- Home
- Entertainment
- Cine World
- ಫುಲ್ ಫ್ಲಾಪ್ ಸಿನಿಮಾ 9 ವರ್ಷ ಬಳಿಕ ಯೂಟ್ಯೂಬ್‌ನಲ್ಲಿ 1 ಬಿಲಿಯನ್ ವೀಕ್ಷಣೆ, ಗಂಗ್ನಮ್ ಸ್ಟೈಲ್ ದಾಖಲೆ ಬ್ರೇಕ್
ಫುಲ್ ಫ್ಲಾಪ್ ಸಿನಿಮಾ 9 ವರ್ಷ ಬಳಿಕ ಯೂಟ್ಯೂಬ್‌ನಲ್ಲಿ 1 ಬಿಲಿಯನ್ ವೀಕ್ಷಣೆ, ಗಂಗ್ನಮ್ ಸ್ಟೈಲ್ ದಾಖಲೆ ಬ್ರೇಕ್
9 ವರ್ಷಗಳ ಹಿಂದೆ ಸಿನಿಮಾ ಬಿಡುಗಡೆಯಾಗಿತ್ತು. ಹಿಂದಿಯಿಂದ ರೀಮೇಕ್ ಮಾಡಿದ ಸಿನಿಮಾ ಸಂಪೂರ್ಣ ಫ್ಲಾಪ್ ಆಗಿತ್ತು. ಹಾಕಿದ ದುಡ್ಡು ಬಂದಿರಲಿಲ್ಲ. ಆದರೆ 9 ವರ್ಷ ಬಳಿಕ ಯೂಟ್ಯೂಬ್‌ನಲ್ಲಿ ಬರೋಬ್ಬರಿ 1 ಬಿಲಿಯನ್ ವೀಕ್ಷಣೆ ಕಂಡು ವಿಶ್ವದಾಖಲೆ ಬರೆದಿದೆ.

ಗಂಗ್ನಮ್ ಸ್ಟೈಲ್ ಮ್ಯೂಸಿಕ್ ವಿಡಿಯೋ ದಾಖಲೆ ಸರಿಗಟ್ಟಿದ ಸಿನಿಮಾ
ಚಿತ್ರಮಂದಿರಗಳಲ್ಲಿ ಸಿನಿಮಾ ರೀಲಿಸ್ ಮಾಡಿ ದುಡ್ಡು ಎಣಿಸುವ ಕಾಲದಿಂದ ಇದೀಗ ಒಟಿಟಿ, ಅಮೇಜಾನ್ ಪ್ರೈಂ ಸೇರಿದಂತೆ ಆನ್‌ಲೈನ್ ಮೂಲಕ ಸಿನಿಮಾ ಬಿಡುಗಡೆ ಮಾಡಿ ದುಡ್ಡು ಗಳಿಸುವ ಪದ್ಧತಿ ಹೆಚ್ಚಾಗಿದೆ. ಇದರ ಜೊತೆಗೆ ಯೂಟ್ಯೂಬ್‌ನಲ್ಲಿ ಸಿನಿಮಾ ಓಡಿಸಿಯೂ ನಿರ್ಮಾಪಕರು ಹಾಕಿದ ದುಡ್ಡು ಮರಳಿ ಗಳಿಸುತ್ತಾರೆ. ಆದರೆ 9 ವರ್ಷಗಳ ಹಿಂದೆ ಈ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಫ್ಲಾಪ್ ಆಗಿತ್ತು. ಇದೀಗ ಈ ಸಿನಿಮಾ ವಿಶ್ವದಾಖಲೆ ಬರೆದಿದೆ. ವಿಶೇಷ ಏನು ಗೊತ್ತಾ ಪಿಎಸ್‌ವೈ ಮ್ಯೂಸಿಕ್ ವಿಡಿಯೋ ಗಂಗ್ನಮ್ ಸ್ಟೈಲ್ ವಿಶ್ವದಾಖಲೆಯನ್ನು ಸರಿಗಟ್ಟಿದೆ.
1 ಬಿಲಿಯನ್ ವೀಕ್ಷಣೆ ದಾಖಲೆ
ಬಾಲಿವುಡ್ ಸಿನಿಮಾದಲ್ಲಿ ಯಶಸ್ಸಿಯಾಗಿದ್ದ ಸಿನಿಮಾವನ್ನು ತೆಲುಗಿನಲ್ಲಿ ಜಯ ಜಾನಕಿ ನಾಯಕ ಖೂನ್ಕರ್ ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು. ರೊಮ್ಯಾಂಟಿಕ್ ಡ್ರಾಮಾ ಸಿನಿಮಾವನ್ನು ಬೊಯಪಟ್ಟಿ ರಾಜು ನಿರ್ದೇಶನ ಮಾಡಿದ್ದರು. ಸಿನಿಮಾ ಬಿಡುಗಡೆಯಾದ ಎರಡು ವರ್ಷಗಳ ಬಳಿಕ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಇದೀಗ ಬರೋಬ್ಬರಿ 1 ಬಿಲಿಯನ್ ವೀಕ್ಷಣೆ ಕಂಡಿದೆ. ಈ ಮೂಲಕ ಯೂಟ್ಯೂಬ್‌ನಲ್ಲಿ 1 ಬಿಲಿಯನ್ ವೀಕ್ಷಣೆ ಕಂಡ ಮೊದಲ ಸಿನಿಮಾ ಅನ್ನೋ ದಾಖಲೆ ಬರೆದಿದೆ.
