Drugs Case: ಆರ್ಯನ್‌ಗೆ ಬೇಲ್ ಇಲ್ಲ: ಇದು ಕಿರುಕುಳ ಎಂದ ನಟಿ
ಬಾಲಿವುಡ್ ಕಿಂಗ್ ಖಾನ್ ಜೈಲು ವಾಸ ಈಗಾಗಲೇ 12 ದಿನವಾಯಿತು. ಬುಧವಾರವ ಮುಂದೂಡಲಾಗಿದ್ದ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಯಲ್ಲಿ ಮತ್ತೆ ಖಾನ್ ದಂಪತಿಗೆ ನಿರಾಸೆಯ ತೀರ್ಪು ಸಿಕ್ಕಿದೆ. ಆರ್ಯನ್ ಬೇಲ್ ತಿರಸ್ಕರಿಸಲ್ಪಟ್ಟಿದೆ
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ 23 ವರ್ಷದ ಮಗ ಆರ್ಯನ್ ಖಾನ್ ಗೆ ನ್ಯಾಯಾಲಯ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಮತ್ತೊಮ್ಮೆ ಜಾಮೀನು ನಿರಾಕರಿಸಿದೆ. ಮುಂಬೈ ಸೆಷನ್ಸ್ ಕೋರ್ಟ್ ಆದೇಶವನ್ನು ಬುಧವಾರದವರೆಗೆ ಕಾಯ್ದಿರಿಸಿ ಆರ್ಯನ್‌ನನ್ನು ಜೈಲಿಗೆ ಕಳುಹಿಸಿತ್ತು. ಆರ್ಯನ್ ಖಾನ್ 12 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ.
ಎನ್‌ಸಿಬಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ತಡವಾಗಿ ಬಂದ ನಂತರ ಜಾಮೀನು ವಿಚಾರಣೆಯು ಒಂದು ಗಂಟೆ ತಡವಾಗಿ ಎರಡನೇ ದಿನಕ್ಕೆ ಪುನರಾರಂಭಗೊಂಡಿತ್ತು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ ಆರ್ಯನ್ ಖಾನ್ ನಿಯಮಿತ ಡ್ರಗ್ಸ್ ಗ್ರಾಹಕ ಎಂದು ಹೇಳಿದ ನಂತರ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಈ ಬೆಳವಣಿಗೆಗಳ ಮಧ್ಯೆ ಸ್ಟಾರ್ ಪುತ್ರನಿಗೆ ಬಾಲಿವುಡ್ ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದು, ಈಗ ನಟಿ ತನಿಶಾ ಮುಖರ್ಜಿಯೂ ಶಾರೂಖ್ ಮಗನಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
Aryan Drugs Case: ಸೀಕ್ರೆಟ್ ಪೋಸ್ಟ್ ಶೇರ್ ಮಾಡಿದ ನಟಿ ರಿಯಾ..!
ಬಾಲಿವುಡ್‌ನ ಬಹುತೇಕ ಸೆಲೆಬ್ರಿಟಿಗಳು ಶಾರೂಖ್ ಮಗನ ಜೊತೆ ನಿಂತಿದ್ದು ಇದುವರೆಗೂ ಆರ್ಯನ್ ಜೈಲಿನಲ್ಲಿದ್ದು ದಿನೇ ದಿನೇ ಜಾಮೀನು ತಡವಾಗುತ್ತಿದೆ. ಈಗ ಕೇಸ್ ಬಗ್ಗೆ ಪ್ರತಿಕ್ರಿಯಿಸಿದರೋ ತನಿಶಾ ಅವರು ಆರ್ಯನ್ ಪರವಾಗಿ ಮಾತನಾಡಿದ್ದಾರೆ. ಆರ್ಯನ್ ಕೇಸ್‌ನಲ್ಲಿ ನಡೆಯುತ್ತಿರುವುದು ಕಿರುಕುಳವಲ್ಲದೆ ಬೇರೇನು ಅಲ್ಲ. ಅದಲ್ಲದೆ ಆ ಹುಡಗನಿಗೆ ಮೀಡಿಯಾ ಟ್ರಯಲ್ ಮಾಡೋ ಅವಕಾಶ ನೀಡಲಾಗುತ್ತಿದೆ. ಇದು ನಿಜವಾದ ಪತ್ರಿಕೋದ್ಯಮವಲ್ಲ ಎಂದಿದ್ದಾರೆ.
ನೀವು ಹೇಳುವಂತೆ ಕೇವಲ ಸೆನ್ಸೇಷನಲಿಸಂ ಅಥವಾ ಬಾಲಿವುಡ್ ಬ್ಯಾಶಿಂಗ್. ದುರದೃಷ್ಟವಶಾತ್, ನಮ್ಮ ಸ್ಟಾರ್‌ಗಳ ಕಡೆಗೆ ಜನರು ನಿರ್ದಯರಾಗಿದ್ದಾರೆ. ಇವುಗಳು ಸ್ಟಾರ್ ಕಿಡ್ ಆಗಿರುವುದರ ಸಾಧಕ -ಬಾಧಕಗಳು! ನಿಸ್ಸಂಶಯವಾಗಿ ಅವರಿಗೆ ಯಾವುದೇ ಸಹಾನುಭೂತಿ ಇಲ್ಲ. ಈ ದೇಶವು ನಮ್ಮೆಲ್ಲರದ್ದು ಮತ್ತು ಜನರು ಸಾಕ್ಷಿಯನ್ನು ನೋಡುವಾಗ ಹೆಚ್ಚು ಜಾಗರೂಕರಾಗಿರಬೇಕು. ನನ್ನ ಮಗುವಿಗೆ ಏನಾಗುತ್ತಿದೆ ಎಂದು ಯೋಚಿಸಬೇಕು. ನಾನು ಏನು ಮಾಡಲಿ? ಇದು ನ್ಯಾಯವೇ? ಎಂದು ಪ್ರಶ್ನಿಸಿದ್ದಾರೆ ನಟಿ.
ARYAN ARREST: ಜೈಲಿನ ಆಹಾರ ಬೇಡ: ಬಿಸ್ಕತ್ ತಿಂದು ಬದುಕ್ತಿದ್ದಾರಾ ಆರ್ಯನ್ ?
ಆರ್ಯನ್ ಖಾನ್ ಜಾಮೀನು ಸಿಗುವತನಕ ಜೈಲಿನಲ್ಲಿರಬೇಕಾದ್ದು ಅನಿವಾರ್ಯವಾಗಿದೆ. ಈ ನಡುವೆ ಶಾರೂಖ್ ಹಾಗೂ ಗೌರಿ ದಂಪತಿಗೆ ಬಾಲಿವುಡ್ ಸ್ಟಾರ್ಸ್ ಸಾಂತ್ವನ ಹೇಳುತ್ತಿದ್ದಾರೆ. ಅಕ್ಟೋಬರ್ 2ರಂದು ಮುಂಬೈ ಕರಾವಳಿಯಲ್ಲಿ ಐಷರಾಮಿ ಹಡಗಿನಲ್ಲಿ ರೇವ್ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ ನಡೆಸಿದ್ದು ಆರ್ಯನ್ ಖಾನ್, ಅರ್ಬಾಝ್ ಮರ್ಚೆಂಟ್, ಮುನ್ಮನ್ ಧಮೇಚಾ ಸೇರಿ 10ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.