- Home
- Entertainment
- Cine World
- ಬರೋಬ್ಬರಿ 30 ಕೋಟಿ ರೂ ಸಂಭಾವನೆ? ಕ್ರಿಶ್ 4 ಮೂಲಕ ಪ್ರಿಯಾಂಕ ಮತ್ತೆ ಬಾಲಿವುಡ್‌ಗೆ ಎಂಟ್ರಿ
ಬರೋಬ್ಬರಿ 30 ಕೋಟಿ ರೂ ಸಂಭಾವನೆ? ಕ್ರಿಶ್ 4 ಮೂಲಕ ಪ್ರಿಯಾಂಕ ಮತ್ತೆ ಬಾಲಿವುಡ್‌ಗೆ ಎಂಟ್ರಿ
ಪ್ರಿಯಾಂಕಾ ಚೋಪ್ರಾ ಮತ್ತೆ ಬಾಲಿವುಡ್ ಸಿನಿಮಾಗೆ ಬರ್ತಿದ್ದಾರೆ! 'ಕೃಷ್ 4' ಮತ್ತು SSMB29 ಮೂಲಕ ಮತ್ತೆ ಭಾರತೀಯ ಸಿನಿಮಾದಲ್ಲಿ ಪ್ರಿಯಾಂಕ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಪ್ರಿಯಾಂಕಾ ಸಂಭಾವನೆ ಬರೋಬ್ಬರಿ 30 ಕೋಟಿ ರೂ.

ಇಂಟರ್ನ್ಯಾಷನಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಸಿನಿಮಾದಿಂದ ದೂರ ಉಳಿದು ವರ್ಷಗಳೇ ಉರುಳಿದೆ. ಬಾಲಿವುಡ್ ರಂಗದಲ್ಲಿ ಆದ ಕೆಲ ಘಟನೆಗಳ ಬಳಿಕ ಪ್ರಿಯಾಂಕ ಚೋಪ್ರಾ ಭಾರತೀಯ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಹಾಲಿವುಡ್ , ಹಾಲಿವುಡ್ ಸೀರಿಸ್‌ಗಳಲ್ಲೇ ಪ್ರಿಯಾಂಕಾ ಚೋಪ್ರಾ ಬ್ಯೂಸಿಯಾಗಿದ್ದಾರೆ. ಇದೀಗ ಮತ್ತೆ ಪ್ರಿಯಾಂಕಾ ಚೋಪ್ರಾ ಭಾರತೀಯ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಹೃತಿಕ್ ರೋಷನ್ ಜೊತೆ 'ಕೃಷ್ 4' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.. ಈ ಹಿಂದೆ ಪ್ರಿಯಾ ಪಾತ್ರ ಮಾಡಿದ್ದ ಪ್ರಿಯಾಂಕ ಚೋಪ್ರಾ ಇದೀಗ ಮತ್ತೆ ಬಾಲಿವುಡ್ ಕೃಷ್ 4 ಸಿನಿಮಾದಲ್ಲಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ಪ್ರಿಯಾಂಕಾ ಅಭಿಮಾನಿಗಳಿಗೆ ಸಂಭ್ರಮ ತರಿಸಿದೆ.
ಹೃತಿಕ್ೃಪ್ರಿಯಾಂಕಾ ಜೋಡಿಯ ಕೃಷ್ ಸೂಪರ್ ಹಿಟ್ ಸಿನಿಮಾ ಆಗಿತ್ತು. ಇದೀಗ ಕೃಷ್ 4 ಸಿನಿಮಾ ನಿರ್ಮಾಣವಾಗುತ್ತಿದೆ. ವಿಶೇಷ ಅಂದರೆ ಹೃತಿಕ್ ರೋಷನ್ ಡೈರೆಕ್ಷನ್ ಜವಾಬ್ದಾರಿನೂ ತಗೊಂಡಿದ್ದಾರೆ. ಪ್ರಿಯಾಂಕಾ ಅವರನ್ನ ಭೇಟಿ ಮಾಡಿ 'ಕೃಷ್ 4' ಆಫರ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದ.
'ಕೃಷ್ 4' ಸಿನಿಮಾದಲ್ಲಿ ಪ್ರಿಯಾಂಕಾಗೆ ಆಫರ್ ನೀಡಲಾಗಿದೆ. ಆದರೆ ಈ ಆಫರ್‌ಗಿಂತ ಪ್ರಿಯಾಂಕಾ ಸಂಭಾವನೆ ಭಾರಿ ಸುದ್ದಿಯಾಗುತ್ತಿದೆ. ಪ್ರಿಯಾಂಕಾ ಬಾಲಿವುಡ್ ರೀ ಎಂಟ್ರಿಗೆ ಕೇಳಿದ ಸಂಭಾವನೆ ಭಾರಿ ಸದ್ದು ಮಾಡುತ್ತಿದೆ. ಕಾರಣ ಈಗಾಗಲೇ ಪ್ರಿಯಾಂಕಾ ಚೋಪ್ರಾ ಮಹೇಶ್ ಬಾಬು ಅವರ 'SSMB29' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ಸುಮಾರು 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಪ್ರಿಯಾಂಕಾ ಚೋಪ್ರಾ ಕೃಷ್ 4 ಸಿನಿಮಾಗೂ 30 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎನ್ನಾಲಗುತ್ತಿದೆ. ಪ್ರಿಯಾಂಕಾ ಚೋಪ್ರಾ 'ಕೃಷ್ 4' ಗೆ ಬಂದ್ರೆ, ಇದು ಅವರ ಎರಡನೇ ಕಮ್‌ಬ್ಯಾಕ್ ಸಿನಿಮಾ ಆಗಲಿದೆ.ಇತ್ತ ಕೃಷ್ ಚಿತ್ರ ತಂಡ ಕೂಡ ಭಾರಿ ಬಜೆಟ್‌ನೊಂದಿಗೆ ನಿರ್ಮಾಣ ಮಾಡಲು ಮುಂದಾಗಿದೆ. ಹೀಗಾಗಿ ಪ್ರಿಯಾಂಕಾ ಚೋಪ್ರಾಗೆ 30 ಕೋಟಿ ರೂಪಾಯಿ ನೀಡುವ ಸಾಧ್ಯತೆ ಇದೆ.
ಪ್ರಿಯಾಂಕಾ ಚೋಪ್ರಾ ಕೃಷ್ 4 ಸಿನಿಮಾದಲ್ಲಿ ನಟಿಸುವುದು ಖಚಿತವಾದರೆ ಸರಿಸುಮಾರು 30 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. ಹೀಗಾದಲ್ಲಿ ಮಹೇಳಾ ಬಾಬು ಸಿನಿಮಾ ಹಾಗೂ ಕೃಷ್ ಸಿನಿಮಾದಿಂದ ಪ್ರಿಯಾಂಕಾ ಚೋಪ್ರಾ ಬರೋಬ್ಬರಿ 60 ಕೋಟಿ ರೂಪಾಯಿ ಪಡೆಯಲಿದ್ದಾರೆ. ಎರಡೂ ಸಿನಿಮಾಗಳ ಸಂಭಾವನೆ ಲೆಕ್ಕ ಹಾಕಿದ್ರೆ, ಅದು ಅಕ್ಷಯ್ ಕುಮಾರ್ ಅವರ ಹಲವು ಸಿನಿಮಾಗಳ ಕಲೆಕ್ಷನ್‌ಗಿಂತ ಜಾಸ್ತಿ.
ಈಗ ಪ್ರಿಯಾಂಕಾ ಚೋಪ್ರಾ ಅವರ ಕಮ್‌ಬ್ಯಾಕ್ ಸಿನಿಮಾಗಳ ಬಜೆಟ್ ಬಗ್ಗೆ ಮಾತಾಡೋಣ. ಇದು ಇಂಡಿಯನ್ ಸಿನಿಮಾದಲ್ಲೇ ದೊಡ್ಡ ಬಜೆಟ್ ಸಿನಿಮಾ. 'ಕೃಷ್ 4' ಸಿನಿಮಾ ಬಜೆಟ್ ಸುಮಾರು 700 ಕೋಟಿ ರೂಪಾಯಿ ತನಕ ಹೋಗಬಹುದು. SSMB29 ಸಿನಿಮಾ 1000 ಕೋಟಿಯಲ್ಲಿ ತಯಾರಾಗುತ್ತಿದೆ.
ಪ್ರಿಯಾಂಕ ಚೋಪ್ರಾ ಕೃಷ್ 4 ಸಿನಿಮಾದಲ್ಲಿ ನಟಿಸುವುದು ಬಹುಚೇಕ ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಸಿನಿಮಾದ ಕೆಲಸ ಕಾರ್ಯಗಳು ಆರಂಭಗೊಂಡಿದೆ. ಇದೀಗ ಎಲ್ಲರ ಚಿತ್ತ ಪ್ರಿಯಾಂಕ ಚೋಪ್ರಾ ಸಂಭಾವನೆ ಹಾಗೂ ಕಮ್‌ಬ್ಯಾಕ್ ಮೇಲೆ ನೆಟ್ಟಿದೆ.