Simbu Relationhips: ಕಾಲಿವುಡ್‌ನ ಲೇಡೀಸ್ ಮ್ಯಾನ್ ಸಿಂಬು ಜೊತೆ ಸಂಬಂಧದಲ್ಲಿದ್ದ ನಟಿಯರು!
ನಟ ಸಿಲಂಬರಸನ್ ಅಕಾ ಸಿಂಬು (Simbu) ತಮಿಳು ಚಿತ್ರರಂಗದ ಲೇಡೀಸ್ ಮ್ಯಾನ್ ಎಂದು ವರದಿಯಾಗಿದೆ. ಸಿಂಬು ಅವರ ಹೆಸರು ಅನೇಕ ನಟಿಯರ ಜೊತೆ ರಿಲೆಷನ್‌ಶಿಪ್ ಹೊಂದಿದ್ದರು ಎಂದು ಕೇಳಿಬಂದಿದೆ. ಆದರೆ ಕೆಲವರನ್ನು ಅದನ್ನು ಒಪ್ಪಿಕೊಂಡರು. ಇನ್ನು ಕೆಲವು ವದಂತಿಗಳಾಗಿವೆ. ಹನ್ಸಿಕಾ ಮೋಟ್ವಾನಿ (Hansika Motwani),ತ್ರಿಶಾ ಕೃಷ್ಣನ್ (Trisha Krishnan) ಮುಂತಾದ ಟಾಪ್ ನಟಿಯರ ಹೆಸರುಗಳು ಸೇರಿವೆ.
ತಮಿಳು ನಟ ಸಿಂಬು ಅವರ ಹೆಸರು ಈ ಹಿಂದೆ ಅನೇಕ ಮಹಿಳಾ ಸೆಲೆಬ್ರಿಟಿಗಳ ಜೊತೆ ಕೇಳಿಬಂದಿದೆ. ಸಿಂಬು ಅವರ ಗರ್ಲ್‌ಫ್ರೆಂಡ್ಸ್ ಲಿಸ್ಟ್‌ನಲ್ಲಿ ನಯನತಾರಾರಿಂದ ಹಿಡಿದು ಹಂಸಿಕಾ, ನಿಧಿ ಅಗರ್ವಾಲ್ ವರೆಗೆ ಹಲವು ದಕ್ಷಿಣದ ಟಾಪ್ ನಟಿಯರ ಹೆಸರುಗಳು ಸೇರಿವೆ . ಮಾಧ್ಯಮಗಳ ವರದಿಗಳಿಂದ ಬೆಳಕಿಗೆ ಬಂದ ಸಿಂಬು ಅವರ ಲಿಂಕ್-ಅಪ್‌ಗಳು ಇಲ್ಲಿವೆ.
simbu -nidhiagarwal
ಸಿಂಬು ಮತ್ತು ನಿಧಿ ಅಗರ್ವಾಲ್: ನಿಧಿ ಅಗರ್ವಾಲ್ ತಮಿಳು ಚಿತ್ರರಂಗದಲ್ಲಿ ಜಯಂ ರವಿ ಜೊತೆ ಭೂಮಿ ಸಿನಿಮಾದಲ್ಲಿ ಪಾದಾರ್ಪಣೆ ಮಾಡಿದರು. ಆಕೆಯ ಕೊನೆಯ ಚಿತ್ರ ಸಿಂಬು ಜೊತೆಗಿನ ಈಶ್ವರನ್. ಸಿಂಬು ಮತ್ತು ನಿಧಿ ಅಗರ್ವಾಲ್ ಒಟ್ಟಿಗೆ ನಟಿಸಿದಾಗಿನಿಂದ ಅವರ ಲಿಂಕ್-ಅಪ್ ಬಗ್ಗೆ ಹಲವು ವದಂತಿಗಳು ಹೊರಬಿದ್ದಿವೆ.
ಅನೇಕ ವರದಿಗಳ ಪ್ರಕಾರ, ಸಿಂಬು ಮತ್ತು ನಿಧಿ ಅಗರ್ವಾಲ್ ಶೀಘ್ರದಲ್ಲೇ ಮದುವೆಯಾಗಲು ಯೋಜಿಸುತ್ತಿದ್ದಾರೆ. ಸಿಂಬು ಮತ್ತು ನಿಧಿ ಅಗರ್ವಾಲ್ ಸ್ವಲ್ಪ ಸಮಯದವರೆಗೆ ಲಿವ್-ಇನ್ ಸಂಬಂಧದಲ್ಲಿದ್ದಾರೆ ಎಂದು ವದಂತಿಗಳಿವೆ. ಆದರೆ ನಿಧಿ ಅವರ ಆಪ್ತ ಮೂಲವೊಂದು ಇಂತಹ ವರದಿಗಳನ್ನು ನಿರಾಕರಿಸಿದೆ.
simbu love story
ಸಿಂಬು ಮತ್ತು ಹಂಸಿಕಾ ಮೋಟ್ವಾನಿ: ನಯನತಾರಾ ಮತ್ತು ಹನ್ಸಿಕಾ ಅವರು ಡೇಟ್ ಮಾಡಿದ ಇತರ ಹುಡುಗಿಯರಿಗಿಂತ ಹೆಚ್ಚು ಪ್ರಭಾವ ಬೀರಿದ್ದಾರೆ. ಎಲ್ಲಾ ಬ್ರೇಕ್-ಅಪ್‌ಗಳಲ್ಲಿ, ಹನ್ಸಿಕಾ ಮೋಟ್ವಾನಿಯೊಂದಿಗಿನ ಒಡಕು ಎಲ್ಲದಕ್ಕಿಂತ ಟಫ್ ಆಗಿತ್ತು ಎಂದು ಒಂದು ಸಂದರ್ಶನದಲ್ಲಿ, ಸಿಂಬು ಒಪ್ಪಿಕೊಂಡರು.