ಗಂಗ್ನಮ್ ಸ್ಟೈಲ್ ಮೊದಲ ಬಾರಿಗೆ ಯೂಟ್ಯೂಬ್‌ನಲ್ಲಿ ದಾಖಲೆ
ಪಿಎಸ್‌ವೈ ಹೊರತಂದ ಮ್ಯೂಸಿಕ್ ಆಲ್ಬಮ್ ಗಂಗ್ನಮ್ ಸ್ಟೈಲ್ ವಿಡಿಯೋ ಯೂಟ್ಯೂಬ್‌ನಲ್ಲಿ 1 ಬಿಲಿಯನ್ ವೀಕ್ಷಣೆ ದಾಖಲೆ ಕಂಡಿದೆ. ಇದಾದ ಬಳಿಕ ಇದೇ ಮೊದಲ ಬಾರಿಗೆ ಸಿನಿಮಾ ಒಂದು ಯೂಟ್ಯೂಬ್‌ನಲ್ಲಿ 1 ಬಿಲಿಯನ್ ವೀಕ್ಷಣೆ ಕಾಣುವ ಮೂಲಕ ವಿಶ್ವದಾಖಲೆ ಬರೆದಿದೆ.
40 ಕೋಟಿ ರೂಾಯಿಯಲ್ಲಿ ನಿರ್ಮಾಣವಾದ ಸಿನಿಮಾ
ಈ ತೆಲುಗು ಸಿನಿಮಾ ಬರೋಬ್ಬರಿ 40 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಆದರೆ ಬಿಡುಗಡೆಯಾಗಿ ಗಳಿಸಿದ್ದು ಕೇವಲ 20 ಕೋಟಿ ರೂಪಾಯಿ ಮಾತ್ರ. ಅರ್ಧಕ್ಕರ್ಧ ನಷ್ಟವಾಗಿತ್ತು. 9 ವರ್ಷದ ಹಿಂದೆ ಆದ ನಷ್ಟವನ್ನು ಇದೀಗ ಯೂಟ್ಯೂಬ್ ಮೂಲಕ ನಿರ್ಮಾಪಕ ವಸೂಲಿ ಮಾಡುತ್ತಿದ್ದಾರೆ.
2017ರಲ್ಲಿ ಬಿಡುಗಡೆಯಾದ ಸಿನಿಮಾ
ಜಯ ಜಾನಕಿ ನಾಯಕ ಸಿನಿಮಾ 2017ರಲ್ಲಿ ಬಿಡುಗಡೆಯಾಗಿತ್ತು. 2019ರಲ್ಲಿ ಯೂಟ್ಯೂಬ್‌ಗೆ ಅಪ್ಲೋಡ್ ಮಾಡಲಾಗಿತ್ತು. ಜಗಪತಿ ಬಾಬು, ತರುಣ್ ಅರೋರಾ, ಪ್ರಗ್ಯಾ ಜೈಸ್ವಾಲ್, ಶರತ್ ಕುಮಾರ್, ನಂದು, ಸುಮನ್, ಜಯಪ್ರಕಾಶ್, ವಾಣಿ ವಿಶ್ವನಾಥ್ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಸಿನಿಮಾದಲ್ಲಿ ನಟಿಸಿತ್ತು.
ಸಂಭ್ರಮದಲ್ಲಿ ಚಿತ್ರತಂಡ
ಚಿತ್ರಮಂದಿರಗಳಲ್ಲಿ ಸೋಲು ಕಂಡ ಸಿನಿಮಾ ಇದೀಗ ಯೂಟ್ಯೂಬ್‌ನಲ್ಲಿ ಬರೋಬ್ಬರಿ 100 ಕೋಟಿ ವೀಕ್ಷಣೆ ಕಾಣುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಮೂಲಕ ಚಿತ್ರತಂಡ ಅತೀವ ಸಂತಸ ವ್ಯಕ್ತಪಡಿಸಿದೆ. ನಾವು ಹಾಕಿದ ಶ್ರಮಕ್ಕೆ ಅಂದು ಪ್ರತಿಫಲ ಸಿಗಲಿಲ್ಲ. ಆದರೆ ಇದೀಗ ಪ್ರತಿಫಲ ಸಿಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

