- Home
- Entertainment
- Cine World
- Priyanka Chopra; ಆನಿವರ್ಸರಿಗೂ ಮುನ್ನ ಗಂಡನ ಹೆಸರು ಕೈ ಬಿಟ್ಟ ಪ್ರಿಯಾಂಕಾ.. ದಾಂಪತ್ಯಕ್ಕೆ ಕೊನೆ ಅಂಕ?
Priyanka Chopra; ಆನಿವರ್ಸರಿಗೂ ಮುನ್ನ ಗಂಡನ ಹೆಸರು ಕೈ ಬಿಟ್ಟ ಪ್ರಿಯಾಂಕಾ.. ದಾಂಪತ್ಯಕ್ಕೆ ಕೊನೆ ಅಂಕ?
ನ್ಯೂಯಾರ್ಕ್(ನ. 22) ಈ ನಟಿಮಣಿಯರಿಗೆ(Bollywood) ಅದು ಏನಾಗುತ್ತದೆಯೋ ಏನೋ.. ಹೀಗೆಲ್ಲ ಸುದ್ದಿ ಮಾಡಿ ಬಿಡುತ್ತಾರೆ. ಗಂಡನ ಹೆಸರು ಕೈ ಬಿಟ್ಟು ಈಗ ಸುದ್ದಿ ಮಾಡಿರುವುದು ಪ್ರಿಯಾಂಕಾ ಚೋಪ್ರಾ. ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಜೋನಾಸ್( Nick Jonas) ತಮ್ಮ ಇನ್ ಸ್ಟಾಗ್ರಾಂ (Social Media) ಖಾತೆಯಲ್ಲಿ ತಮ್ಮ ಹೆಸರಿನ ಜೊತೆಯಿದ್ದ ಪತಿಯ ಹೆಸರನ್ನು ತೆಗೆದುಹಾಕಿದ್ದು ಹಲವು ವದಂತಿಗಳಿಗೆ ಕಾರಣವಾಗಿದೆ.
- FB
- TW
- Linkdin
Follow Us
)
ಹಾಗಾಗಿ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಸ್ಟಾರ್ ನಿಕ್ ಜೋನಾಸ್ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿತು.
ಇತ್ತೀಚಿಗಷ್ಟೆ ಹೊಸ ಮನೆಗೆ ಸ್ಥಳಾಂತರಗೊಂಡಿದ್ದ ಪ್ರಿಯಾಂಕಾ ದೀಪಾವಳಿಯನ್ನು ಅಲ್ಲಿಯೇ ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಪತಿಯ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಈ ಬಾರಿಯ ದೀಪಾವಳಿ ತುಂಬಾ ಸ್ಪೆಷಲ್ ಎಂದು ತಿಳಿಸಿದ್ದರು.
ಪ್ರಿಯಾಂಕಾ- ನಿಕ್ ದಂಪತಿಗಳ ಲಾಸ್ ಏಂಜಲೀಸ್‌ನ ಹೊಸ ಮನೆ ಅರಮನೆಗಿಂತ ಕಡಿಮೆಯಿಲ್ಲ!
ಮದುವೆಯ ನಂತರ ಪ್ರಿಯಾಂಕಾ ಚೋಪ್ರಾ ಇನ್ ಸ್ಟಾಗ್ರಾಂನಲ್ಲಿ ತಮ್ಮ ಹೆಸರಿನ ಜೊತೆಗೆ ಜೋನಾಸ್ ಎಂದು ಸೇರಿಸಿಕೊಂಡಿದ್ದರು. ಇಂದು ಜೋನಾಸ್ ಹೆಸರನ್ನು ತೆಗೆದುಹಾಕಿದ್ದು ಅಭಿಮಾನಿಗಳಲ್ಲಿ ಪ್ರಶ್ನೆಗೆ ಕಾರಣವಾಗಿದೆ.
ಪತಿ ನಾಗಚೈತನ್ಯರಿಂದ ಬೇರ್ಪಟ್ಟ ಟಾಲಿವುಡ್ ನಟಿ ಸಮಂತಾ ಕೂಡಾ ವಿಷಯ ಬಹಿರಂಗವಾಗುವುದಕ್ಕೂ ಮೊದಲು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿನ ಹೆಸರಿನಿಂದ ನಾಗಚತನ್ಯ ಅವರ ಹೆಸರನ್ನು ತೆಗೆದಿದ್ದರು. ಅದಾದ ನಂತರ ಚರ್ಚೆ ವಿಪರೀತ ಹಂತಕ್ಕೆ ಹೋದ ನಂತರ ದಂಪತಿ ಬೇರೆಯಾಗಿದ್ದರು.
