ನಯನತಾರಾರ ಎಕ್ಸ್ ಬಾಯ್‌ಫ್ರೆಂಡ್ ಸಿಂಬು ಮದುವೆಯಾಗ್ತಾರಾ ತ್ರಿಶಾ?
ಸೌತ್ ಫೇಮಸ್ ನಟಿಯರಲ್ಲಿ ಒಬ್ಬರಾದ ತ್ರಿಶಾ ಕೃಷ್ಣನ್ ಚಿತ್ರಗಳಿಗಿಂತ ಹೆಚ್ಚಾಗಿ ಮದುವೆಯ ವಿಷಯಕ್ಕೆ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಶೀಘ್ರದಲ್ಲೇ ತ್ರಿಶಾ ದಕ್ಷಿಣದ ನಟಿ ನಯನತಾರಾ ಅವರ ಮಾಜಿ ಗೆಳೆಯ ಸಿಂಬು ಅವರನ್ನು ಮದುವೆಯಾಗಬಹುದು, ಎನ್ನಲಾಗುತ್ತಿದೆ. ತ್ರಿಶಾ ಹಿಂದೆ ಬಾಹುಬಲಿಯ ಭಲ್ಲಾಳ ದೇವ ಖ್ಯಾತಿಯ ರಾಣಾ ದಗ್ಗುಬಾಟಿ ಜೊತೆ ರಿಲೆಷನ್‌ಶಿಪ್ ಹೊಂದಿದ್ದರು. ಆದರೆ, ರಾಣಾ ದಗ್ಗುಬಟಿ ಇತ್ತೀಚೆಗೆ ಮಿಹಿಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲಿಯೇ ಸಪ್ತಪದಿ ತುಳಿಯಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ತ್ರಿಶಾ ಕೂಡ ಶೀಘ್ರದಲ್ಲೇ ಸಿಂಬುವನ್ನು ತನ್ನ ಲೈಫ್ ಪಾರ್ಟನರ್ ಆಗಿ ಮಾಡಿಕೊಳ್ಳುತ್ತಿದ್ದಾರೆ ಎಂಬುದು ನ್ಯೂಸ್. ಪ್ರಸಿದ್ಧ ನಿರ್ದೇಶಕ ಗೌತಮ್ ಮೆನನ್ ಅವರ ವಿನಿಟಾಂಡಿ ವರುವಾಯ ಸಿನಿಮಾದಲ್ಲಿ ತ್ರಿಶಾ ಮತ್ತು ಸಿಂಬು ಜೋಡಿ ಪ್ರೇಕ್ಷಕರ ಮನ ಗೆದ್ದಿತ್ತು.
ತ್ರಿಶಾ ಮತ್ತು ರಾಣಾ ದಗ್ಗುಬಟಿ ಅವರ ಸಂಬಂಧ ಹಲವು ವರ್ಷಗಳಿಂದ ಚರ್ಚಿಸಲ್ಪಟ್ಟಿತು. ಆದಾಗ್ಯೂ, ಹಲವು ಬಾರಿ ಬ್ರೇಕಪ್ ಹಾಗೂ ಮತ್ತೆ ಲಿಂಕಪ್‌ಗಳ ವರದಿಗಳು ಬಂದವು.
ಒಮ್ಮೆ ,ತನ್ನ ಮತ್ತು ರಾಣಾ ನಡುವೆ ಪ್ರೀತಿ ಏನೂ ಇಲ್ಲ. ನಾನು ಇನ್ನೂ ಸಿಂಗಲ್. ರಾಣಾ ಅವರ ಸಹನಟ ಮತ್ತು ಉತ್ತಮ ಸ್ನೇಹಿತ ಎಂದೂ ಹೇಳಿದ್ದರು ನಟಿ ತ್ರಿಶಾ .
ರಾಣಾ ಜೊತೆ ಬ್ರೇಕಪ್ ನಂತರ, 23 ಜನವರಿ 2015 ರಂದು, ತ್ರಿಶಾ ಚೆನ್ನೈ ಮೂಲದ ಉದ್ಯಮಿ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು.
ಆದರೆ ಈ ಸಂಬಂಧವು 4 ತಿಂಗಳು ಸಹ ಉಳಿಯಲಿಲ್ಲ. ನಂತರ ಧರ್ಮ ಯೋಗಿಯ ಸಕ್ಸೆಸ್ ಪಾರ್ಟಿಯಲ್ಲಿ ನಿಶ್ಚಿತಾರ್ಥದ ಬ್ರೇಕಪ್‌ಗೆ ಕಾರಣವನ್ನು ತ್ರಿಶಾ ಬಹಿರಂಗಪಡಿಸಿದರು.
ತನ್ನ ಪ್ರೇಯಸಿ ವರುಣ್ ಮದುವೆಯ ನಂತರ ನಟನೆಯನ್ನು ನಿಲ್ಲಿಸಬೇಕೆಂದು ಹೇಳಿದ್ದಾನೆ. ತನ್ನ ಕೊನೆಯ ಉಸಿರಿನವರೆಗೂ ನಟನೆಯನ್ನು ನಿಲ್ಲಿಸುವುದಿಲ್ಲ ಎಂದಿದ್ದರು. ತಮ್ಮ ವಯಸ್ಸಿಗೆ ಅನುಗುಣವಾಗಿ ಪಾತ್ರವನ್ನು ಆಯ್ಕೆ ಮಾಡುತ್ತಾರೆ ಸೌತ್‌ನ ಫೇಮಸ್ ನಟಿ.
