ನನ್ ಮಕ್ಕಳು ನನ್ನ ಮಾತು ಕೇಳುವುದೇ ಇಲ್ಲ: ಎಲ್ಲ ಅಪ್ಪಂದಿರಂತೆ ದುಃಖ ತೋಡಿಕೊಂಡ ಆಮೀರ್ ಖಾನ್!
ಕಪಿಲ್ ಶರ್ಮಾ ಅವರ ನೆಟ್‌ಫ್ಲಿಕ್ಸ್ ಶೋ, ದಿ ಗ್ರೇಟ್ ಇಂಡಿಯನ್ ಕಪಿಲ್ ಶೋಗೆ ಅತಿಥಿಯಾಗಿ ಆಗಮಿಸಿದ ಆಮೀರ್ ಖಾನ್ ತಮ್ಮ ಸಂಸಾರದ ನೋವನ್ನು ಹಂಚಿಕೊಂಡರು. ನನ್ನ ಮಕ್ಕಳು ನನ್ನ ಮಾತನ್ನು ಕೇಳುವುದೇ ಇಲ್ಲವೆಂದು ನೋವು ತೋಡಿಕೊಂಡಿದ್ದು, ಎಲ್ಲ ಆರ್ಡಿನರ್ ಅಪ್ಪಂದಿರಂತೆ ತಮ್ಮ ಸಂಕಟ ತೋಡಿಕೊಂಡಿದ್ದಾರೆ.
ನೆಟ್‌ಫ್ಲಿಕ್ಸ್‌ನ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಆಗಮಿಸಿದ ಆಮೀರ್ ಖಾನ್ ತಮ್ಮ ಮಕ್ಕಳು ತಮ್ಮ ಬಗ್ಗೆ ಕ್ಯಾರೇ ಮಾಡೋಲ್ಲವೆಂದು ಬಾಲಿವುಡ್ ಪರ್ಫೆಕ್ಷನಿಸ್ಟ್ ರೀವಿಲ್ ಮಾಡಿದ್ದಾರೆ.
ನಟ ಅಮೀರ್ ಖಾನ್ ತಮ್ಮ ಮಕ್ಕಳಾದ ಜುನೈದ್ ಖಾನ್, ಇರಾ ಖಾನ್ ಮತ್ತು ಆಜಾದ್ ರಾವ್ ಅವರ ಮಾತನ್ನು ಕೇಳುವುದಿಲ್ಲ ಎಂದು ಆರೋಪಿಸಿದ್ದಾರೆ. ಎಲ್ಲ ಶ್ರೀ ಸಾಮಾನ್ಯ ಅಪ್ಪಂದಿರಂತೆ ಆಮೀರ್ ಖಾನ್ ತಮ್ಮ ಮಕ್ಕಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರೋದು ಸ್ವಲ್ಪ ವಿಶೇಷ ಅನಿಸಿದೆ.
ಚಲನಚಿತ್ರ ಉದ್ಯಮದಲ್ಲಿರುವ ಬೇರೆ ವ್ಯಕ್ತಿಗಳು ಅವರ ಮಕ್ಕಳನ್ನು ಸಹಾಯಕ್ಕಾಗಿ ತನ್ನ ಬಳಿಗೆ ಕಳುಹಿಸುತ್ತಾರೆ. ಆದರೆ ತನ್ನ ಮಕ್ಕಳು ನನ್ನ ಮಾತನ್ನೇ ಕೇಳುವುದಿಲ್ಲ ಎಂದು ದುಃಖ ತೋಡಿಕೊಂಡಿದ್ದು, ಎಲ್ಲರ ಮನೆಯ ದೋಸೆಯೂ ತೂತು ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಚಲನಚಿತ್ರ ವ್ಯವಹಾರದ ಪಾಲುದಾರರು ನಟನೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಲು ಬುದ್ಧ ಹೇಳುವಂತೆ ತಮ್ಮ ಮಕ್ಕಳನ್ನು ಅಮೀರ್ ಬಳಿ ಕಳುಹಿಸುತ್ತಾರೆ. ಆದರೆ ಸ್ವತಃ ಆಮೀರ್ ಮಕ್ಕಳು ಅವರು ಏನು ಮಾಡಬೇಕೆಂದು ಹೇಳದಂತೆ ತಡೆಯುತ್ತಾರೆ ಎಂದು ಆಮೀರ್ ಖಾನ್ ಹೇಳಿದರು.
ಇದು ನಮ್ಮ ಪೀಳಿಗೆಯ ಅಪ್ಪಂದಿರು ಅನುಭವಿಸೋ ಸಮಸ್ಯೆಯೋ ಏನೋ ಗೊತ್ತಿಲ್ಲ. ನಮ್ಮ ಮಕ್ಕಳೇ ನಮ್ಮ ಮಾತು ಕೇಳುವುದಿಲ್ಲ. ನಾವು ನಮ್ಮ ಹೆತ್ತವರ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದೆವು. ಅದೇ ರೀತಿ ನಾವೂ ನಮ್ಮ ಮಕ್ಕಳಿಂದ ನಿರೀಕ್ಷಿಸುತ್ತೇವೆ. ಆದರೆ, ಕಾಲ ಬದಲಾಗಿದೆ. ಈಗಿನ ಮಕ್ಕಳು ಪೋಷಕರ ಮಾತನ್ನು ಕೇಳಿಸಿಕೊಳ್ಳುವಷ್ಟು ವ್ಯವಧಾನ ಹೊಂದಿಲ್ಲ. ನಮಗೆ ನಮ್ಮನ್ನು ತಿದ್ದಲು ಪೋಷಕರು ಬಯ್ಯುತ್ತಿದ್ದರೆ. ಈಗ ಮಕ್ಕಳೇ ನಮ್ಮ ಟೀಕಿಸುತ್ತಾರೆಂದು ಹೇಳಿದ್ದಾರೆ ಬಾಲಿವುಡ್ ನಟ.
