- Home
- Entertainment
- Cine World
- Priyanka Chopra: 10 ವರ್ಷ ಅಂತರ, ನಿಕ್ ಟಿಕ್‌ಟಾಕ್ ಬಳಸೋದು ಕಲಿಸಿದ, ನಾನು ತೋರಿಸಿದ್ದೇನು ಗೊತ್ತಾ ?
Priyanka Chopra: 10 ವರ್ಷ ಅಂತರ, ನಿಕ್ ಟಿಕ್‌ಟಾಕ್ ಬಳಸೋದು ಕಲಿಸಿದ, ನಾನು ತೋರಿಸಿದ್ದೇನು ಗೊತ್ತಾ ?
ಪ್ರಿಯಾಂಕ ಚೋಪ್ರಾ()Priyanka chopra ಹಾಗೂ ನಿಕ್ ಜೋನಸ್(Nick Jonas) ವಿಚ್ಚೇದನೆ ಚರ್ಚೆ ಶುರುವಾಗಿದೆ. 10 ವರ್ಷ ವಯಸ್ಸಿನ ಅಂತರ ಇರೋ ಜೋಡಿ ಬೇರೆಯಾಗ್ತಾರಾ ? ದಾಂಪತ್ಯ ಚೆನ್ನಾಗಿಲ್ವಾ ?

ಇನ್‌ಸ್ಟಾಗ್ರಾಮ್‌ನಲ್ಲಿ (Instagram) ತಮ್ಮ ಹೆಸರಿನೊಂದಿಗೆ ಇದ್ದ ಪತಿಯ ಹೆಸರು ನಿಕ್ ಜೋನಸ್(Nick Jonas) ತೆಗೆದ ನಂತರ ಪ್ರಿಯಾಂಕ ಸುದ್ದಿಯಲ್ಲಿದ್ದಾರೆ. ಹೌದು. ದೇಸಿ ಗರ್ಲ್ ವಿಚ್ಚೇದಿತರಾಗ್ತಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ.
ಪ್ರಿಯಾಂಕಾ ಮತ್ತು ನಿಕ್ ಬಗ್ಗೆ ಇಡೀ ಜಗತ್ತು ಚರ್ಚಿಸಿದ ಒಂದು ವಿಷಯವಿದ್ದರೆ, ಅದು ಅವರಿಬ್ಬರು ನಡುವಿನ 10 ವರ್ಷಗಳ ವಯಸ್ಸಿನ ಅಂತರ. ಈ ಜೋಡಿ ಮದುವೆಯಾದಾಗ ಈ ಏಜ್ ಗ್ಯಾಪ್ ಭಾರಿ ಸುದ್ದಿಯಾಗಿತ್ತು.
ಬಹಳಷ್ಟು ಜನ ಈ ವಯಸ್ಸಿನ ಅಂತರವಾಗಿ ಜೋಡಿಯನ್ನು ತಮಾಷೆ ಮಾಡಿದ್ದರು. 10 ವರ್ಷ ಕಿರಿಯನ ಲವ್ ಎಸೆಪ್ಟ್ ಮಾಡಿ ಅದ್ಧೂರಿಯಾಗಿ ಮದುವೆಯಾಗಿದ್ದರು ಬಾಲಿವುಡ್ ಸುಂದರಿ.
ಈ ಬಗ್ಗೆ ಪ್ರತಿಕ್ರಿಯಿಸಿದ ನಟಿ ಅವರ ವಯಸ್ಸಿನ ಅಂತರ ಅವರಿಗೆ ಪರಸ್ಪರ ಕಲಿಯಲು ಹೇಗೆ ಅವಕಾಶವನ್ನು ನೀಡಿದೆ ಎಂಬುದನ್ನು ಬಹಿರಂಗಪಡಿದ್ದಾರೆ. ನಟಿ ನಿಕ್‌ನಿಂದ ಟಿಕ್‌ಟಾಕ್ ಕಲಿತಾಗ, ಪ್ರತಿಯಾಗಿ ಗಂಡನಿಗೆ ಯಶಸ್ವಿ ನಟನಾ ವೃತ್ತಿಜೀವನ ಹೇಗಿರುತ್ತೆ ಎಂಬುದನ್ನು ತೋರಿಸಿದ್ದೇನೆ ಎಂದಿದ್ದಾರೆ.
ಇತ್ತೀಚಿಗಷ್ಟೆ ಹೊಸ ಮನೆಗೆ ಶಿಫ್ಟ್ ಆಗಿದ್ದ ಪ್ರಿಯಾಂಕಾ ದೀಪಾವಳಿಯನ್ನು ಅಲ್ಲಿಯೇ ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಪತಿಯ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಈ ಬಾರಿಯ ದೀಪಾವಳಿ ತುಂಬಾ ಸ್ಪೆಷಲ್ ಎಂದು ತಿಳಿಸಿದ್ದರು
ಆದರೆ ದಿಢೀರ್ ಈ ರೀತಿ ಬೆಳವಣಿಗೆ ನಡೆದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ದೇಸಿ ಗರ್ಲ್ ದಾಂಪತ್ಯ ಬಿರುಕು ನಿಜವಾ ? ಮುಂದಿನ ದಿನಗಳಲ್ಲಿ ಕಾದು ನೋಡಬೇಕಷ್ಟೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.