ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ
ಈ ದಿನಗಳಲ್ಲಿ ಅದಿತಿ ರಾವ್ ಹೈದರಿ( Aditi Rao Hydari) ಮತ್ತು ಸಿದ್ಧಾರ್ಥ್ (Siddharth) ಜೋಡಿ ಚರ್ಚೆಯಲ್ಲಿದ್ದಾರೆ. ಈ ರೂಮರ್ಡ್ ದಂಪತಿ ಇತ್ತೀಚೆಗೆ ಎನಿಮಿ ಚಿತ್ರದ ಜನಪ್ರಿಯ ಹಾಡು ತುಮ್ ತುಮ್‌ಗೆ ನೃತ್ಯ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಜೋಡಿಯ ಕೆಮಿಸ್ಟ್ರಿಗೆ ಫುಲ್ ಫಿದಾ ಆಗಿದ್ದಾರೆ, ಅನೇಕರು ಇಂತಹ ಹೆಚ್ಚು ಫನ್ ವೀಡಿಯೊಗಳಿಗಾಗಿ ರಿಕ್ವೆಸ್ಟ್ ಮಾಡಿದ್ದಾರೆ. ಈ ಡ್ಯಾನ್ಸ್ ವೀಡಿಯೋಗೆ ಮುಂಚೆಯೇ, ಅದಿತಿ ಮತ್ತು ಸಿದ್ಧಾರ್ಥ್ ಪರಸ್ಪರರ ಸಾಮಾಜಿಕ ಮಾಧ್ಯಮಗಳಲ್ಲಿ ನಿಯಮಿತವಾಗಿ ಸದ್ದು ಮಾಡುತ್ತಲೇ ಇದ್ದಾರೆ. ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ

ಅಕ್ಟೋಬರ್ 2021 ರಲ್ಲಿ, ಅದಿತಿ ರಾವ್ ಹೈದರಿ ಅವರ ಜನ್ಮದಿನದ ಸಂದರ್ಭದಲ್ಲಿ, ಸಿದ್ಧಾರ್ಥ್ ಅವರು ಮಹಾ ಸಮುದ್ರದ ಸೆಟ್‌ಗಳಿಂದ ಫೋಟೋವನ್ನು ಹಂಚಿಕೊಂಡಿದ್ದಾರೆ. ಜನ್ಮದಿನದ ಶುಭಾಶಯಗಳು ಪಿಕ್ಸೀ ರಾಜಕುಮಾರಿ, ಅದಿತಿ ರಾವ್ ಹೈದರಿ. ನೃತ್ಯವನ್ನು ಮುಂದುವರಿಸಿ. ನಗುತ್ತಾ ಇರಿ' ಎಂದು ಬರೆದಿದ್ದಾರೆ. ಫೋಟೋದಲ್ಲಿ ಇಬ್ಬರು ಒಬ್ಬರ ಮೇಲೊಬ್ಬರು ಒರಗಿಕೊಂಡು ನಗುತ್ತಿರುವುದನ್ನು ನೋಡಬಹುದು.
ಒಂದು ವರ್ಷದ ನಂತರ, ಮತ್ತೆ ಅದಿತಿ ರಾವ್ ಹೈದರಿ ಅವರ ಹುಟ್ಟುಹಬ್ಬದಂದು, ಸಿದ್ಧಾರ್ಥ್ ಇಬ್ಬರ ಮತ್ತೊಂದು ಫೋಟೋವನ್ನು ಹಂಚಿಕೊಂಡರು ಮತ್ತು ಹೇಳಿದರು:'ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತ್‌ಡೇ ಪ್ರಿನ್ಸೆಸ್ ಆಫ್ ಹಾರ್ಟ್, ಅದಿತಿ ರಾವ್ ಹೈದರಿ... , ದೊಡ್ಡದು, ಚಿಕ್ಕದು , ಮತ್ತು ಇನ್ನೂ ನೋಡದ ನಿಮ್ಮ ಎಲ್ಲಾ ಕನಸುಗಳನ್ನು ಯಾವಾಗಲೂ ನಿಜವಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ, ಸೂರ್ಯನ ಸುತ್ತ ಅತ್ಯುತ್ತಮ ಪ್ರವಾಸ ಮಾಡಿ' ಎಂದು ಹೃದಯದ ಎಮೋಜಿಯೊಂದಿಗೆ ವಿಶ್ ಮಾಡಿದ್ದರು.
