ಫಸ್ಟ್ ಕಿಸ್ಸಿಂಗ್‌ ಸೀನ್: ಮಗಳು ಪೂಜಾಭಟ್‌ಗೆ ಮಹೇಶ್‌ ಭಟ್‌ ಕೊಟ್ಟಿದ್ರು ಸಲಹೆ

First Published Mar 10, 2021, 4:14 PM IST

ಬಾಲಿವುಡ್‌ ಚಲನಚಿತ್ರ ನಿರ್ಮಾಪಕ ಮತ್ತು ನಟಿ ಪೂಜಾ ಭಟ್ ಬಾಂಬೆ ಬೇಗಮ್ಸ್ ಎಂಬ ವೆಬ್ ಶೋ ಮೂಲಕ ಒಟಿಟಿ ವೇದಿಕಿಗೆ ಪಾದಾರ್ಪಣೆ ಮಾಡಿದ್ದಾರೆ. ಮಾರ್ಚ್ 8ರಂದು ಬಿಡುಗಡೆಯಾದ ಈ ಸೀರಿಸ್‌ನ ಪ್ರಚಾರದ ಸಮಯದ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ ನಟಿ. ತಂದೆ ಮತ್ತು ನಿರ್ದೇಶಕ ಮಹೇಶ್ ಭಟ್ ನಿರ್ಮಿಸಿದ ಡ್ಯಾಡಿ ಚಿತ್ರದ ಮೂಲಕ ಪೂಜಾ ತಮ್ಮ 17ನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಸಂದರ್ಶನದಲ್ಲಿ  ತಮ್ಮ ಫಸ್ಟ್ ಕಿಸ್ಸಿಂಗ್‌ ಸೀನ್‌ಗೆ ತಂದೆ ಹೇಳಿ ಕೊಟ್ಟ ಪಾಠವೇನೆಂದು ರಿವೀಲ್ ಮಾಡಿದ್ದಾರೆ.