- Home
- Entertainment
- Cine World
- ಮಹೇಶ್‌ಬಾಬು ಜೊತೆ ಪ್ರಿಯಾಂಕಾ ಚೋಪ್ರಾ ನಟನೆ: ರಾಜಮೌಳಿ ಹೊಸ ಸಿನಿಮಾಗಾಗಿ ಮುತ್ತಿನ ನಗರಿಗೆ ಬಂದಿಳಿದ ನಟಿ
ಮಹೇಶ್‌ಬಾಬು ಜೊತೆ ಪ್ರಿಯಾಂಕಾ ಚೋಪ್ರಾ ನಟನೆ: ರಾಜಮೌಳಿ ಹೊಸ ಸಿನಿಮಾಗಾಗಿ ಮುತ್ತಿನ ನಗರಿಗೆ ಬಂದಿಳಿದ ನಟಿ
ಬಾಲಿವುಡ್ ನಂತರ ಹಾಲಿವುಡ್‌ನಲ್ಲೂ ಸಖತ್ ಸದ್ದು ಮಾಡುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಮುತ್ತಿನ ನಗರಿ ಹೈದರಾಬಾದ್‌ಗೆ ಬಂದಿಳಿದಿದ್ದಾರೆ. ಅಮೆರಿಕಾದ ಲಾಸ್ ಏಂಜಲೀಸ್‌ನಿಂದ ಅವರು ಹೈದರಾಬಾದ್‌ಗೆ ಬಂದಿದ್ದು, ಟಾಲಿವುಟ್ ಪ್ರಿನ್ಸ್ ಮಹೇಶ್ ಬಾಬು ಮತ್ತು ರಾಜಮೌಳಿ ಅವರ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು.

ಹಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಲಾಸ್ ಏಂಜಲೀಸ್‌ನಿಂದ ಮುತ್ತಿನ ನಗರಿ ಹೈದರಾಬಾದ್‌ಗೆ ಬಂದಿದ್ದಾರೆ. ಮಹೇಶ್ ಬಾಬು ಮತ್ತು ರಾಜಮೌಳಿ ಅವರ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು.
ರಾಜಮೌಳಿ ಈ ಸಿನಿಮಾವನ್ನು ಸಾವಿರ ಕೋಟಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. 1000 ಕೋಟಿ ಅಂದ್ರೆ ಕಡಿಮೆ ನಾ ಇದೇ ಕಾರಣಕ್ಕೆ ರಾಜಮೌಳಿ ಆ ಬಜೆಟ್‌ಗೆ ತಕ್ಕಂತೆ ತಾರಾಗಣವನ್ನು ಆಯ್ಕೆ ಮಾಡುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನಟಿಯಾಗಿ ಖ್ಯಾತಿ ಗಳಿಸಿ ನಂತರ ಹಾಲಿವುಡ್‌ನಲ್ಲೂ ಸೈ ಎನಿಸಿಕೊಂಡವರು ಪ್ರಿಯಾಂಕಾ ಚೋಪ್ರಾ ಈ ಚಿತ್ರಕ್ಕೆ ಸೂಕ್ತ ಎಂದು ರಾಜಮೌಳಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ಸಾಕಷ್ಟು ತಡವಾಗಿದ್ದರಿಂದ, ರಾಜಮೌಳಿ ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸಲು ಉತ್ಸುಕರಾಗಿದ್ದಾರೆ. ಇತ್ತೀಚೆಗೆ ಸಿನಿಮಾ ಲಾಂಚ್ ಕೂಡ ರಹಸ್ಯವಾಗಿ ನೆರವೇರಿದೆ. ಪ್ರಿಯಾಂಕಾ ಚೋಪ್ರಾ, ರಾಜಮೌಳಿ ಮತ್ತು ಮಹೇಶ್ ಬಾಬು ಅವರೊಂದಿಗೆ ಚಿತ್ರದ ಚರ್ಚೆಯಲ್ಲಿ ಭಾಗವಹಿಸಲು ಲಾಸ್ ಏಂಜಲೀಸ್‌ನಿಂದ ಹೈದರಾಬಾದ್‌ಗೆ ಬಂದಿದ್ದಾರೆ ಎಂದು ವರದಿಯಾಗಿದೆ.
ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಚಿತ್ರವು ಆಫ್ರಿಕನ್ ಕಾಡುಗಳ ಹಿನ್ನೆಲೆಯಲ್ಲಿ ಸಾಹಸ ಚಿತ್ರವಾಗಿ ಮೂಡಿಬರಲಿದೆ. ಆಫ್ರಿಕನ್ ಲೇಖಕ ವಿಲ್ಬರ್ ಸ್ಮಿತ್ ಬರೆದ ಕಾದಂಬರಿಯನ್ನು ಆಧರಿಸಿ ರಾಜಮೌಳಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಬಾಬು ಸಾಹಸಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ರಾಜಮೌಳಿ ಈ ಚಿತ್ರವನ್ನು 1000 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಿದ್ದಾರೆ ಎಂಬ ವಿಚಾರ ಸಾಕಷ್ಟು ಪ್ರಚಾರ ಪಡೆಯುತ್ತಿದೆ ಈ ನಡುವೆ ಪ್ರಿಯಾಂಕಾ ಚೋಪ್ರಾ ನಗರಕ್ಕೆ ಎಂಟ್ರಿ ಕೊಟ್ಟಿದ್ದು, ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.