Thalapathy Vijay ಕಲಿಸಿದ ಆ ಒಂದು ಪಾಠ Priyanka Chopra ಇನ್ನೂ ಮರೆತಿಲ್ಲ
ಥಲಪತಿ ವಿಜಯ್ (Thalapathy Vijay) ಅವರು ಸಿನಿಮಾ ರಂಗದ ಪ್ರಮುಖ ಮತ್ತು ಜನಪ್ರಿಯ ವ್ಯಕ್ತಿ. ಅವರು Bollywood ಸೇರಿ ಇತರ ಭಾಷಾ ಉದ್ಯಮಗಳ ಹಲವಾರು ಮಹಿಳೆಯರೊಂದಿಗೆ ಕೆಲಸ ಮಾಡಿದ್ದಾರೆ. 2000 ರ ದಶಕದಲ್ಲಿ, ಅವರು ತಮಿಳು (Tamil) ಚಲನಚಿತ್ರ ತಮಿಳನ್‌ನಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಜೊತೆ ನಟಿಸಿದ್ದರು. ಇದು ಬ್ಲಾಕ್‌ಬಸ್ಟರ್ ಆಯಿತು. ಸಂದರ್ಶನವೊಂದರಲ್ಲಿ, ಪ್ರಿಯಾಂಕಾ ಚೋಪ್ರಾ ತಮ್ಮ ಜೀವನದಲ್ಲಿ ಮೊದಲ ಕೆಲವು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ದಳಪತಿ ವಿಜಯ್ ಒಬ್ಬರು ಎಂದು ಹೇಳಿದರು.
ಕೆಲವು ತಿಂಗಳ ಹಿಂದೆ, ವ್ಯಾನಿಟಿ ಫೇರ್‌ಗೆ ನೀಡಿದ ಸಂದರ್ಶನದಲ್ಲಿ, ಪ್ರಿಯಾಂಕಾ ಚೋಪ್ರಾ (Priyanka Chopra) ತಮ್ಮ ಮೊದಲ ಸಹನಟ (Co-Star) ವಿಜಯ್ (vijay thalapathy) ಮತ್ತು ಶೂಟಿಂಗ್ ಸಮಯದಲ್ಲಿ ಅವರಿಂದ ಕಲಿತದ್ದನ್ನು ನೆನಪಿಸಿಕೊಂಡರು.
ವ್ಯಾನಿಟಿ ಫೇರ್‌ನೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ, ಪ್ರಿಯಾಂಕಾ ಅವರು ಹೇಗೆ ನಟನೆಗೆ ಬಂದರು ಮತ್ತು ಅವರ ಮೊದಲ ಸಹನಟ ದಳಪತಿ ವಿಜಯ್ ಜೊತೆಗೆ ಚಿತ್ರದ ಚಿತ್ರೀಕರಣದ ವೇಳೆ ನಡೆದ ಘಟನೆಗಳು, ಕಲಿತ ಪಾಠ, ಜೀವನದಲ್ಲಿ ಹೇಗೆ ಸಹಕರಿಸಿದವು ಎಂಬುದನ್ನು ಮೆಲಕು ಹಾಕಿದ್ದಾರೆ.
'ನನ್ನ ಮೊದಲ ಕೆಲವು ಚಿತ್ರಗಳಲ್ಲಿ ತಮಿಳನ್, ತಮಿಳು ಚಿತ್ರ ಮತ್ತು ಅಂದಾಜ್ ಮತ್ತು ದಿ ಹೀರೋ, ಎರಡೂ ಹಿಂದಿ ಚಲನಚಿತ್ರಗಳು. ಅವುಗಳನ್ನು ಪ್ರಮುಖ ಚಲನಚಿತ್ರಗಳೆಂದು ಬಿಂಬಿಸಲಾಗಿವೆ. ನಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವಿರಲಿಲ್ಲ ಆಗ ನನಗೆ. ನಟನೆ ಎಂದರೆ ಧರಿಸುವ ಬಟ್ಟೆ ಮತ್ತು ಹಾಕುವ ಕಾಸ್ಮೇಟಿಕ್ ಎಂದು ಭಾವಿಸಿ ಸೆಟ್‌ಗೆ ಬಂದಿದ್ದೆ ಎಂಬುವದು ಮಾತ್ರ ನೆನಪಿದೆ. ನಂತರ ನಾನು ಸೆಟ್‌ಗೆ ಹೋದಾಗ ಕಾಗದದ ಮೇಲಿರು ಪದಗಳನ್ನು ವ್ಯಕ್ತಿಯನ್ನಾಗಿ ಮಾಡುವುದು ಹೇಗೆ ಎಂದು ಲೆಕ್ಕಾಚಾರ ಮಾಡಬೇಕಾಗಿತ್ತು. ಅದು ಭಯಾನಕವಾಗಿತ್ತು,' ಎಂದು ಪಿಸಿ ಹೇಳಿದ್ದಾರೆ.
