ಅರಿಶಿಣ ದಾರ ಹಾಕಿ ಏರ್ಪೋಟ್‌ನಲ್ಲಿ ಕಾಣಿಸಿಕೊಂಡ ನಯನತಾರಾ; ಅಭಿಮಾನಿಗಳ ಮೆಚ್ಚುಗೆ
ಶಾರುಖ್ ಖಾನ್ ಸಿನಿಮಾದಲ್ಲಿ ನಯನತಾರಾ. ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಟಿ ಲುಕ್ ವೈರಲ್....

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಪಬ್ಲಿಕ್‌ನಲ್ಲಿ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಮದುವೆ ನಂತರ ಹನಿಮೂನ್ ಮುಗಿಸಿಕೊಂಡು ಸಣ್ಣ ಅವಧಿಯಲ್ಲಿ ಕೆಲಸಕ್ಕೆ ಮರುಳಿದ್ದಾರೆ. ಹೀಗಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಶಾರುಖ್ ಖಾನ್ ಜೊತೆ 'ಜವಾನ್' ಸಿನಿಮಾದಲ್ಲಿ ನಟಿಸುವ ಮೂಲಕ ನಯನತಾರಾ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾ ಶೂಟಿಂಗ್ ಕೂಡ ಆರಂಭವಾಗಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ನಯನತಾರಾ ಟಾಪ್ ಟು ಬಾಟಮ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾಪರಾಜಿಗಳು ಎಷ್ಟೇ ಬೇಡಿದ್ದರೂ ಮಾಸ್ಕ್ ತೆಗೆದಿಲ್ಲ.
ನಯನತಾರಾ ಈ ಲುಕ್‌ನಲ್ಲಿ ನೆಟ್ಟಿಗರ ಗಮನ ಸೆಳೆದಿರುವುದು ಅವರ ಕೊರಳಿನಲ್ಲಿರುವ ಅರಿಶಿಣ ದಾರ (ತಾಳಿ) ಮತ್ತು ಎಂಗೇಜ್‌ಮೆಂಟ್ ಉಂಗುರ.
ಜನರಿಗೆ ನಯನತಾರಾ ಮೇಲೆ ಎಷ್ಟು ಕ್ರೇಜಿ ಇದೆ ಅಂದ್ರೆ, ಪ್ರತಿ ಸಲ ನಯನ ಕ್ಯಾಮೆರಾ ಮುಂದೆ ಕಾಣಿಸಿಕೊಂಡಾಗ ಕೈಯಲ್ಲಿ ಮೊಬೈಲ್ ಹಿಡಿದುಕೊಂಡಿರುತ್ತಾರೆ. ಆ ಮೊಬೈಲ್‌ನ ಕವರ್ ಸದಾ ಕೆಂಪಾಗಿರುತ್ತದೆ.
ಮದುವೆ ಆಗಿ ಮರು ದಿನ ತಾಳಿ ತೆಗೆದಿಡುವ ನಟಿಯರಿದ್ದಾರೆ ಆದರೆ ನೀವು ಅದನೇ ಧರಿಸಿ ಶೂಟಿಂಗ್ ಮಾಡುತ್ತಿರುವುದು ಪ್ರಯಾಣ ಮಾಡುತ್ತಿರುವುದು ಗ್ರೇಟ್ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.