ದಸರಾದಲ್ಲಿ ರಾಣಿಯಂತೆ ಕಂಗೊಳಿಸಿದರೂ, ಸಡಿಲ ಬ್ಲೂಸ್ನಿಂದ ಟ್ರೋಲ್ ಆದ ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್!
ದಕ್ಷಿಣ ಭಾರತ ಸಿನಿಮಾ ಕ್ಷೇತ್ರದಲ್ಲಿ ಕಣ್ಸನ್ನೆಯಿಂದಲೇ ಪ್ರಸಿದ್ಧಿಯಾಗಿರುವ ಹಾಗೂ ಮೊದಲ ಸಿನಿಮಾದಲ್ಲಿಯೇ ಲಿಪ್ಲಾಕ್ ಮಾಡಿದ ಪ್ರಿಯಾ ವಾರಿಯರ್ ಸಾಮಾಜಿಕ ಜಾಲತಾಣದಲ್ಲಿ ದಸರಾ ಹಬ್ಬದ ನಿಮಿತ್ತ ಫೋಟೋ ಶೂಟ್ ಮಾಡಿಸಿಕೊಂಡಿದ್ದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಡ್ರೆಸ್ನ ಟಾಪ್ ತುಂಬಾ ಸಡಿಲವಾಗಿದ್ದು, ಎಲ್ಲರೂ ಜೂಮ್ ಮಾಡಿ ನೋಡಿ ಲೈಕ್ ಕೊಡಿ ಎಂದು ನೆಟ್ಟಿಗನೊಬ್ಬ ಕಮೆಂಟ್ ಮಾಡಿದ್ದಾರೆ.
ಕಣ್ಸನ್ನೆ ಬೆಡಗಿ ಪ್ರಿಯಾ ಧರಿಸಿದ ಉಡುಪಿನಲ್ಲಿ ಅವರ ಟಾಪ್ ಅನ್ನು ತುಂಬಾ ಕೆಳಗೆ ಧರಿಸಿದ್ದಾರೆ. ಹೀಗಾಗಿ, ತುಂಬಾ ಹಾಟ್ ಆಗಿ ಕಾಣುವ ಪ್ರಿಯಾ ಪೋಸ್ಟ್ಗೆ ಎಲ್ಲರೂ ಫೋಟೋಗಳನ್ನು ಜೂಮ್ ಮಾಡಿ ನೋಡಿ ಲೈಕ್ ಕೊಡಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ದಸರಾ ಹಬ್ಬದ ಅಂಗವಾಗಿ ಮಿಂಚುವ ಡ್ರೆಸ್ ಹಾಗೂ ಕಲ್ಯಾಣ್ ಜ್ಯೂವೆಲರ್ಸ್ನ ಜ್ಯುವೆಲ್ಲರಿಯನ್ನು ಧರಿಸಿ ಪೋಸ್ ನೀಡಿರುವ ಪ್ರಿಯಾ ಮಹಾರಾಜ ಚೇರಿನಲ್ಲಿ ಕುಳಿತು ಮಹಾರಾಣಿಯಂತೆ ಕಂಗೊಳಿಸಿದ್ದಾರೆ.
ನಾನು ನಿನ್ನನ್ನು ಕಳೆದುಕೊಂಡಿದ್ದೇನೆ, ನೀನು ಆಮದುವಿನ ಹಾಗೆ ನನ್ನನ್ನು ಬಂದು ಸೇರಿಕೋ ಎನ್ನುವ ರೀತಿಯಲ್ಲಿ "तुझे याद कर लिया है, आयात की तरह….ಎಂದು ಹಿಂದಿಯಲ್ಲಿ ಟ್ಯಾಲ್ಲೈನ್ ಬರೆದುಕೊಂಡು ಫೋಟೋ ಪೋಸ್ಟ್ ಮಾಡಿಕೊಂಡಿದ್ದಾರೆ.
ಇನ್ನು ಕೆಲವರು ಇದು ನಿಮ್ಮ ಸಾಂಪ್ರದಾಯಿಕ ಉಡುಪಿನಲ್ಲಿಯೇ ಅತ್ಯಾಕರ್ಷಕ ಉಡುಗೆಯಾಗಿದೆ. ಅತ್ಯಂತ ಸುಂದರವಾದ ಮತ್ತು ಕಾಂತಿಯುವಾಗಿ ಕಾಣುತ್ತಿದ್ದೀರಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ನೀರಿನಲ್ಲಿ ಸೀರೆ ಧರಿಸಿ ಪೋಸ್ ಕೊಟ್ಟಿದ್ದೇನೋ ಸರಿ ಆದರೆ, ನೀನು ಹಾಕಿದ ಬ್ಲೌಸ್ ಬಟನ್ಗೂ ಸ್ವಲ್ಪ ರೆಸ್ಪೆಕ್ಟ್ ಕೊಡಮ್ಮಾ ಎಂದು ನೆಟ್ಟಿಗರು ಸಲಹೆ ನೀಡಿದ್ದರು.
ಇತ್ತೀಚೆಗೆ ಪ್ರಿಯಾವಾರಿಯರ್ ಕೇರಳ ಕುಟ್ಟಿ ಶೈಲಿಯಲ್ಲಿ ಸೀರೆ ಧರಿಸಿ ನೀರಲ್ಲಿ ಮಿಂದೆದ್ದು ಪೋಸ್ ಕೊಡುವ ಮೂಲಕ ತನ್ನ ಮೈಮಾಟವನ್ನು ಪ್ರದರ್ಶನ ಮಾಡಿದ್ದಳು. ಈ ಫೋಟೋಗೆ ನೆಟ್ಟಿಗರಿಂದ ಅತಹೆಚ್ಚಿನ ಲೈಕ್ಸ್ ಬಂದಿದ್ದವು.
ಆಗಾಗ್ಗೆ ತಮ್ಮ ಮೈಮಾಟದ ಫೋಟೋಗಳನ್ನು ಪ್ರದರ್ಶನ ಮಾಡುತ್ತಾ ಫ್ಯಾನ್ಸ್ಗಳನ್ನು ರಂಚಿಸುತ್ತಾರೆ. ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಪೋಟೋಗಳು ಸಖತ್ ವೈರಲ್ ಆಗುತ್ತವೆ.
ಇನ್ಸ್ಟಾಗ್ರಾಂನಲ್ಲಿ 7.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಪ್ರಿಯಾ ವಾರಿಯರ್ ಸಿನಿಮಾ ಮತ್ತು ಸಾಮಾಜಿಕ ಜಾಲತಾಣದಲ್ಲಿಯೂ ತುಂಬಾ ಬಿಜಿಯಾಗಿದ್ದಾರೆ.
ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರರಂಗದಲ್ಲಿ ನೆಲೆಯೂರುವ ಮುನ್ನವೇ ಕಣ್ಸನ್ನೆ ಟ್ರೇಲರ್ ಮೂಲಕ ರಾತ್ರೋರಾತ್ರಿ ಊಹೆಗೂ ಮೀರಿದ ಖ್ಯಾತಿಯನ್ನು ಗಳಿಸಿದರು.