Rajkummar Rao-Patralekhaa wedding: ವರನಿಗಾಗಿ ವಧುವಿನ ಲೆಹಂಗಾದಲ್ಲಿತ್ತು ಸ್ಪೆಷಲ್ ಮೆಸೇಜ್
- Rajkummar Rao-Patralekhaa wedding: ಗೆಳಯನಿಗಾಗಿ ಲೆಹಂಗಾದಲ್ಲಿ ಹೊಸ ಸಂದೇಶ ಹೊತ್ತು ತಂದ ವಧು
- Happy Married Life: ವರನ ಕಣ್ಣಲ್ಲಿ ಮಿಂಚು, ಪತ್ರಲೇಖಾಳ ಲೆಹಂಗಾದಲ್ಲಿದ್ದ ಮೆಸೇಜ್ ಏನದು ?
ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರು ತಮ್ಮ ಬಹುಕಾಲದ ಗೆಳತಿ ಪತ್ರಲೇಖಾ ಅವರನ್ನು ನ.15ರಂದು ವಿವಾಹವಾಗಿದ್ದಾರೆ. 11 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಈ ಕ್ಯೂಟ್ ಜೋಡಿ ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ಸತಿಪತಿಯಾಗಿದ್ದಾರೆ.
ದಂಪತಿ ಚಂಡೀಗಢದ ಒಬೆರಾಯ್ ಸುಖವಿಲಾಸ್ ಸ್ಪಾ ರೆಸಾರ್ಟ್‌ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಹೊಂದಿದ್ದರು. ರಾಜ್‌ಕುಮಾರ್ ಮತ್ತು ಪತ್ರಲೇಖಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವಿವಾಹದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್‌ನ ಆಚೆಗೆ ಶಾಶ್ವತ ಪ್ರೀತಿಯಲ್ಲಿ ಜನರು ನಂಬುವಂತೆ ಮಾಡಿದ್ದಾರೆ ಈ ಯುವಜೋಡಿ. ವಧು ಪತ್ರಲೇಖಾ ಅವರು ಅತ್ಯಾಕರ್ಷಕ ಕೆಂಪು ಬಣ್ಣದ ಲೆಹೆಂಗಾವನ್ನು( Bridal Lehanga)ಆಯ್ಕೆ ಮಾಡಿಕೊಂಡಿದ್ದಾರೆ.
ಅದರ ಮೇಲೆ ಚಿನ್ನದಲ್ಲಿ ಕೆಲವು ವಿವರಗಳನ್ನು ಬರೆಯಲಾಗಿದೆ. ತನ್ನ ವಧುವಿನ ಉಡುಗೆಯಲ್ಲಿ ಪತ್ರಲೇಖಾ ತಲೆಯ ಮೇಲೆ ಧರಿಸಿರುವ ಕೆಂಪು ದುಪಟ್ಟಾದಲ್ಲಿ ಬರೆದಿದ್ದ ಸಾಲು ಎಲ್ಲರ ಗಮನ ಸೆಳೆದಿದೆ.
ದುಪಟ್ಟಾವು ಬಂಗಾಳಿ ಭಾಷೆಯಲ್ಲಿ ಬರೆಯಲಾದ ಕೆಲವು ಸಾಲುಗಳನ್ನು ಹೊಂದಿದೆ. 'ಅಮಾರ್ ಪ್ರಾಣ್ ಭೋರಾ ಭಲೋಬಾಶಾ ಆಮಿ ತೋಮಯ್ ಸೋಂಪೋರ್ನಾ ಕೋರಿಲಂ' ಎಂದು ಬರೆಯಲಾಗಿದೆ. ನಾನು ನಿಮಗೆ ನನ್ನ ಪ್ರೀತಿಯನ್ನು ಪ್ರತಿಜ್ಞೆ ಮಾಡುತ್ತೇನೆ ಎಂಬುದು ಇದರ ಅರ್ಥ.
ರಾಜ್‌ಕುಮಾರ್ ರಾವ್ ಅವರು ಸಾಂಪ್ರದಾಯಿಕ ಬಿಳಿ ಬಣ್ಣದ ಶೆರ್ವಾನಿಗೆ ಗುಲಾಬಿ ಬಣ್ಣದ ದುಪಟ್ಟಾ ಮ್ಯಾಚ್ ಮಾಡಿದ್ದರು. ಕೆಂಪು ಪೇಟ ವರನ ಲುಕ್ ಕಂಪ್ಲೀಟ್ ಮಾಡಿತ್ತು
ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡ ರಾಜ್‌ಕುಮಾರ್, ಕೊನೆಗೂ 11 ವರ್ಷಗಳ ಪ್ರೀತಿ, ಪ್ರಣಯ, ಸ್ನೇಹ ಮತ್ತು ಮೋಜಿನ ನಂತರ, ನಾನು ಇಂದು ನನ್ನ ಆತ್ಮದ ಗೆಳೆತಿ, ನನ್ನ ಆತ್ಮೀಯ ಸ್ನೇಹಿತೆಯನ್ನು ಮದುವೆಯಾಗಿದ್ದೇನೆ. ಇಂದು ನನಗೆ ನಿಮ್ಮ ಪತಿ ಎಂದು ಕರೆಸಿಕೊಳ್ಳುವುದಕ್ಕಿಂತ ಹೆಚ್ಚಿನ ಸಂತೋಷವಿಲ್ಲ ಎಂದು ಬರೆದಿದ್ದಾರೆ.