- Home
- Entertainment
- Cine World
- ಪ್ರಿಯಾಂಕಾ ಚೋಪ್ರಾ ತರ ಹಣ ಮತ್ತು ಹೆಸರು ಸಂಪಾದನೆ ಮಾಡ್ಬೇಕು ಅಂದ್ರೆ ತಪ್ಪದೆ ಈ ಕೆಲಸ ಮಾಡಿ!
ಪ್ರಿಯಾಂಕಾ ಚೋಪ್ರಾ ತರ ಹಣ ಮತ್ತು ಹೆಸರು ಸಂಪಾದನೆ ಮಾಡ್ಬೇಕು ಅಂದ್ರೆ ತಪ್ಪದೆ ಈ ಕೆಲಸ ಮಾಡಿ!
ಈಗಿನ ಜನರೇಷನ್ ಮಕ್ಕಳಿಗೆ ಒಂದು ಸಲಹೆ ಕೊಡುವುದಾದರೆ ಏನ್ ಕೊಡುತ್ತಾರೆ ಪ್ರಿಯಾಂಕಾ ಚೋಪ್ರಾ? ಸಂಪೂರ್ಣ ಮಾಹಿತಿ ಇಲ್ಲಿದೆ....

ಬಾಲಿವುಡ್ ಅಂಗಳದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಎಷ್ಟು ಹಣ, ಹೆಸರು ಮತ್ತು ಜನರನ್ನು ಸಂಪಾದನೆ ಮಾಡಿದ್ದಾರೋ ಅಷ್ಟೇ ಅವಮಾನಗಳನ್ನು ಎದುರಿಸಿದ್ದಾರೆ.
ಮದುವೆ ನಂತರ ವಿದೇಶದಲ್ಲಿ ನೆಲೆಸಿರುವ ನಟಿ ಆಗಾಗ ಭಾರತಕ್ಕೆ ಬಂದು ಫ್ಯಾಮಿಲಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.ಈ ವೇಳೆ ಕಾಲೇಜ್ ವಿದ್ಯಾರ್ಥಿನಿ ಕೇಳಿದ ಪ್ರಶ್ನೆ ಸಾಮಾಜಿಕ ಜಾಕತಾಣದಲ್ಲಿ ವೈರಲ್ ಆಗುತ್ತಿದೆ.
'ಯಶಸ್ಸಿನ ಹಾದಿಯಲ್ಲಿ ನೀವು ಕಲಿತ ಮಹತ್ವವಾದ ಜೀವನದ ಪಾಠ ಯಾವುದು ಹಾಗೂ ಈಗಿನ ಮಕ್ಕಳಿಗೆ ನೀವು ಒಂದು ಸಲಹೆ ಕೊಡುವುದಾದರೆ ಯಾವುದು?' ಎಂದು ಕೇಳಿದ್ದರು.
'ನನ್ನ ಇಷ್ಟು ವರ್ಷದ ಜೀವನದ ಜರ್ನಿ ಹಾಗೂ ಸಿನಿಮಾ ಜರ್ನಿಯಲ್ಲಿ ನಾನು ಕಲಿತ ಒಂದು ಪಾಠವನ್ನು ಯುವಜನತೆಗೆ ಹೇಳಬೇಕು ಅಂದ್ರೆ ನೀವು ದಿನ ಎದ್ದು ಕೆಲಸಕ್ಕೆ ಹೋಗುತ್ತಿರುವ ಉದ್ದೇಶ ಕಂಡುಕೊಳ್ಳುವುದು'
'Zombie ಅಥವಾ ರೋಬೋಟ್ ರೀತಿ ಇರಬೇಡಿ. ಉದ್ದೇಶವಿಲ್ಲದೆ ಕೆಲಸ ಮಾಡುವುದರಲ್ಲಿ ಅರ್ಥವಿಲ್ಲ ಸುಮನ್ನೆ ನಿಮ್ಮ ಕ್ಯಾಬಿನ್ ಅಥವಾ ಕಂಪ್ಯೂರ್ಟ್ ಮುಂದೆ ಕುಳಿತುಕೊಳ್ಳಬೇಡಿ. ನನ್ನ ಪುಣ್ಯಕ್ಕೆ ಒಂದು ಪ್ರಾಜೆಕ್ಟ್ ಮುಗಿದ ತಕ್ಷಣ ಮತ್ತೊಂದು ಪ್ರಾಜೆಕ್ಟ್ ಶುರುವಾಗುತ್ತಿತ್ತು ಆದರೆ ಕೆಲವರಿಗೆ ಒಂದು ಪ್ರಾಜೆಕ್ಟ್ ಆದ್ಮೇಲೆ ದೊಡ್ಡ ಗ್ಯಾಪ್ ಉಳಿದುಬಿಡುತ್ತದೆ'
'ಕೆಲಸದ ಮೇಲೆ ಆಸಕ್ತಿ ಇದ್ದರೂ ಅವಕಾಶವಿಲ್ಲ ತಮ್ಮ ಫ್ಯಾಷನ್ ಮತ್ತು ಜೀವನ ಉದ್ದೇಶ ಮರೆಯುತ್ತಾರೆ. ದಿನ ಬೆಳಗ್ಗೆ ನಿಮ್ಮ ಇಷ್ಟದ ಕೆಲಸ ಮಾಡಲು ಎದ್ದೇಳಬೇಕು, ನಿನ್ನ ಕನಸು ನನಸು ಮಾಡಿಕೊಳ್ಳಲು ಎದ್ದೇಳಬೇಕು. ಉದ್ದೇಶವಿಟ್ಟುಕೊಂಡು ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.