಆಫೀಸ್‌ನಲ್ಲಿ ಯಶಸ್ಸು ಗಳಿಸಿದೆ ನೋಡಿ. ಮಾಹಿತಿಗಾಗಿ ಓದಿ.

ಪ್ರಿಯಾಂಕಾ ಚೋಪ್ರಾಯಿಂದ ದೀಪಿಕಾ ಪಡುಕೋಣೆವರೆಗೆ ಹಲವು ಬಾಲಿವುಡ್ ನಟಿಯರು ತಮ್ಮ ವೃತ್ತಿ ಜೀವನದಲ್ಲಿ ಬೃಹತ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಯಾವ ನಟಿಯ ಎಷ್ಷು ಸಿನಿಮಾಗಳು ಹಿಟ್ ಆಗಿವೆ ಎಂಬ ಮಾಹಿತಿ ಇಲ್ಲಿದೆ.
ಪ್ರಿಯಾಂಕಾ ಚೋಪ್ರಾ:
ಪ್ರಿಯಾಂಕಾ ಚೋಪ್ರಾ ಗ್ಲೋಬಲ್ ಸೆನ್ಸೇಷನ್. ತಮ್ಮ ವೃತ್ತಿ ಜೀವನದಲ್ಲಿ 18 ಹಿಟ್ ಚಲನಚಿತ್ರಗಳನ್ನು ಅವರು ನೀಡಿದ್ದಾರೆ. ಬರ್ಫಿ, ಡಾನ್, ಡಾನ್ 2, ಫ್ಯಾಶನ್, ಬಾಜಿರಾವ್ ಮಾಸ್ತನಿ ಮತ್ತು ಅನೇಕ ಸೂಪರ್ ಹಿಟ್ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದಾರೆ ಪ್ರಿಯಾಂಕಾ.
ದೀಪಿಕಾ ಪಡುಕೋಣೆ:
ಬಾಲಿವುಡ್‌ನ ಟಾಪ್ ನಟಿಯರಲ್ಲಿ ದೀಪಿಕಾ ಪಡುಕೋಣೆ ಒಬ್ಬರು. ದೀಪಿಕಾ ಕೆರಿಯರ್‌ನಲ್ಲಿ ಇದುವರೆಗೆ ಸುಮಾರು 16 ಬಿಗ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವುಗಳಲ್ಲಿ ಚೆನ್ನೈ ಎಕ್ಸ್‌ಪ್ರೆಸ್, ಓಂ ಶಾಂತಿ ಓಂ, ಲವ್ ಆಜ್ ಕಲ್, ಯೆ ಜಾವಾನಿ ಹೈ ದೀವಾನಿ, ರಾಮ್ ಲೀಲಾ, ಪದ್ಮಾವತ್, ಬಾಜಿರಾವ್ ಮಸ್ತಾನಿ ಮುಂತಾದವು ಸೇರಿವೆ.
ಕಾಜೋಲ್:
ಕಾಜೋಲ್ ಬಾಲಿವುಡ್‌ನ ವರ್ಸಾಟೈಲ್ ನಟಿಯರಲ್ಲಿ ಒಬ್ಬರು. ತಮ್ಮ ಕೆರಿಯರ್‌ನಲ್ಲಿ ಕಾಜೊಲ್ ಅನೇಕ ಹಿಟ್ ಚಲನಚಿತ್ರಗಳನ್ನು ನೀಡಿದ್ದಾರೆ. ಸುಮಾರು 15 ಹಿಟ್ ಸಿನಿಮಾಗಳೊಂದಿಗೆ 40 ಚಲನಚಿತ್ರಗಳಲ್ಲಿ ಅವರು ಕೆಲಸ ಮಾಡಿದ್ದಾರೆ.
ಕರೀನಾ ಕಪೂರ್:
ಬಾಲಿವುಡ್‌ನ ಸೂಪರ್ ಸ್ಟಾರ್ ಕರೀನಾ ಕಪೂರ್ ಇದುವರೆಗೆ ಒಟ್ಟು 52 ಸಿನಿಮಾಗಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಮುಜೇ ಕುಚ್ ಕೆಹ್ನಾ ಹೈ, ಕಭಿ ಖುಷಿ ಕಭಿ ಘಮ್, ಜಬ್ ವಿ ಮೆಟ್, ಗೋಲ್ಮಾಲ್ ರಿಟರ್ನ್ಸ್, ತ್ರೀ ಈಡಿಯಟ್ಸ್, ಗೋಲ್ಮಾಲ್ 3, ಬಾಡಿಗಾರ್ಡ್ ಹಾಗೂ ಇನ್ನಷ್ಟು ಸಿನಿಮಾಗಳ ಜೊತೆಗೆ 15 ಬಿಗ್ ಹಿಟ್‌ಗಳನ್ನು ನೀಡಿದ್ದಾರೆ ಬೋಬೊ.
ಕತ್ರಿನಾ ಕೈಫ್:
ಬಾಲಿವುಡ್‌ನ ನಟಿ ಕತ್ರಿನಾ ಕೈಫ್ ಜನರ ಗಮನ ಸೆಳೆಯಲು ಸ್ವಲ್ಪ ಸಮಯ ತೆಗೆದುಕೊಂಡರು, ಕ್ರಮೇಣ ಅವರು ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಜಿಂದಗಿ ಮಿಲೇಗಿ ನಾ ದುಬರಾ, ರನ್,ಕಿಕ್, ನಮಸ್ತೆ ಲಂಡನ್, ಅಜಬ್ ಪ್ರೇಮ್ ಕಿ ಗಜಬ್ ಕಹಾನಿ, ವೆಲ್‌ಕಮ್ ರಾಜ್ನೀತಿ ಸೇರಿ ಅಂದಾಜು 17 ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.