ನಟನಾಗುವ ಮೊದಲು ಟೈಗರ್ ಶ್ರಾಫ್‌ಗೆ ಸಲಹೆ ನೀಡುವಂತೆ ವೃತ್ತಿಯಲ್ಲಿ ತನ್ನ ಗೆಳೆಯ ನಟ ಜಾಕಿ ಶ್ರಾಫ್ ಕೇಳಿಕೊಂಡಿದ್ದನ್ನು ಅಮೀರ್ ನೆನಪಿಸಿಕೊಂಡರು
'ಜಗ್ಗು (ಜಾಕಿ ಶ್ರಾಫ್) ನನ್ನ ಉತ್ತಮ ಗೆಳೆಯ. ಹಾಗಾಗಿ, ಅವರ ಮಗ ಟೈಗರ್ ಶ್ರಾಫ್ ಅವರು ಉದ್ಯಮಕ್ಕೆ ಪಾದಾರ್ಪಣೆ ಮಾಡಲು ಮುಂದಾದಾಗ, ನನ್ನ ಮಗ. ಒಮ್ಮೆ ಅವನನ್ನು ಭೇಟಿ ಮಾಡಿ ಮಾತುಕತೆ ಮಾಡಿ ಸುಮ್ಮನೆ ನೋಡಿ. ಅವನು ಹೇಗಿದ್ದಾನೆ ಎಂದು ಜಗ್ಗು ನನಗೆ ಹೇಳಿದ' ಎಂದು ಆಮೀರ್ ನೆನಪಿಸಿಕೊಂಡಿದ್ದಾರೆ.
'ಜಾಕಿ ಮಾತ್ರವಲ್ಲ ಇಂಡಸ್ಟ್ರಿಯ ಅನೇಕ ವ್ಯಕ್ತಿಗಳು ತಮ್ಮ ಮಕ್ಕಳನ್ನು ಭೇಟಿ ಮಾಡಲು ಮತ್ತು ಮಾರ್ಗದರ್ಶನ ಮಾಡಲು ನನ್ನನ್ನು ಸಂಪರ್ಕಿಸುತ್ತಾರೆ. ಅವರು ನಮ್ಮ ಮಕ್ಕಳು ನಿಮ್ಮೊಂದಿಗೆ ಹ್ಯಾಂಗ್ ಔಟ್ ಮಾಡಿದರೆ, ಏನನ್ನಾದರೂ ಕಲಿಯುತ್ತಾರೆ' ಎಂದು ಹೇಳುತ್ತಾರೆ.
'ಆದಾಗ್ಯೂ, ನನ್ನ ಮಕ್ಕಳು ನನ್ನ ಬಗ್ಗೆ ಸ್ವಲ್ಪವೂ ಆಸಕ್ತಿ ಹೊಂದಿಲ್ಲ. ಅವರು ನನ್ನ ಸಲಹೆಯನ್ನು ಎಂದಿಗೂ ಅನುಸರಿಸುವುದಿಲ್ಲ ಮತ್ತು ನಾನು ಅವರಿಗೆ ಸಲಹೆ ನೀಡಿದಾಗ, ಅವರು ಏನು ಮಾಡಬೇಕೆಂದು ಅವರಿಗೆ ಹೇಳಬಾರದು ಎನ್ನುವಂತೆ ನಡೆದುಕೊಳ್ಳುತ್ತಾರೆ' ಎಂದು ಖಾನ್ ಹೇಳಿಕೊಂಡಿದ್ದಾರೆ
ಅವರ ಮಕ್ಕಳು ಮಾತ್ರವಲ್ಲ, ಅವರ ಸಹೋದರಿಯರಾದ ಫರ್ಹತ್ ಮತ್ತು ನಿಖತ್ ಖಾನ್ ಕೂಡ ಅವರ ಮಾತನ್ನು ಕೇಳುವುದಿಲ್ಲ ಎಂದು ಆಮೀರ್ ಖಾನ್ ಹೇಳಿದರು.
ಅತ್ಯುತ್ತಮ ನಟಿಯಾಗಿರುವ ನನ್ನ ಸಹೋದರಿ ಫರ್ಹಾತ್ ನಾನು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಸಲಹೆ ನೀಡಿದಾಗ ನನ್ನ ಮಾತನ್ನು ಕೇಳಲಿಲ್ಲ. ಎಂದು ಆಮೀರ್ ಹೇಳಿಕೊಂಡಿದ್ದಾರೆ.
ಆಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ: ಇರಾ ಮತ್ತು ಜುನೈದ್. ಅವರು ತಮ್ಮ ಎರಡನೆ ಹಾಗೂ ಮಾಜಿ ಪತ್ನಿ ಕಿರಣ್ ರಾವ್ ಅವರೊಂದಿಗೆ ಆಜಾದ್ ಎಂಬ ಮಗುವನ್ನು ಹೊಂದಿದ್ದಾರೆ.