ಫ್ಯಾಷನ್ ಶೋನಲ್ಲಿ ಮಾಡೆಲ್ ಉರ್ಫಿ ಜಾದವ್ ಜೊತೆ ಅಂಬಾನಿ ಭಾವೀ ಸೊಸೆ!
ಬಾಲಿವುಡ್ನ ಅತ್ಯಂತ ಜನಪ್ರಿಯ ಫ್ಯಾಷನ್ ಡಿಸೈನರ್ ಜೋಡಿಗಳಲ್ಲಿ ಒಂದಾದ ಅಬು ಜಾನಿ-ಸಂದೀಪ್ ಖೋಸ್ಲಾ ಅವರು ಇತ್ತೀಚೆಗೆ ಮಾರ್ಚ್ 2, ಗುರುವಾರ ಮುಂಬೈನಲ್ಲಿ ವಿಶೇಷ ಕಾರ್ಯಕ್ರಮವನ್ನು ನಡೆಸಿದರು, ಅವರು ತಮ್ಮ ಇತ್ತೀಚಿನ ಸಂಗ್ರಹವನ್ನು 'ಮೇರಾ ನೂರ್ ಹೈ ಮಶೂರ್' ಎಂದು ಬಿಡುಗಡೆ ಮಾಡಿದರು. ಹೆಸರಾಂತ ಸ್ಟಾರ್ ಹೊಟೇಲ್ನಲ್ಲಿ ನಡೆದ ಅದ್ಧೂರಿ ಲಾಂಚ್ ಕಾರ್ಯಕ್ರಮದಲ್ಲಿ ನೀತು ಕಪೂರ್, ಹುಮಾ ಖುರೇಷಿ, ಉರ್ಫಿ ಜಾವೇದ್, ಸೋನಾಲಿ ಬೇಂದ್ರೆ, ಮುಕೇಶ್ ಅಂಬಾನಿ ಭಾವೀ ಸೊಸೆ ರಾಧಿಕಾ ಮರ್ಚೆಂಟ್ ಸೇರಿ ಮುಂತಾದವರು ಪಾಲ್ಗೊಂಡು ಗಮನ ಸೆಳೆದರು.
ಮುಂಬೈನಲ್ಲಿ ನಡೆದ ಅಬು ಜಾನಿ ಸಂದೀಪ್ ಖೋಸ್ಲಾ ಅವರ ಫ್ಯಾಶನ್ ಶೋನಲ್ಲಿ ನೀತು ಕಪೂರ್, ಹುಮಾ ಖುರೇಷಿ, ಉರ್ಫಿ ಜಾವೇದ್ ಮತ್ತು ಇತರ ಅನೇಕ ಸೆಲೆಬ್ರಿಟಿಗಳು ತಮ್ಮ ಸುಂದರ ಅವತಾರಗಳೊಂದಿಗೆ ಇವೆಂಟ್ನ ಗ್ಲಾಮರ್ ಮತ್ತು ವರ್ಚಸ್ಸನ್ನು ಹೆಚ್ಚಿಸಿದರು.
ಈ ಗ್ರ್ಯಾಂಡ್ ಈವೆಂಟ್ನಲ್ಲಿ ಭಾಗವಹಿಸಿದ್ದ ನೀತು ಕಪೂರ್, ಹ್ಯಾಂಡ್ ಎಂಬ್ರಾಯ್ಡರಿ ಮತ್ತು ಮಿರರ್ ವರ್ಕ್ ಹೊ,ಮದಿರುವ ಬಿಳಿ ಕಸೂತಿ ಕುರ್ತಾದಲ್ಲಿ ಸುಂದರವಾಗಿ ಕಾಣುತ್ತಿದ್ದರು. ನೀತು ಅವರು ತಮ್ಮ ಕುರ್ತಾವನ್ನು ಸಂಪೂರ್ಣ ಎಂಬ್ರಾಯಿಡರಿ ಇರುವ ಮ್ಯಾಚಿಂಗ್ ದುಪಟ್ಟಾದೊಂದಿಗೆ ಪೇರ್ ಮಾಡಿದ್ದರು.ನೀತು ಕಪೂರ್ ತಮ್ಮ ಲುಕ್ ಅನ್ನು ಡ್ಯುಯಲ್-ಟೋನ್ ಸ್ಟೇಟ್ಮೆಂಟ್ ನೆಕ್ಲೇಸ್, ಮ್ಯಾಚಿಂಗ್ ಕಿವಿಯೋಲೆಗಳು ಮತ್ತು ಸಿಲ್ವರ್ ಹಿಲ್ಸ್ ಧರಿಸಿ ಪೂರ್ಣಗೊಳಿಸಿದರು.
ಹುಮಾ ಖುರೇಷಿ ಅವರು ಬಿಳಿ-ಬಣ್ಣದ ಪ್ಅಗಿಂಗ್ ನೆಕ್ಲೈನ್ ಹೊಂದಿರುವ ಬಿಳಿ ಗೌನ್ ಧರಿಸಿದ್ದರು . ಥೈ ಹೈ ಸ್ಲಿಟ್ ಗೌನ್ನ ಕೈಗಳು ಮತ್ತು ಎದೆಯ ಭಾಗದಲ್ಲಿ ಸ್ವಿಲರ್ ವರ್ಕ್ ಹೊಂದಿದ ಗೌನ್ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡರು.