'ನಾನು ತಮಿಳನ್ ಸಿನಿಮಾದಲ್ಲಿ ನಟಿಸಿದ ಅನುಭವವನ್ನು ನೆನಪಿಸಿಕೊಳ್ಳುತ್ತೇನೆ, ನನಗೆ ತಮಿಳು ಮಾತನಾಡಲು ಬಾರದ ಕಾರಣ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದೆ.ಡೈಲಾಗ್ಸ್ ಕಂಠಪಾಠ ಮಾಡುತ್ತಿದ್ದೆ, ಫೋನೆಟಿಕ್ ಆಗಿ ಅಧ್ಯಯನ ಮಾಡುತ್ತಿದ್ದೆ, ಅದರ ಹಿಂದಿನ ಸಂದೇಶವನ್ನು ಗ್ರಹಿಸುತ್ತಿದ್ದೆ ಮತ್ತು ನಂತರ ನನ್ನ ಸಾಲುಗಳನ್ನು ಹೇಳುತ್ತಿದ್ದೆ' ಎಂದಿದ್ದಾರೆ.
ವಿಜಯ್ ಅವರಿಂದ ಕಲಿತ ಒಂದು ವಿಷಯವನ್ನು ತಾನು ಇಂದಿಗೂ ಅಭ್ಯಾಸ ಮಾಡುತ್ತೇನೆ ಎಂಬುದನ್ನು ಪಿಗ್ಗಿ ಉಲ್ಲೇಖಿಸಿದ್ದಾರೆ. ಸೆಟ್‌ಗೆ ಬಂದ ನಂತರ ವಿಜಯ್ ಅವರ ಹಾಗೇ ಪ್ರಿಯಾಂಕಾ ಅವರು ಕೂಡ ಮದ್ಯದಲ್ಲಿಯೇ, ಯಾವುದೇ ಕಾರಣಕ್ಕೆ ಸೆಟ್ ಬಿಟ್ಟ ಎಂದಿಗೂ ಹೋಗುವುದಿಲ್ಲವಂತೆ.
'ನನ್ನ ಸಹನಟ ವಿಜಯ್ ಅವರನ್ನು ನೋಡುವುದನ್ನು ನಾನು ಆನಂದಿಸುತ್ತಿದ್ದೆ. ಏಕೆಂದರೆ ಅವರು ನನ್ನ ಜೀವನದಲ್ಲಿ ಮೊದಲ ಕೆಲವು ಸ್ಫೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರು. ಸೆಟ್‌ನಲ್ಲಿ, ಅವರು ಸಾಕಷ್ಟು ವಿನಮ್ರರಾಗಿದ್ದರು. ಅವರು ಸೆಟ್‌ಗೆ ಬಂದ ನಂತರ ಅವರು ಎಂದಿಗೂ ಬಿಟ್ಟು ಹೋಗುವುದಿಲ್ಲ. ಅದನ್ನೇ ನಾನು ಮಾಡುತ್ತಲೇ ಇದ್ದೇನೆ. ನಾನು ಬಹಳ ಸಮಯ ಕಾಯುಬೇಕಾಗಿ ಬಂದಾಗ ಮಾತ್ರ ಚಿತ್ರಗಳ ನಡುವೆ ನನ್ನ ಟ್ರೇಲರ್‌ಗೆ ಹೋಗುವುದು. ಇಲ್ಲವಾದರೆ ನಾನು ಹೋಗೋದು ಕಡಿಮೆ. ಸಾಮಾನ್ಯವಾಗಿ ಸೆಟ್‌ನಲ್ಲಿಯೇ ಕಾಣಿಸಿಕೊಳ್ಳುತ್ತೇನೆ. ನಾವು ಏಕೆ ವಿಭಿನ್ನ ಶಾಟ್‌ಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತೇನೆ. ಸಿಬ್ಬಂದಿಯೊಂದಿಗೆ ಮಾತನಾಡುತ್ತೇನೆ. ಸೆಟ್‌ನಲ್ಲಿಯೇ ಒಟ್ಟಿನಲ್ಲಿ ಇತ್ರೀನಿ,' ಎಂದು ನಟಿ ಹೇಳಿದರು.
ಪ್ರಿಯಾಂಕಾ ಚೋಪ್ರಾ ಥಲಪತಿ ವಿಜಯ್ ಅವರ ತಮಿಳನ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಮಾತ್ರವಲ್ಲ. ಆ ಚಿತ್ರದ ಮೂಲಕ ಗಾಯಕಿ ಆಗಿಯೂ ಪಾದಾರ್ಪಣೆ ಮಾಡಿದರು. ಅವರು ಮತ್ತು ತಲಪತಿ ವಿಜಯ್ ಅವರು ಚಿತ್ರದ 'ಉಲ್ಲತೈ ಕಿಲ್ಲಾತೆ' ಹಾಡನ್ನು ಹಾಡಿದರು. ಪ್ರಿಯಾಂಕಾ ಚೋಪ್ರಾ ಅವರು ಮಧುರವಾಗಿ ಗುನುಗುತ್ತಿರುವುದನ್ನು ಗಮನಿಸಿದ ವಿಜಯ್ ಅವರು ಚಿತ್ರಕ್ಕಾಗಿ ಒಂದು ಹಾಡನ್ನು ಹಾಡಲು ಸೂಚಿಸಿದ್ದರಂತೆ.