ತಾಯಿಯಾಗುತ್ತಿರುವ ಸಂಭ್ರಮದಲ್ಲಿ ನೀಲಕಂಠ ನಟಿ ನಮಿತಾ; ಬೇಬಿ ಬಂಪ್ ಫೋಟೋ ವೈರಲ್
ನೀಲಕಂಠ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದ ನಟಿ ನಮಿತಾ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆಯ ನೀಲಕಂಠ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದ ನಟಿ ನಮಿತಾ ತುಂಬು ಗರ್ಭಿಣಿ.

pregnant
2002ರಲ್ಲಿ ನಮಿತಾ ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭ ಮಾಡಿದರು. ಗುಜರಾತ್ ಮೂಲದ ನಟಿ ನಮಿತಾ ಖ್ಯಾತಿಗಳಿಸಿದ್ದು ದಕ್ಷಿಣ ಭಾರತದಲ್ಲಿ. ತೆಲುಗಿನ ಸೊಂತಮ್ ಸಿನಿಮಾ ಮೂಲಕ ನಮಿತಾ ಮೊದಲ ಬಾರಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು.
2017ರಲ್ಲಿ ನಮಿತಾ ಚೆನ್ನೈ ಮೂಲದ ತೆಲುಗು ವ್ಯಕ್ತಿ ವೀರೇಂದ್ರ ಚೌಧರಿ ಜೊತೆ ಹಸೆಮಣೆ ಏರಿದರು. ತಿರುಪತಿಯಲ್ಲಿ ಇಬ್ಬರೂ ಸಪ್ತಪದಿ ತುಳಿದರು. ಮದುವೆಯ ನಂತರ ನಮಿತಾ ಸಿನಿಮಾದಲ್ಲಿ ಹೆಚ್ಚು ಸಕ್ರೀಯರಾಗಿರಲಿಲ್ಲ.
ಬಹುಭಾಷಾ ನಟಿ ನಮಿತಾ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ನೀಲಕಂಠ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದ ನಟಿ ನಮಿತಾ ತುಂಬು ಗರ್ಭಿಣಿ. ನಮಿತಾ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
pregnant
ನಮಿತಾ ಕೊನೆಯದಾಗಿ ಮಲಯಾಳಂ ಮತ್ತು ತಮಿಳು ಸಿನಿಮಾದಲಲಿ ಮಿಂಚಿದ್ದರು. ಕನ್ನಡದಲ್ಲಿ ಕೊನೆಯದಾಗಿ ಬೆಂಕಿ ಬಿರುಗಾಳಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.
ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರಿಗೆ ನಮಿತಾ ಚಿರಪರಿಚಿತ. ಹಾಟ್ ನಟಿ ಎಂದೇ ಖ್ಯಾತ ಗಳಿಸಿರುವ ನಮಿತಾ ತಮಿಳು, ತೆಲುಗು ಸಿನಿಮಾಗಳಲ್ಲೂ ಮಿಂಚಿದ್ದಾರೆ.
ನೀಲಕಂಠ ಸಿನಿಮಾ ಬಳಿಕ ಕನ್ನಡದಲ್ಲಿ ದರ್ಶನ್ ಜೊತೆ ಇಂದ್ರ ಸಿನಿಮಾದಲ್ಲಿ ಮಿಂಚಿದ್ದರು. 41 ವರ್ಷದ ನಟಿ ನಮಿತಾ ತಾನು ಗರ್ಭಿಣಿ ಆಗಿರುವ ವಿಚಾರವನ್ನು ಫೋಟೋ ಶೇರ್ ಮಾಡುವ ಮೂಲಕ ಬಹಿರಂಗ ಪಡಿಸಿದರು. ಇನ್ಸ್ಟಾಗ್ರಾಮ್ ನಲ್ಲಿ ಬೇಬಿ ಬಂಪ್ ಫೋಟೋ ಶೂಟ್ ಶೇರ್ ಮಾಡಿದ್ದಾರೆ.
ತಾಯ್ತನ ನನ್ನ ಹೊಸ ಅಧ್ಯಾಯನ ಪ್ರಾರಂಭ. ನಾನು ಬದಲಾದೆ. ನಲ್ಲಲ್ಲಿ ಏನೋ ಬದಲಾಗಿದೆ. ತುಂಬಾ ಅದ್ಭುತವಾಗಿದೆ ಎಂದು ನಮಿತಾ ಬರೆದುಕೊಂಡಿದ್ದಾರೆ.