ಬಾಲಿವುಡ್ ನಟಿ ರೇಖಾ ಸದ್ಯ ಸೋಶಿಯಲ್ ಮೀಡಿಯಾ ಬಳಕೆದಾರರನ್ನು ದಂಗಾಗಿಸಿದ್ದಾರೆ. ಅವರ ಪರ್ಫಾರ್ಮೆನ್ಸ್ ನೋಡಿ ರೇಖಾ ಫ್ಯಾನ್ಸ್ ಫಿದಾ ಆಗಿದ್ದಾರೆ. ವಯಸ್ಸು ಕೇವಲ ಲೆಕ್ಕಕ್ಕೆ ಮಾತ್ರ ಅಂತಿದ್ದಾರೆ.
ಬಾಲಿವುಡ್ (Bollywood) ನ ಎವರ್ ಗ್ರೀನ್ ನಟಿ ರೇಖಾ (Rekha). ತಮ್ಮ ಫಿಟ್ನೆಸ್, ಸೌಂದರ್ಯ, ನಗುವಿನ ಮೂಲಕವೇ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ ರೇಖಾ. ಬಾಲಿವುಡ್ ಸಿನಿಮಾಗಳಿಂದ ಸಂಪೂರ್ಣ ದೂರ ಇರುವ ರೇಖಾ ಸಾರ್ವಜನಿಕರಿಂದ ದೂರ ಆಗಿಲ್ಲ. ಒಂದಲ್ಲ ಒಂದು ಕಾರಣಕ್ಕೆ ರೇಖಾ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗ್ತಾರೆ. ಏರ್ ಪೋರ್ಟ್ ನಲ್ಲಿ ಅವರ ಲುಕ್ ಇರ್ಬಹುದು ಇಲ್ಲ ಸೆಲೆಬ್ರಿಟಿಗಳ ಮದುವೆ, ಸಿನಿಮಾ ರಿಲೀಸ್ ಇರ್ಬಹುದು. ತಮ್ಮದೇ ಸ್ಟೈಲ್ ನಲ್ಲಿ ಬರುವ ರೇಖಾ, ತಮ್ಮ ಹಾವಭಾವದಿಂದಲೇ ಅಭಿಮಾನಿಗಳನ್ನು ಸೆಳೆಯುತ್ತಾರೆ. ಈಗ ರೇಖಾ ಅವರ ಡಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾ ತುಂಬಿವೆ.
71ನೇ ವಯಸ್ಸಿನಲ್ಲೂ ರೇಖಾ ಭರ್ಜರಿ ಡಾನ್ಸ್
ಬಾಲಿವುಡ್ ಬೆಡಗಿ ರೇಖಾಗೆ 71 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ರೇಖಾ, ಸೊಂಟ ಬಳುಕಿಸಿ ಡಾನ್ಸ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಡಾನ್ಸ್ ನ ಅನೇಕ ವಿಡಿಯೋ ತುಣುಕುಗಳು ವೈರಲ್ ಆಗ್ತಿವೆ. ಒಂದು ವಿಡಿಯೋದಲ್ಲಿ ರೇಖಾ ಮೋಹೆ ಪನ್ಘಟ್ ಪೇ ಹಾಡಿಗೆ ಡಾನ್ಸ್ ಮಾಡಿದ್ದಾರೆ. 1981ರಲ್ಲಿ ತೆರೆಗೆ ಬಂದ ರೇಖಾ ಅಭಿನಯದ ಉಮ್ರಾವ್ ಜಾನ್ ಸಿನಿಮಾ ಲುಕ್ ನಲ್ಲಿ ಈ ಹಾಡಿಗೆ ರೇಖಾ ಡಾನ್ಸ್ ಮಾಡಿದ್ದಾರೆ. ಡಾನ್ಸ್ ಮಾಡಿದ್ರೆ ಇನ್ನೊಂದು ವಿಡಿಯೋದಲ್ಲಿ ವೀಕ್ಷಕರಿಗೆ ಹಾಯ್ ಮಾಡ್ತಾ, ಅವರ ದೃಷ್ಟಿ ತೆಗೀತಾ ಗಮನ ಸೆಳೆದಿದ್ದಾರೆ.
ಸೌಂದರ್ಯ ಸಿನಿಮಾ ನೋಡಿ ಕೈ ಸುಟ್ಟುಕೊಂಡ ಚಿರಂಜೀವಿ, ತಲೆಕೆಡಿಸಿಕೊಂಡ ಆ ನಿರ್ದೇಶಕ: ಆಗಿದ್ದೇನು?
