ಕ್ರಿಸ್ಮಸ್ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ; ಮಗಳ ಫೋಟೋ ಹಂಚಿಕೊಂಡ ನಟಿ
ನಟಿ ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ಮಗಳು ಮಾಲ್ತಿ ಮೇರಿ ಜೊತೆ ಕ್ರಿಸ್ಮಸ್ ಆಚರುತ್ತಿದ್ದಾರೆ. ಕ್ರಿಸ್ಮಸ್ ಸಂಭ್ರಮದಲ್ಲಿರುವ ಮಗಳು ಮಾಲ್ತಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಬಾಲಿವುಡ್ ಸ್ಟಾರ್ ನಟಿ, ಅಮೆರಿಕಾ ಸೊಸೆ ಪ್ರಿಯಾಂಕಾ ಚೋಪ್ರಾ ಕ್ರಿಸ್ಮಸ್ ಸಂಭ್ರಮಿಸಲು ಸಜ್ಜಾಗಿದ್ದಾರೆ. ಅಂದಹಾಗೆ ಈ ವರ್ಷ ಪ್ರಿಯಾಂಕಾ ಚೋಪ್ರಾ ಅವರಿಗೆ ವಿಶೇಷವಾದ ಕ್ರಿಸ್ಮಸ್ ಆಗಿದೆ. ಯಾಕೆಂದರೆ ಮಗಳು ಮಾಲ್ತಿ ಮೇರಿ ಜೊತೆ ಮೊದಲ ಕ್ರಿಸ್ಮಸ್ ಸಂಭ್ರಮಿಸುತ್ತಿದ್ದಾರೆ. ಈಗಾಗಲೇ ಪ್ರಿಯಾಂಕಾ ಮನೆಯಲ್ಲಿ ಕ್ರಿಸ್ಮಸ್ ಸಂಭ್ರಮ ಜೋರಾಗಿದೆ.
ಕ್ರಿಸ್ಮಸ್‌ಗೂ ಮೊದಲೇ ಪ್ರಿಯಾಂಕಾ ಮಗಳನ್ನು ಕರ್ಕೊಂಡು ಹೊರಟಿದ್ದಾರೆ. ಕ್ರಿಸ್ಮಸ್ ಸಂಭ್ರಮವನ್ನು ಪ್ರಿಯಾಂಕಾ ಮಗಳಿಗೂ ತೋರಿಸುತ್ತಿದ್ದಾರೆ. ಪತಿ ನಿಕ್ ಜೋನಸ್ ಊರಾದ ಅಮೆರಿಕಾದಲ್ಲಿ ಕ್ರಿಸ್ಮಸ್ ಸಂಭ್ರಮ ಜೋರಾಗಿದೆ. ಅಂದಹಾಗೆ ಪ್ರಿಯಾಂಕಾ ಮತ್ತು ನಿಕ್ ಜೋನಸ್ ಇಬ್ಬರೂ ಮಗಳು ಮಾಲ್ತಿ ಮೇರಿ ಜೊತೆ ನ್ಯೂ ಜೆರ್ಸಿಯಲ್ಲಿದ್ದಾರೆ.
ಪ್ರಿಯಾಂಕಾ ಚೋಪ್ರಾ ಮಗಳ ಜೊತೆಗಿನ ಮೊದಲ ಕ್ರಿಸ್ಮಸ್ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿ, 'ಪರ್ಫೆಕ್ಟ್ ಚಳಿಗಾಲದ ದಿನಗಳು' ಎಂದು ಹೇಳಿದ್ದಾರೆ.
ಪ್ರಿಯಾಂಕಾ ಪತಿ ನಿಕ್ ಜೊತೆ ನಿಂತು ಮಿರರ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಪ್ರಿಯಾಂಕಾ, ನಿಕ್ ಜೋನಸ್ ಮತ್ತು ಮಾಲ್ತಿ ಮೇರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಕ್ಕಾಪಟ್ಟೆ ಚಳಿ ಇರುವ ಕಾರಣ ಮಗಳನ್ನು ಸಂಪೂರ್ಣವಾಗಿ ಸ್ವಟರ್ ಮತ್ತು ಕ್ಯಾಪ್ ನಿಂದ ಕವರ್ ಮಾಡಿದ್ದಾರೆ.
ಅಂದಹಾಗೆ ಪ್ರಿಯಾಂಕಾ ಇದುವರೆಗೂ ಮಗಳ ಮುಖ ರಿವೀಲ್ ಮಾಡಿಲ್ಲ. ಮಾಲ್ತಿ ಮೇರಿಯ ಅನೇಕ ಫೋಟೋಗಳನ್ನು ಪ್ರಿಯಾಂಕಾ ಶೇರ್ ಮಾಡುತ್ತಾರೆ ಆದರೆ ಇದುವರೆಗೂ ಮಗಳ ಮುಖ ರಿವೀಲ್ ಮಾಡಿಲ್ಲ. ಇತ್ತೀಚಿಗಷ್ಟೆ ಭಾರತಕ್ಕೆ ಬಂದಿದ್ದ ಪ್ರಿಯಾಂಕಾ ಮಗಳನ್ನು ಗಂಡನ ಮನೆಯಲ್ಲೇ ಬಿಟ್ಟು ಬಂದಿದ್ದರು.
ಪ್ರಿಯಂಕಾ ಸದ್ಯ ಶೇರ್ ಮಾಡಿರುವ ಪೋಟೋಗಳಿಗೆ ಅಭಿಮಾನಿಗಳಿಂದ ಪ್ರೀತಿಯ ಕಾಮೆಂಟ್ ಬರುತ್ತಿವೆ. ಸುಂದರವಾದ ಕುಟುಂಬ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಪ್ರಿಯಾಂಕಾ ದಂಪತಿ ಈ ವರ್ಷದ ಪ್ರಾರಂಭದಲ್ಲಿ ಬಾಡಿಗೆ ತಾಯಿ ಮೂಲಕ ಹಣ್ಣು ಮಗುವವನ್ನು ಸ್ವಾಗತಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.