ಆದರೆ ಈ ವಿಚಾರಗಳಿಗೆ ಸ್ಪಷ್ಟನೆ ನೀಡುವ ಕೆಲಸ ಮಾಡಿರುವ ಪ್ರಿಯಾಂಕಾ ಚೋಪ್ರಾ ತಾಯಿ, ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನುವುದು ಕೇವಲ ವದಂತಿ ಎಂದು ಹೇಳಿದ್ದಾರೆ.
ಡಿಸೆಂಬರ್ 1 ಕ್ಕೆ ಪ್ರಿಯಾಂಕಾ ಮತ್ತು ನಿಕ್ ಮದುವೆಯಾಗಿ ಮೂರು ವರ್ಷ. ಅವರ ಮದುವೆ ಆನಿವರ್ಸರಿ ಚರ್ಚೆಯಾಗಬೇಕಿದ್ದ ಸಂದರ್ಭವೇ ಹೆಸರು ತೆಗೆದು ಹಾಕಿದ್ದು ಯಾಕೆ ಎನ್ನುವುದು ಕಾಡುತ್ತಿದೆ.
ನಿಕ್ ಮದುವೆಯಾದ ನಂತರ ಪ್ರಿಯಾಂಕಾ ಭಾರತವನ್ನು ಬಹುತೇಕ ತೊರೆದಿದ್ದರು. ವಿದೇಶಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ಪ್ರಿಯಾಂಕಾ ಪತಿ ಜತೆ ಹಾಲಿವುಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಪತಿ ನಿಜ್ ಜೋನಾಸ್ ಜತೆ ಪ್ರಿಯಾಂಕಾ ಶೇರ್ ಮಾಡಿಕೊಳ್ಳುತ್ತಿದ್ದ ಪ್ರತಿಯೊಂದು ಪೋಟೋಗಳು ವೈರಲ್ ಐಟಮ್ ಗಳಾಗುತ್ತಿದ್ದವು. ಮೇಲುಡುಗೆ ಮೇಲೆ ಪ್ರಿಯಾಂಕಾ ಅವರಿಗೆ ತಾತ್ಸಾರ ಬಂದಿದೆ ಎಂಬ ಕಮೆಂಟ್ ಗಳು ಬಂದಿದ್ದವು.
ತನಗಿಂತ ಆರೇಳು ವರ್ಷ ಕಿರಿಯ ನಿಕ್ ಅವರನ್ನು ಮದುವೆಯಾಗಿದ್ದ ಪ್ರಿಯಾಂಕಾ ಸಂಸಾರ ಚೆನ್ನಾಗಿಯೇ ಇರಲಿ, ವದಂತಿಗಳು ಸುಳ್ಳಾಗಲಿ ಎನ್ನುವುದೇ ಅಭಿಮಾನಿಗಳ ಆಶಯ.
ಈ ನಟಿಮಣಿಯರಿಗೆ(Bollywood) ಅದು ಏನಾಗುತ್ತದೆಯೋ ಏನೋ.. ಹೀಗೆಲ್ಲ ಸುದ್ದಿ ಮಾಡಿ ಬಿಡುತ್ತಾರೆ. ಗಂಡನ ಹೆಸರು ಕೈ ಬಿಟ್ಟು ಈಗ ಸುದ್ದಿ ಮಾಡಿರುವುದು ಪ್ರಿಯಾಂಕಾ ಚೋಪ್ರಾ. ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಜೋನಾಸ್( Nick Jonas) ತಮ್ಮ ಇನ್ ಸ್ಟಾಗ್ರಾಂ (Social Media) ಖಾತೆಯಲ್ಲಿ ತಮ್ಮ ಹೆಸರಿನ ಜೊತೆಯಿದ್ದ ಪತಿಯ ಹೆಸರನ್ನು ತೆಗೆದುಹಾಕಿದ್ದು ಹಲವು ವದಂತಿಗಳಿಗೆ ಕಾರಣವಾಗಿದೆ.