ಜೆನ್ Z ಶೈಲಿಯ ಐಕಾನ್ ಮತ್ತು ದಿವಾ ಉರ್ಫಿ ಜಾವೇದ್ ಅವರು ಕೆಂಪು ಬಣ್ಣದ ಸೀರೆಯನ್ನು ಧರಿಸಿದ್ದರು ಮತ್ತು ಅವಳ ತಲೆಯ ಮೇಲೆ ಭಾರವಾದ ಕೆಂಪು ಮತ್ತು ಗೋಲ್ಡನ್ ಹೆಡ್ ಗೇರ್ ಅನ್ನು ಧರಿಸಿದ್ದರು. ಅವರ ಎದೆಯ ಭಾಗ ಕೆಂಪು ಬಣ್ಣದ ಮಣಿಗಳಿಂದ ಅಲಂಕರಿಸಲ್ಪಟ್ಟಿತ್ತು.
ನಟಿ ಸೋನಾಲಿ ಬೇಂದ್ರೆ ಈವೆಂಟ್ನಲ್ಲಿ ಕಡು ನೇರಳೆ ಮತ್ತು ಸಿಲ್ವರ್ ವರ್ಕ್ ಕಸೂತಿ ಕುರ್ತಿಯೊಂದಿಗೆ ಸ್ಕರ್ಟ್ ಮತ್ತು ಹೇವಿ ದುಪಟ್ಟಾದಲ್ಲಿ ಕಾಣಿಸಿಕೊಂಡರು.
ಹಿರಿಯ ನಟಿ ಸಂಸದೆ ಜಯಾ ಬಚ್ಚನ್ ಅಪರೂಪಕ್ಕೆ ಈ ಸಮಾರಂಭದಲ್ಲಿ ಕಾಣಿಸಿಕೊಂಡರು. ಅವರು ಚಿಕಂಕರಿ ವರ್ಕ್ನ ನಿಂಬೆ-ಹಳದಿ ಕುರ್ತಾವನ್ನು ಧರಿಸಿದ್ದರು. ಕುರ್ತಾವನ್ನು, ಬಿಳಿ ಪ್ಯಾಂಟ್, ಮ್ಯಾಚಿಂಗ್ ಸ್ಕಾರ್ಫ್, ಲೇಯರ್ಡ್ ಸ್ಫಟಿಕದ ನೆಕ್ಲೇಸ್, ಹೊಂದಾಣಿಕೆಯ ಕಿವಿಯೋಲೆ ಧರಿಸಿದ್ದರು ಮತ್ತು ಫ್ರೀ ಹೇರ್ ಸ್ಸೈಲ್ನೊಂದಿಗೆ ತನ್ನ ನೋಟವನ್ನು ಪೂರ್ಣಗೊಳಿಸಿದರು.
ಬಾಲಿವುಡ್ ನಟ ಶಂತನು ಮಹೇಶ್ವರಿ ಕೂಡ ಈವೆಂಟ್ನಲ್ಲಿ ಸಂಪೂರ್ಣ ಕಡು ನೀಲಿ ಕುರ್ತಾ, ಬ್ಲೇಜರ್ ಮತ್ತು ನೀಲಿ ಮತ್ತು ಕಪ್ಪು ಬೂಟುಗಳೊಂದಿಗೆ ಪ್ಯಾಂಟ್ನಲ್ಲಿ ಕಾಣಿಸಿಕೊಂಡರು.
ಈ ಕಾರ್ಯಕ್ರಮಕ್ಕೆ ಹೃತಿಕ್ ರೋಷನ್ ಮಾಜಿ ಪತ್ನಿ ಸುಸ್ಸಾನ್ ಖಾನ್ ಬಾಯ್ಫ್ರೆಂಡ್ ಅರ್ಸ್ಲಾನ್ ಗೋನಿ ಜೊತೆ ಬಂದಿದ್ದರು. ಬೆಳ್ಳಿಯ ಬಣ್ಣದ ಶಾರ್ಟ್ ಒನ್ ಪೀಸ್ನಲ್ಲಿ ಹೂವಿನ ಪ್ರಿಂಟ್ ಮತ್ತು ಗೋಲ್ಡನ್ ಹೀಲ್ಸ್ನಲ್ಲಿ ಸುಸ್ಸಾನ್ ತುಂಬಾ ಸುಂದರವಾಗಿ ಕಾಣುತ್ತಿದ್ದರು, ಆರ್ಸ್ಲಾನ್ ಕಪ್ಪು ಟಿ-ಶರ್ಟ್, ಡೆನಿಮ್ ನೀಲಿ ಜೀನ್ಸ್ ಮತ್ತು ಕಸೂತಿ ಮಾಡಿದ ಜಾಕೆಟ್ ಧರಿಸಿದ್ದರು.
ವಿಶೇಷ ಲುಕ್ನಲ್ಲಿ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಕೈ ಹಿಡಿಯುತ್ತಿರುವ ರಾಧಿಕಾ ಮರ್ಚೆಂಟ್ ಸಹ ಈ ಸಮಾರಂಭದಲ್ಲಿ ಸೀರೆಯಲ್ಲಿ ಕಂಗೊಳಿಸಿದ್ದು ವಿಶೇಷವಾಗಿತ್ತು.