MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಜನಪ್ರಿಯ ಕ್ರಿಕೆಟಿಗನ ಪ್ರೀತಿಯಲ್ಲಿ ಬಿದ್ದಿದ್ರು ನಟಿ ಮಾಧುರಿ ದೀಕ್ಷಿತ್… ಮ್ಯಾಚ್ ಫಿಕ್ಸಿಂಗ್ ನಿಂದ ಬ್ರೇಕಪ್!

ಜನಪ್ರಿಯ ಕ್ರಿಕೆಟಿಗನ ಪ್ರೀತಿಯಲ್ಲಿ ಬಿದ್ದಿದ್ರು ನಟಿ ಮಾಧುರಿ ದೀಕ್ಷಿತ್… ಮ್ಯಾಚ್ ಫಿಕ್ಸಿಂಗ್ ನಿಂದ ಬ್ರೇಕಪ್!

ಮಾಧುರಿ ದೀಕ್ಷಿತ್ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಅವರು ಭಾರತೀಯ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿ ಕೊನೆಯಾಗೋದಕ್ಕೆ ಮ್ಯಾಚ್ ಫಿಕ್ಸಿಂಗ್ ಕಾರಣವಾಯ್ತು.   

2 Min read
Author : Pavna Das
| Updated : Mar 27 2025, 04:02 PM IST
Share this Photo Gallery
  • FB
  • TW
  • Linkdin
  • Whatsapp
19

ನಟಿ ಮಾಧುರಿ ದೀಕ್ಷಿತ್  (Madhuri Dixit) ಬಾಲಿವುಡ್ ಸಿನಿಮಾ ಇಂಡಷ್ಟ್ರಿಯ ಅತ್ಯಂತ ಯಶಸ್ವಿ ಮತ್ತು ಸುಂದರ ನಟಿಯರಲ್ಲಿ ಒಬ್ಬರು. ಒಂದು ಕಾಲದಲ್ಲಿ ಆಕೆ ಕೇವಲ ಸಂಜಯ್ ದತ್ ನನ್ನು ಮಾತ್ರ ಅಲ್ಲ, ಜೊತೆಗೆ ಒಬ್ಬ ಕ್ರಿಕೆಟಿಗನನ್ನೂ ಪ್ರೀತಿಸುತ್ತಿದ್ದರು, ಆದರೆ ಆ ಪ್ರೀತಿ ಕೂಡ ತುಂಬಾ ಸಮಯ ಮುಂದುವರೆಯಲಿಲ್ಲ. 
 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

90 ರ ದಶಕದಲ್ಲಿ, ಟೀಮ್ ಇಂಡಿಯಾದ ಮಾಜಿ ಉಪನಾಯಕ ಅಜಯ್ ಜಡೇಜಾ ಮತ್ತು ನಟಿ ಮಾಧುರಿ ದೀಕ್ಷಿತ್ ಅವರ ಪ್ರಣಯದ ಸುದ್ದಿ ಹೆಚ್ಚು ಚರ್ಚೆಯಾಗಿತ್ತು ಆದರೆ ಆ ಸಂದರ್ಭದಲ್ಲಿ ಸದ್ದು ಮಾಡಿದ್ದ ಒಂದು ಸುದ್ದಿ, ಇಬ್ಬರ ರೊಮ್ಯಾಂಟಿಕ್ ಲೈಫಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. 
 

39

ಬಾಲಿವುಡ್ ಮತ್ತು ಕ್ರಿಕೆಟ್ (Bollywood and Cricket) ನಡುವಿನ ಸಂಬಂಧ ತುಂಬಾ ಹಳೆಯದು. ಅನೇಕ ಕ್ರಿಕೆಟಿಗರು ಬಾಲಿವುಡ್ ಸ್ಟಾರ್ ನಟಿಯರನ್ನು ವಿವಾಹವಾಗಿದ್ದಾರೆ. 90 ರ ದಶಕದಲ್ಲಿ, ಮಾಧುರಿ ಮತ್ತು ಜಡೇಜಾ ಅವರ ಸಂಬಂಧದ ಬಗ್ಗೆ ಭಾರಿ ಚರ್ಚೆಯಾಗುತ್ತಿತ್ತು.  
 

49

ಜಡೇಜಾ (Ajay Jadeja) ಬಾಲಿವುಡ್ ಸೆನ್ಸೇಷನ್ ಆಗಿರುವ ಹಾಗೂ ಸೌಂದರ್ಯ ದೇವತೆಯಂತಿರುವ ಮಾಧುರಿ ಅವರನ್ನು ಪ್ರೀತಿಸುತ್ತಿದ್ದರು. ಮತ್ತೊಂದೆಡೆ, ಮಾಧುರಿ ಕೂಡ ಜಡೇಜಾ ಅವರನ್ನು ಮದುವೆಯಾಗಲು ಬಯಸಿದ್ದರು. ಅಷ್ಟಕ್ಕೂ ಈ ಪ್ರೀತಿ ಶುರುವಾಗಿದ್ದು ಹೇಗೆ? 
 

59

ಫೋಟೋಶೂಟ್‌ನಿಂದ ಪ್ರಾರಂಭವಾಯಿತು ಪ್ರೇಮ
ಆ ಸಮಯದಲ್ಲಿ ಜಡೇಜಾ ಟೀಮ್ ಇಂಡಿಯಾದ ಉಪನಾಯಕರಾಗಿದ್ದರು ಮತ್ತು ಹುಡುಗಿಯರಿಗಂತೂ ಜಡೇಜಾ ಅಂದ್ರೆ ಕ್ರೇಜ್ ಇತ್ತು, ಮಾಧುರಿ ಮತ್ತು ಅಜಯ್ ಜಡೇಜಾ ಅವರ ಪ್ರೇಮಕಥೆಯು ಮ್ಯಾಗಜಿನ್ ಒಂದರ ಫೋಟೋಶೂಟ್  (photoshoot) ಸಮಯದಲ್ಲಿ ಪ್ರಾರಂಭವಾಯಿತು.