ಕಾಫಿ ವಿಥ್ ಕರಣ್‌ನ 6ನೇ ಸೀಸನ್‌ನಲ್ಲಿ ರಾಣಾ ದಗ್ಗುಬಾಟಿಗೆ ತ್ರಿಷಾ ಬಗ್ಗೆ ಪ್ರಶ್ನಿಸಿದಾಗ, ನಾನು ಮತ್ತು ತ್ರಿಶಾ ಒಳ್ಳೆಯ ಸ್ನೇಹಿತರು. ಆದರೆ, ಇಬ್ಬರ ನಡುವೆ ಸರಿ ಬರಲಿಲ್ಲ ಎಂದು ಎಂದಿದ್ದರು. ಅದೇ ಶೋನಲ್ಲಿ, ರಾಣಾ ತ್ರಿಷಾ ಜೊತೆಗೆ ಸೆಟಲ್ ಆಗುವುದನ್ನು ನೋಡಬೇಕೆಂದು ತೆಲಗು ಸೂಪರ್‌ಸ್ಟಾರ್ ಪ್ರಭಾಸ್ ಹೇಳಿದ್ದರು.
'ನಾನು ಮತ್ತು ರಾಣಾ ತುಂಬಾ ಒಳ್ಳೆ ಸ್ನೇಹಿತರು. ನಮ್ಮ ನಡುವೆ ವಿಶೇಷ ಏನೂ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿ ನನ್ನ ಮತ್ತು ರಾಣಾ ಅವರ ಸಂಭಾಷಣೆಗಳು ಏಕೆ ಹೆಡ್‌ಲೈನ್ ಆಗುತ್ತವೆ, ಎಂದು ನನಗೆ ತಿಳಿದಿಲ್ಲ. ನಾನು ಅನೇಕ ಹೀರೋಗಳದೊಂದಿಗೆ ಮಾತನಾಡುತ್ತೇನೆ' ಎಂದು ಅದೇ ಸಮಯದಲ್ಲಿ ತ್ರಿಶಾ ಸಂದರ್ಶನವೊಂದರಲ್ಲಿ ಹೇಳಿದರು.
ರಾಣಾ ದಗ್ಗುಬಾಟಿ ಇತ್ತೀಚೆಗೆ ಮಿಹಿಕಾ ಬಜಾಜ್ ಜೊತೆ ಎಂಗೇಜ್ ಆಗಿರುವ ಸುದ್ದಿ ತಿಳಿದೇ ಇದೆ.
ಈಗ ತ್ರಿಶಾ ಕೂಡ ದಾಂಪತ್ಯಕ್ಕೆ ಕಾಲಿಡಲು ಯೋಚಿಸುತ್ತಿದ್ದಾರಂತೆ.
ಸೌತ್ ಲೇಡಿ ಸೂಪರ್ ಸ್ಟಾರ್‌ನ ಎಕ್ಸ್‌ಬಾಯ್ ಫ್ರೆಂಡ್ ಸಿಂಬುವನ್ನು ಮದುವೆಯಾಗಲಿದ್ದಾರೆ ತ್ರಿಶಾ ಎಂಬ ನ್ಯೂಸ್ ವೈರಲ್ ಆಗಿದೆ.
ಚೆನ್ನೈನ ತಮಿಳು ಬ್ರಾಹ್ಮಣ ಕುಟುಂಬದಲ್ಲಿ 4 ಮೇ 1983 ರಂದು ಜನಿಸಿದ ತ್ರಿಶಾ 1999 ರಲ್ಲಿ 'ಜೋಡಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಪೋಷಕರ ಏಕೈಕ ಮಗಳು ತ್ರಿಶಾ ಅನೇಕ ಬ್ಯೂಟಿ ಪೇಜೆಂಟ್‌ಗಳಲ್ಲಿ ಜಯಗಳಿಸಿದ್ದಾರೆ. ಅವರು 'ಮಿಸ್ ಸೇಲಂ' ಮತ್ತು 'ಮಿಸ್ ಮದ್ರಾಸ್' ಕೂಡ ಆಗಿದ್ದಾರೆ.
ತಮಿಳು ಸೂಪರ್ ಸ್ಟಾರ್ ಸೂರ್ಯ ಜೊತೆ ನಟಿಸಿದ, 2002 ರಲ್ಲಿ ಬಿಡುಗಡೆಯಾದ 'ಮೌನಮ್ ಪೆಸಿಯಾಧೆ' ಸಿನಿಮಾದಿಂದ ಹೆಚ್ಚು ಬೆಳಕಿಗೆ ಬಂದರು ನಟಿ ತ್ರಿಶಾ.
ತ್ರಿಶಾ ಫಾಲ್ಗುನಿ ಪಾಠಕ್ ಅವರ ಮ್ಯೂಸಿಕ್ ಆಲ್ಬಂ 'ಮೇರಿ ಚುನಾರ್ ಉಡ್-ಉಡ್ ಜಾಯೇ' ನಲ್ಲಿ ಕೆಲಸ ಮಾಡಿದರು. 2010 ರಲ್ಲಿ, ಖಟ್ಟಾ-ಮೀಠಾ ಸಿನಿಮಾದ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಟ್ಟರು. ಅಕ್ಷಯ್ ಕುಮಾರ್ ಜೊತೆ ಕಾಣಸಿಕೊಂಡಿದ್ದರು.