ನಂತರ ಕಳೆದ ವರ್ಷ ಸಿದ್ಧಾರ್ಥ್ ಹುಟ್ಟುಹಬ್ಬದಂದು, ಅದಿತಿ ರಾವ್ ಹೈದರಿ ಮಹಾ ಸಮುದ್ರದ ಮತ್ತೊಂದು ಸ್ಟಿಲ್ ಅನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ, 'ಹುಟ್ಟುಹಬ್ಬದ ಶುಭಾಶಯಗಳು ನನ್ನ ಪಿಕ್ಸೀ ಹುಡುಗ. ಯಾವಾಗಲೂ ಕನಸುಗಳು ಮತ್ತು ಯುನಿಕಾರ್ನ್‌ಗಳನ್ನು ಬೆನ್ನಟ್ಟಿ! ಯಾವಾಗಲೂ ಮಾಂತ್ರಿಕರಾಗಿರಿ, ಹುಚ್ಚು ಮತ್ತು ನಗು ತುಂಬಿ, ಯಾವಾಗಲೂ ನೀವಾಗಿರಿ. ಅಂತ್ಯವಿಲ್ಲದ ನಗು ಮತ್ತು ಸಾಹಸಗಳಿಗಾಗಿ ಧನ್ಯವಾದಗಳು! ನೀವು ಎಷ್ಟು ಪ್ರೀತಿಸಲ್ಪಟ್ಟಿದ್ದೀರಿ ಎಂದು ನಿಮಗೆ ಚೆನ್ನಾಗಿ ತಿಳಿದಿದೆ ಎಂದು ಹೃದಯದ ಎಮೋಜಿಗಳನ್ನು ಸೇರಿಸಿ ನಟಿ ಬರೆದಿದ್ದರು.
ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಅವರ ಚಿತ್ರದ ಪ್ರಚಾರದ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಅವರ ಸಹನಟ ಶರ್ವಾನಂದ್ ಕೂಡ ಜೊತೆಗೆ ಇದ್ದಾರೆ. ಈ ಫೋಟೋವನ್ನು ಸಿದ್ಧಾರ್ಥ್ ಹಂಚಿಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ಜೊತೆಯಾಗಿ ಗಿಡ ನೆಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು.
ಮೇಲಿನ ಫೋಟೋ ಜೊತೆ ಸಿದ್ಧಾರ್ಥ್ ಅವರು ಹಂಚಿಕೊಂಡ ಇಬ್ಬರ ಸೆಲ್ಫಿ ಕೂಡ ಸಖತ್ ವೈರಲ್ ಆಗಿದೆ. ಈ ಎರಡು ಫೋಟೋಗಳಿಗೆ 'ಮಹಾ ಸಮುದ್ರಂ ಪ್ರಚಾರಗಳು ಮುಂದುವರೆಯುತ್ತವೆ' ಎಂಬ ಶೀರ್ಷಿಕೆ ನೀಡಿದ್ದರು
ಅದಿತಿ ರಾವ್ ಹೈದರಿ ಈ ಹಿಂದೆ ನಟ ಸತ್ಯದೀಪ್ ಮಿಶ್ರಾ ಅವರನ್ನು ಮದುವೆಯಾಗಿದ್ದರು. ಸಿದ್ಧಾರ್ಥ್ ಈ ಹಿಂದೆ ಮೇಘನಾ ಅವರನ್ನು ಮದುವೆಯಾಗಿದ್ದರು. 2007 ರಲ್ಲಿ ದಂಪತಿ ಬೇರ್ಪಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.