69

ಜಡೇಜಾ ರಾಜಮನೆತನದಿಂದ ಬಂದವರು
ಇಬ್ಬರೂ ಪತ್ರಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಡೇಟಿಂಗ್ ವದಂತಿಗಳು ಕೂಡ ತೀವ್ರಗೊಂಡವು. ಅಜಯ್ ಜಡೇಜಾ ರಾಜಮನೆತನಕ್ಕೆ ಸೇರಿದವರಾಗಿದ್ದರಿಂದ, ಮದುವೆಯ ವಿಷಯಕ್ಕೆ ಬಂದಾಗ, ಜಡೇಜಾ ಅವರ ಕುಟುಂಬವು ಅವರ ಮಾತನ್ನು ಕೇಳಲಿಲ್ಲ ಮತ್ತು ಮದುವೆಯನ್ನು ಸಂಪೂರ್ಣವಾಗಿ ನಿರಾಕರಿಸಿತ್ತು ಎನ್ನಲಾಗಿದೆ. 

79

ಆ ಸಂಬಂಧ 1999 ರಲ್ಲಿ ಕೊನೆಗೊಂಡಿತು
ಏತನ್ಮಧ್ಯೆ, ಜಡೇಜಾ ಅವರ ವೃತ್ತಿಜೀವನವೂ ಸಹ ಬಹು ದೊಡ್ಡ ತಿರುವು ಪಡೆದುಕೊಂಡಿತು, ಜಡೇಜಾ ಟೀಮ್ ಇಂಡಿಯಾಕ್ಕೆ ಭಾರವಾಗತೊಡಗಿದರು ಮತ್ತು 1999 ರಲ್ಲಿ, ಅಜಯ್ ಜಡೇಜಾ ಮತ್ತು ಮಾಧುರಿ ದೀಕ್ಷಿತ್ ನಡುವಿನ ಸಂಬಂಧವು ಕೊನೆಗೊಂಡಿತು.

89

ಮ್ಯಾಚ್ ಫಿಕ್ಸಿಂಗ್ ನಿಂದಾಗಿ ಸಂಬಂಧ ಮುರಿದುಬಿತ್ತು.
ಜಡೇಜ ಮ್ಯಾಚ್ ಫಿಕ್ಸಿಂಗ್‌ನಲ್ಲಿ (match fixing) ಸಿಕ್ಕಿಬಿದ್ದರು, ಹೀಗಾಗಿ ಅವರ ಪ್ರೇಮಕಥೆ ಕನಸಿನಂತೆ ಅಪೂರ್ಣವಾಗಿಯೇ ಉಳಿಯಿತು. ಜಡೇಜಾ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದ ವಿಷಯ ಸಾಕಷ್ಟು ವಿವಾದವನ್ನು ಸೃಷ್ಟಿಸಿತು ಮತ್ತು ಇದಾದ ನಂತರ, ಮಾಧುರಿ ಕುಟುಂಬವೂ ಕೂಡ ಜಡೇಜಾರಿಂದ ದೂರ ಉಳಿಯಿತು. 

99

1455 ಕೋಟಿ ನಿವ್ವಳ ಮೌಲ್ಯ
ಆ ಸಮಯದಲ್ಲಿ ರಾಜಮನೆತನದವರಾದ ಅಜಯ್ ಜಡೇಜಾ ಅವರನ್ನು ಜಾಮ್ನಗರದ ಮಹಾರಾಜ ಎಂದು ಘೋಷಿಸಲಾಯಿತು ಮತ್ತು ಇದರಿಂದಾಗಿ ಅವರು ಆಸ್ತಿ ಮೌಲ್ಯ ಕೂಡ ಹೆಚ್ಚಾಯಿತು. ಈಗ ಅವರು 1455 ಕೋಟಿಗಳ ಮಾಲೀಕರಾಗಿದ್ದಾರೆ, ಮಾಧುರಿ ಮತ್ತು ಅಜಯ್ ವಿವಾಹವಾಗಿದ್ದರೆ, ನಟಿ ಇಂದು ಹಲವು ಕೋಟಿಗಳ ಒಡೆಯರಾಗುತ್ತಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕ್ರಿಕೆಟ್
ಸಂಬಂಧಗಳು
ಬಾಲಿವುಡ್
 
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd TEST • SA vs AUS
Result
SASA
329 & 387
AUSAUS
429 & 111
SA won by 176 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
Latest Videos
Recommended Stories
Recommended image1
ವಯಸ್ಸು ಹೆಚ್ಚಾದರೂ ಕಡಿಮೆಯಾಗದ ಅಂದ: ಬ್ಲ್ಯಾಕ್ ಡ್ರೆಸ್‌ನಲ್ಲಿ ನಟಿ ನಯನತಾರಾ ಕಮಾಲ್
Recommended image2
ಹಣಕ್ಕಾಗಿ ಮಾಡುವುದಿಲ್ಲ, ಆದ್ರೆ ಥೆರಪಿ ಪಡೆಯಲು ಆರಂಭಿಸಿದೆ: 'ನಟ ಸಾರ್ವಭೌಮ' ನಟಿ ಭಾವುಕ!
Recommended image3
ಇಬ್ಬರು ಮಕ್ಕಳ ತಾಯಿಯಾಗಿ ನಟಿಸಿದ ಕೆಜಿಎಫ್ ನಟಿ: ಹೊಸ ಪಾತ್ರದ ಬಗ್ಗೆ ಶ್ರೀನಿಧಿ ಶೆಟ್ಟಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved