Niharika Konidela: 'ಬದುಕಲು ಬಿಡಿ' ಹೊಸ ಪೋಸ್ಟ್ ಮೂಲಕ ವಿಚ್ಛೇದನ ದೃಢ ಪಡಿಸಿದ್ರಾ 'ಮೆಗಾ' ಕುಟಂಬದ ಮಗಳು?
'ಬದುಕಲು ಬಿಡಿ' ಎಂದು ಹೊಸ ಪೋಸ್ಟ್ ಶೇರ್ ಮಾಡುವ ಮೂಲಕ 'ಮೆಗಾ' ಕುಟಂಬದ ಮಗಳು ನಿಹಾರಿಕಾ ವಿಚ್ಛೇದನ ದೃಢ ಪಡಿಸಿದ್ರಾ ಎನ್ನುವ ಅನುಮಾನ ಮೂಡಿದೆ.
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಹೋದರನ ಮಗಳು ನಿಹಾರಿಕಾ ಮದುವೆಯಾಗಿ 2 ವರ್ಷಗಳಾಗಿದೆ ಅಷ್ಟೆ. ಆದರೆ ಆಗಲೇ ಪತಿಯಿಂದ ದೂರ ಆಗುತ್ತಿದ್ದಾರೆ, ವಿಚ್ಛೇದನ ಪಡೆದಿದ್ದಾರೆ ಎನ್ನುವ ಮಾತು ಕಳೆದ ಕೆಲವು ತಿಂಗಳಿಂದ ಕೇಳಿ ಬರುತ್ತಿದೆ. 2020 ಡಿಸೆಂಬರ್ ನಲ್ಲಿ ನಿಹಾರಿಕಾ, ಚೈತನ್ಯ ಜೊನ್ನಲಗಡ್ಡ ಜೊತೆ ಅದ್ದೂರಿಯಾಗಿ ಮದುವೆಯಾಗಿದ್ದರು. ಉದಯಪುರದಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಇಬ್ಬರೂ ದಾಂಪತ್ಯಕ್ಕೆ ಕಾಲಿಟ್ಟರು.
ಆದರೀಗ ಎರಡು ವರ್ಷ ಆಗುತ್ತಿದ್ದಂತೆ ಇಬ್ಬರೂ ವಿಚ್ಚೇದನ ಪಡೆಯುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಚೈತನ್ಯ ಮತ್ತು ನಿಹಾರಿಕಾ ದಾಂಪತ್ಯದಲ್ಲಿ ಯಾವುದು ಸರಿ ಇಲ್ಲ, ಇಬ್ಬರೂ ಆಗಲೇ ದೂರ ದೂರ ಆಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ವದಂತಿಗೆ ಪುಷ್ಠಿ ನೀಡುವಂತೆ ನಿಹಾರಿಕಾ ಸಾಮಾಜಿಕ ಜಾಲತಾಣದಲ್ಲಿ ಪತಿ ಚೈತನ್ಯ ಅವರನ್ನು ಇನ್ಸ್ಟಾಗ್ರಾಮ್ ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಅನೇಕ ಪೋಸ್ಟ್‌ಗಳನ್ನು ಸಹ ಡಿಲೀಟ್ ಮಾಡಿದ್ದಾರೆ.
ಸದ್ಯ ನಿಹಾರಿಕಾ ಮತ್ತೊಂದು ಪೋಸ್ಟ್ ಶೇರ್ ಮಾಡಿದ್ದಾರೆ. ಬದುಕಿ, ಬದುಕಲು ಬಿಡಿ ಎಂದು ಹೇಳಿದ್ದಾರೆ. ವಿಚ್ಛೇದನ ವದಂತಿ ನಡುವೆ ಈ ಪೋಸ್ಟ್ ಹಾಕಿರುವುದು ಅನುಮಾನ ಮತ್ತಷ್ಟು ಬಲವಾಗುವಂತೆ ಮಾಡಿದ್ದಾರೆ.
ವರ್ಕೌಟ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿರುವ ನಿಹಾರಿಕಾ ಒಂದಿಷ್ಟು ಸಾಲುಗಳನ್ನು ಹಂಚಿಕೊಂಡಿದ್ದಾರೆ. ನಿಹಾರಿಕಾ ಶೇರ್ ಮಾಡಿರುವ ಪೋಸ್ಟ್ ನಲ್ಲಿ ಬರುವ ಒಂದು ಸಾಲು ಬದುಕಲು ಬಿಡಿ ಎಂದು ಕೇಳಿದ್ದಾರೆ.
'ನಿಮ್ಮ ಶಕ್ತಿಯನ್ನು ರಕ್ಷಿಸಿ, ನೀವು ಸಮರ್ಥರು, ನಿಮ್ಮ ಬಗ್ಗೆ ದಯೆ ತೋರಿ, ನೀವು ಯೋಚಿಸುವುದಕ್ಕಿಂತ ಬಲಶಾಲಿ, ನಿಮ್ಮ ನಿದ್ರೆಗೆ ಆದ್ಯತೆ ನೀಡಿ, ನೀರನ್ನು ಕುಡಿಯಿರಿ, ಬದುಕಿ ಮತ್ತು ಇತರರನ್ನು ಬದುಕಲು ಬಿಡಿ' ಎಂದು ಹೇಳಿದ್ದಾರೆ.