ಸಿಂಬು ಮತ್ತು ನಯನತಾರಾ: ಈ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿತ್ತು. ಇಬ್ಬರೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇವರ ರಿಲೆಷನ್‌ಶಿಪ್ ಅವರ ವಲ್ಲವನ್ ಚಿತ್ರಕ್ಕಿಂತ ಮುಂಚೆಯೇ ಪ್ರಾರಂಭವಾಯಿತು. ಸಿಂಬು ಮತ್ತು ನಯನತಾರಾ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂಬ ಅನೇಕ ಗಾಸಿಪ್‌ಗಳು ಆಗ ಹರಿದಾಡಿದ್ದವು, ನಂತರ ಕಾರಣಾಂತರಗಳಿಂದ ಇಬ್ಬರೂ ಸೌಹಾರ್ದಯುತವಾಗಿ ಬೇರ್ಪಟ್ಟರು.
ಸಿಂಬು ಮತ್ತು ಹರ್ಷಿಕಾ: ನಟಿ ಹರ್ಷಿಕಾ ಕೂಡ ಈ ತಮಿಳು ನಟನೊಂದಿಗೆ ಸಂಪರ್ಕ ಹೊಂದಿದ್ದರು. ಸಿಂಬು ಜೊತೆಗಿನ ಹರ್ಷಿಕಾರ ಹಲವು ಫೋಟೋಗಳು ಹೊರಬಿದ್ದಿವೆ. ಸಿಂಬು ಹರ್ಷಿಕಾಗೆ ಚುಂಬಿಸುತ್ತಿರುವ ಕೆಲವು ಸಿಸಿಟಿವಿ ಫೋಟೋಜ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಸಿಂಬು ಮತ್ತು ಹರ್ಷಿಕಾ ಇಬ್ಬರೂ ಸುದ್ದಿಯನ್ನು ತಳ್ಳಿಹಾಕಿದರು ಮತ್ತು ಕಡಿಮೆ ಗುಣಮಟ್ಟದ ವೀಡಿಯೊ ಎಂದು ಕರೆದರು.
ಸಿಂಬು ಮತ್ತು ತ್ರಿಶಾ: ಸಿಂಬು ಮತ್ತು ತ್ರಿಶಾ ಇಬ್ಬರೂ ತಮ್ಮ ವಿನೈತಾಂಡಿ ವರುವಾಯಾ ಸಿನಿಮಾದ ಬಿಡುಗಡೆಯ ನಂತರ ಲಿಂಕ್ ಆಗಿದ್ದರು. ನಂತರ, ಅಂತಹ ಎಲ್ಲಾ ಸುದ್ದಿಗಳನ್ನು ನಿರಾಕರಿಸಿದರು ಮತ್ತು ಅವರು ಕೇವಲ ಒಳ್ಳೆಯ ಸ್ನೇಹಿತರು ಎಂದು ಸಿಂಬು ಮತ್ತು ತ್ರಿಶಾ ಇಬ್ಬರೂ ಬಹಿರಂಗ ಹೇಳಿಕೆಗಳನ್ನು ನೀಡಿದರು.
ಸಿಂಬು ಮತ್ತು ಸನಾ ಖಾನ್: ಕಿರುತೆರೆ ನಟಿ ಸನಾ ಖಾನ್ ತಮ್ಮ ಸಿಲಂಬಟ್ಟಂ ಚಿತ್ರದ ಶೂಟಿಂಗ್‌ನಲ್ಲಿ ಸಿಂಬು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾದ ಅನೇಕ ಗಾಸಿಪ್‌ಗಳು ಬಂದವು. ಆದಾಗ್ಯೂ, ಎರಡೂ ಕಡೆಯಿಂದ ಇದರ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಸನಾ ಈಗ ಇಸ್ಲಾಮಿಕ್ ವಿದ್ವಾಂಸ ಮುಫ್ತಿ ಅನಸ್ ಸೈಯದ್ ಅವರನ್ನು ವಿವಾಹವಾಗಿದ್ದಾರೆ.
ಸಿಂಬು ಮತ್ತು ಐಶ್ವರ್ಯ ಆರ್ ಧನುಷ್: ಬಹಳ ಹಿಂದೆಯೇ, ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾ ಕೂಡ ಸಿಂಬು ಜೊತೆ ಸಂಬಂಧ ಹೊಂದಿದ್ದರು. ಅನೇಕ ವರದಿಗಳು ಐಶ್ವರ್ಯಾ ಕಾರಣದಿಂದ ಧನುಷ್ ಮತ್ತು ಸಿಂಬು ನಡುವೆ ಜಗಳ ನಡೆಯಿತು ಎಂದೂ ಹೇಳಿವೆ. ಆದರೆ ಇಬ್ಬರೂ ಈ ಸುದ್ದಿಯನ್ನು ತಳ್ಳಿಹಾಕಿದರು.