ರೇಖಾ ಡಾನ್ಸ್ ನೋಡಿ ಬಾಲಿವುಡ್ ಯಂಗ್ ಸ್ಟಾರ್ಸ್ ದಂಗಾಗಿದ್ದಾರೆ. ಅನೇಕರು ಕಮೆಂಟ್ ಮಾಡಿದ್ದಾರೆ. ನಂಬೋದು ಕಷ್ಟ. ಇವರ ಡಾನ್ಸ್ ನೋಡಿ ಇವರಿಗೆ 71 ವರ್ಷವಾಗಿದೆ ಎಂಬುದನ್ನು ನಂಬಲ ಸಾಧ್ಯವಿಲ್ಲ ಅಂತ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ರೇಖಾ, ಪ್ರೀತಿ ನೀಡುವ ಹಾಗೂ ಆಶೀರ್ವಾದ ನೀಡುವ ಸ್ಟೈಲ್ ಭಿನ್ನವಾಗಿದೆ. ನಮ್ಮ ಮನೆಯ ಮೂರೂ ಪೀಳಿಗೆಯವರ ಫೆವರೆಟ್ ರೇಖಾ ಎಂದು ಇನ್ನೊಬ್ಬರು ಬರೆದಿದ್ದಾರೆ. ವಯಸ್ಸು ಕೇವಲ ನಂಬರ್ ಅನ್ನೋದಕ್ಕೆ ರೇಖಾ ಉತ್ತಮ ನಿದರ್ಶನ ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ರೇಖಾ ಅವರ ಎಕ್ಸ್ಪ್ರೆಷನ್ ಈಗಿನ ಯುವ ಕಲಾವಿದರು ಕಲಿಯುವ ಅಗತ್ಯವಿದೆ, ರೇಖಾ ಲೆಜೆಂಡ್ ಎನ್ನುವ ಕಮೆಂಟ್ ಗಳು ತುಂಬಿ ಹೋಗಿದೆ.
ಜೀವನದಲ್ಲಿ ಮರೆಯಲಾರದ ಫೆವರೆಟ್ ದಿನದ ಗುಟ್ಟು ರಿವೀಲ್ ಮಾಡಿದ Kichcha
1954, ಅಕ್ಟೋಬರ್ 10 ರಂದು ಜನಿಸಿರುವ ರೇಖಾ, ಬಾಲಿವುಡ್ ನ ಪ್ರಸಿದ್ಧ ನಟಿ. ಅನೇಕ ವರ್ಷಗಳಿಂದ ರೇಖಾ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಸಿನಿಮಾ ಮಾತ್ರವಲ್ಲ ವೈಯಕ್ತಿಕ ವಿಷ್ಯಕ್ಕೆ ರೇಖಾ ಸದಾ ಸುದ್ದಿಯಲ್ಲಿರ್ತಾರೆ. ರೇಖಾ ಪ್ರೀತಿ, ಮದುವೆ, ಅಮಿತಾಬ್ ಬಚ್ಚನ್ ಹಾಗೂ ರೇಖಾ ಲವ್ ಸ್ಟೋರಿ ಕೇಳಲು ಈಗ್ಲೂ ಜನರು ಆಸಕ್ತರಾಗಿದ್ದಾರೆ. ಎಲ್ಲೇ ಹೋದ್ರೂ ತಮ್ಮದೇ ಸ್ಟೈಲ್, ತಮ್ಮದೇ ಗುರುತು ಬಿಡುವ ರೇಖಾ, ಇತ್ತೀಚೆಗೆ ಜೆಡ್ಡಾದಲ್ಲಿ ನಡೆದ ರೆಡ್ ಸೀ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ರೇಖಾ ಅವರಿಗೆ ರೆಡ್ ಸೀ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರು ಕವಿತೆ ವಾಚಿಸಿದರು. ತಾಯಿಯ ಬಗ್ಗೆ ಒಂದು ಹೃದಯಸ್ಪರ್ಶಿ ಕಥೆ ಹೇಳಿದ್ದರು. ನಾನು ಚಲನಚಿತ್ರಗಳಿಂದಾಗಿ ಜೀವಂತವಾಗಿದ್ದೇನೆ ಎಂದಿದ್ದರು. ಉಮ್ರಾವ್ ಜಾನ್ ಸಿನಿಮಾದ ದಿಲ್ ಚೀಜ್ ಕ್ಯಾ ಹೈ ಹಾಡಿನ ಕೆಲವು ಸಾಲುಗಳನ್ನು ಹೇಳಿದ್ದರು. ಎಲ್ಲರೂ ಸಿನಿಮಾ ನೋಡಿ, ಅದಕ್ಕಿಂತ ಉತ್ತಮ ಔಷಧ ಅಥವಾ ಚಿಕಿತ್ಸೆ ಇಲ್ಲ. ಅದಕ್ಕೆ ನಾನೇ ಜೀವಂತ ಸಾಕ್ಷಿ ಅಂತ ಆ ಸಂದರ್ಭದಲ್ಲಿ ರೇಖಾ ಹೇಳಿದ್ದರು.


