- Home
- Entertainment
- Cine World
- ಬಿಳಿ ಲೆಹಂಗಾದಲ್ಲಿ ಮಿಂಚಿದ 'ವಾರಣಾಸಿ' ಪ್ರಿಯಾಂಕಾ ಚೋಪ್ರಾ; ಹೊಸ ಟ್ರೆಂಡ್ ಸೃಷ್ಟಿ ಮಾಡಿದ ಹಾಲಿವುಡ್ ನಟಿ!
ಬಿಳಿ ಲೆಹಂಗಾದಲ್ಲಿ ಮಿಂಚಿದ 'ವಾರಣಾಸಿ' ಪ್ರಿಯಾಂಕಾ ಚೋಪ್ರಾ; ಹೊಸ ಟ್ರೆಂಡ್ ಸೃಷ್ಟಿ ಮಾಡಿದ ಹಾಲಿವುಡ್ ನಟಿ!
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ಡಿಸೆಂಬರ್ 2018 ರಲ್ಲಿ ರಾಜಸ್ಥಾನದ ಜೋಧ್‌ಪುರದ ಉಮೈದ್ ಭವನ ಅರಮನೆಯಲ್ಲಿ ವಿವಾಹವಾದರು. ಅವರ ವಿವಾಹವು ಎರಡು ವಿಭಿನ್ನ ಸಮಾರಂಭಗಳನ್ನು ಒಳಗೊಂಡಿತ್ತು.

ಪ್ರಿಯಾಂಕಾ ಚೋಪ್ರಾ ಲೆಹಂಗಾ ಮಿಂಚು!
ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಬಗ್ಗೆ ಯಾರಿಗೂ ಹೆಚ್ಚೇನೂ ಹೇಳಬೇಕಾಗಿಯೇ ಇಲ್ಲ. ಮಿಸ್ ಇಂಡಿಯಾ ಆಗಿ, ಮಿಸ್ ವರ್ಲ್ಡ್ ಆಗಿ ಮಿಂಚಿದ್ದ ಪ್ರಿಯಾಂಕಾ ಚೋಪ್ರಾ ಅವರು ಆ ಬಳಿಕ ನಟಿಯಾಗಿ ಬಾಲಿವುಡ್ ಚಿತ್ರರಂಗವನ್ನು ಆಳಿದವರು.
ಪ್ರಿಯಾಂಕಾ ಚೋಪ್ರಾ ಲೆಹಂಗಾ ಮಿಂಚು!
2002ರಲ್ಲಿ ತಮಿಳು ಸಿನಿಮಾ 'ತಮಿಳನ್' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಪ್ರಿಯಾಂಕಾ ಚೋಪ್ರಾ ಅವರು ಆ ಬಳಿಕ ಬರೋಬ್ಬರಿ ಒಂದು ದಶಕ್ಕೂ ಹೆಚ್ಚು ಕಾಲ ಚಿತ್ರರಂಗವನ್ನು ಆಳಿರುವ ನಟಿ.
ಪ್ರಿಯಾಂಕಾ ಚೋಪ್ರಾ ಲೆಹಂಗಾ ಮಿಂಚು!
ತಮಿಳು ಸಿನಿಮಾದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅಲ್ಲಿ ಸ್ಟಾರ್ ನಟಿಯಾಗಿ ಬೆಳೆದರು. ಹಿಂದಿಯಲ್ಲಿ 25ಕ್ಕು ಹೆಚ್ಚು ಸಿನಿಮಾಗಳಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪ್ರಿಯಾಂಕಾ ಚೋಪ್ರಾ ಲೆಹಂಗಾ ಮಿಂಚು!
ನಟಿ ಪ್ರಿಯಾಂಕಾ ಚೋಪ್ರಾ ಅವರು ರಾಷ್ಟ್ರೀಯ ಪ್ರಶಸ್ತಿಗಳನ್ನು ಕೂಡ ಪಡೆದಿದ್ದು ವಿಶ್ವದಾದ್ಯಂತ ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅಂಥ ನಟಿ ಪ್ರಿಯಾಂಕಾ ಚೋಪ್ರಾ ಅವರು ಇದೀಗ ಮತ್ತೆ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಲೆಹಂಗಾ ಮಿಂಚು!
