- Home
- Entertainment
- Cine World
- Bollywood Pairs: 2025ರ ಆರಂಭದಲ್ಲಿ ತೆರೆ ಮೇಲೆ ಕಮಾಲ್ ಮಾಡಲು ರೆಡಿಯಾದ ಜೋಡಿಗಳಿವು!
Bollywood Pairs: 2025ರ ಆರಂಭದಲ್ಲಿ ತೆರೆ ಮೇಲೆ ಕಮಾಲ್ ಮಾಡಲು ರೆಡಿಯಾದ ಜೋಡಿಗಳಿವು!
ಬಾಲಿವುಡ್‌ನಲ್ಲಿ ಹೊಸ ಜೋಡಿಗಳ ಸಂಚಲನ! ಸಿದ್ಧಾರ್ಥ್-ಜಾನ್ವಿಯಿಂದ ಶಾಹಿದ್-ತ್ರಿಪ್ತಿವರೆಗೆ, ಯಾವ ಹೊಸ ಜೋಡಿಗಳು ತೆರೆಯ ಮೇಲೆ ಬೆಂಕಿ ಹಚ್ಚಲಿದ್ದಾರೆ ನೋಡಿ.

ಸಿದ್ಧಾರ್ಥ್ ಮಲ್ಹೋತ್ರ, ಜಾನ್ವಿ ಕಪೂರ್
ಸಿದ್ಧಾರ್ಥ್ ಮಲ್ಹೋತ್ರ ಮತ್ತು ಜಾನ್ವಿ ಕಪೂರ್ ‘ಪರಮ್ ಸುಂದರಿ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರ ರೊಮ್ಯಾಂಟಿಕ್ ಕೆಮಿಸ್ಟ್ರಿ ನೋಡಲು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.
ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ
'ಸಯ್ಯಾರ' ಚಿತ್ರದಲ್ಲಿ ಅಹಾನ್ ಪಾಂಡೆ, ಅನೀತ್ ಪಡ್ಡಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಮೋಹಿತ್ ಸೂರಿ ನಿರ್ದೇಶಿಸಿದ್ದಾರೆ.
ಅಜಯ್ ದೇವಗನ್ ಮತ್ತು ಮೃಣಾಲ್ ಠಾಕೂರ್
ಅಜಯ್ ದೇವಗನ್ ಮತ್ತು ಮೃಣಾಲ್ ಠಾಕೂರ್ 'ಸನ್ ಆಫ್ ಸರ್ದಾರ್ ೨' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ 2012ರ 'ಸನ್ ಆಫ್ ಸರ್ದಾರ್' ಸಿನಿಮಾದ ಮುಂದುವರಿದ ಭಾಗ.
ರಿತಿಕ್ ರೋಷನ್, ಕಿಯಾರಾ ಅಡ್ವಾಣಿ
'ವಾರ್ 2' ಸಿನಿಮಾದಲ್ಲಿ ರಿತಿಕ್ ರೋಷನ್, ಕಿಯಾರಾ ಅಡ್ವಾಣಿ ಧೂಳೆಬ್ಬಿಸಲಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಆಯುಷ್ಮಾನ್ ಖುರಾನ, ರಶ್ಮಿಕಾ ಮಂದಣ್ಣ
ಆಯುಷ್ಮಾನ್ ಖುರಾನ, ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ 'ಥಾಮ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
ಹರ್ಷವರ್ಧನ್ ರಾಣೆ, ಸೋನಂ ಬಾಜ್ವಾ
ಹರ್ಷವರ್ಧನ್ ರಾಣೆ, ಸೋನಂ ಬಾಜ್ವಾ 'ಏಕ್ ದೀವಾನೇ ಕಿ ದೀವಾನಗಿ' ಸಿನಿಮಾದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಲಿದ್ದಾರೆ.
ಶಾಹಿದ್ ಕಪೂರ್, ತ್ರಿಪ್ತಿ ಡಿಮ್ರಿ
ಶಾಹಿದ್ ಕಪೂರ್, ತ್ರಿಪ್ತಿ ಡಿಮ್ರಿ ವಿಶಾಲ್ ಭಾರದ್ವಾಜ್ ಅವರ ಮುಂಬರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.