ನಟಿ ಪ್ರಿಯಾಂಕಾ ಚೋಪ್ರಾ ಅವರು 2018ರಲ್ಲಿ ಹಾಲಿವುಡ್ ಸಿಂಗರ್ ಅಮೆರಿಕಾದ ನಿಕ್ ಜೊನಾಸ್ ಅವರನ್ನು ಮದುವೆ ಆಗಿದ್ದಾರೆ. ಆ ಬಳಿಕ ಅವರು ಹಾಲಿವುಡ್ ಸಿನಿಮಾಗಳಲ್ಲಿ ಕೂಡ ನಟಿಸಿ, ಭಾರತದ ಕೀರ್ತಿಯನ್ನು ಅಲ್ಲೂ ಹರಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಲೆಹಂಗಾ ಮಿಂಚು!
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ಡಿಸೆಂಬರ್ 2018 ರಲ್ಲಿ ರಾಜಸ್ಥಾನದ ಜೋಧ್‌ಪುರದ ಉಮೈದ್ ಭವನ ಅರಮನೆಯಲ್ಲಿ ವಿವಾಹವಾದರು. ಅವರ ವಿವಾಹವು ಎರಡು ವಿಭಿನ್ನ ಸಮಾರಂಭಗಳನ್ನು ಒಳಗೊಂಡಿತ್ತು.
ಪ್ರಿಯಾಂಕಾ ಚೋಪ್ರಾ ಲೆಹಂಗಾ ಮಿಂಚು!
ಒಂದು ಪಾಶ್ಚಿಮಾತ್ಯ ಕ್ರಿಶ್ಚಿಯನ್ ವಿವಾಹ ಮತ್ತು ಒಂದು ಹಿಂದೂ ಸಂಪ್ರದಾಯದ ಮದುವೆ. ಕ್ರಿಶ್ಚಿಯನ್ ಸಮಾರಂಭದಲ್ಲಿ ಅವರು ರಾಲ್ಫ್ ಲಾರೆನ್ ಉಡುಗೆ ಧರಿಸಿದ್ದರೆ, ಹಿಂದೂ ಸಮಾರಂಭದಲ್ಲಿ ಸಬ್ಯಸಾಚಿ ವಿನ್ಯಾಸದ ಲೆಹೆಂಗಾ ತೊಟ್ಟಿದ್ದರು.
ಪ್ರಿಯಾಂಕಾ ಚೋಪ್ರಾ ಲೆಹಂಗಾ ಮಿಂಚು!
ಸದ್ಯ ನಟಿ ಪ್ರಿಯಾಂಕಾ ಚೋಪ್ರಾ ಅವರು ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿಯವರ 'ವಾರಣಾಸಿ' ಚಿತ್ರದಲ್ಲಿ ನಟಿಸಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಹೈದ್ರಾಬಾದ್‌ನಲ್ಲಿ ನಡೆದ 'ಟೈಟಲ್ ಲಾಂಚ್' ಈವೆಂಟ್‌ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರು ಸಖತ್ ಮಿಂಚಿದ್ದಾರೆ.
ಪ್ರಿಯಾಂಕಾ ಚೋಪ್ರಾ ಲೆಹಂಗಾ ಮಿಂಚು!
ಗೋಲ್ಡನ್ ಬಾರ್ಡರ್ ಇರುವ ಬಿಳಿಬಣ್ಣದ ಲೆಹಂಗಾದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರು ಮಿರಮಿರ ಎಂಬಂತೆ ಮಿಂಚಿದ್ದಾರೆ. ಬಹಳಷ್ಟು ಕಾಲದಿಂದ ಭಾರತೀಯ ಚಿತ್ರರಂಗದಿಂದ ದೂರವಾಗಿದ್ದ ನಟಿ ಪ್ರಿಯಾಂಕಾ ಚೋಪ್ರಾ ಅವರೀಗ ಮತ್ತೆ ಸಿನಿಮಾ ಮೂಲಕ ತಮ್ಮ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಅವರು 'ವಾರಣಾಸಿ' ಈವೆಂಟ್‌ನಲ್ಲಿ ಧರಿಸಿದ್ದ ಲೆಹಂಗಾ ಈಗ ತನ್ನ ಬಣ್ಣ ಹಾಗೂ ಡಿಸೈನ್ ಸಮೇತ ಟ್ರೆಂಡ್ ಆಗುತ್ತಿದೆ. ವಾರಣಾಸಿ ಸಿನಿಮಾದ ಟೈಟಲ್ ಮಾತ್ರ ಸದ್ಯ ಲಾಂಚ್ ಆಗಿದೆ. ಮಿಕ್ಕಂತೆ, ಸಿನಿಮಾ ಬಗೆಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ರಿವೀಲ್ ಆಗಬೇಕಿದೆ.