ಬೀಗರ ಜೊತೆ ಬಿಕಿನಿಯಲ್ಲಿ ರೋಮ್ಯಾನ್ಸ್ ಮಾಡಿದ್ದರು ಈ ನಟಿ!
ಬಾಲಿವುಡ್ (Bollywood) ನಟಿ ಮುಮ್ತಾಜ್ (Mumtaz) ಹೆಸರು ಕೇಳಿದ ತಕ್ಷಣ ಕಣ್ಮುಂದೆ ಬರುವುದು ವಿಶಿಷ್ಟ ಶೈಲಿಯ ಸೀರೆ ಉಟ್ಟ ನಟಿಯ ಚಿತ್ರ. ಅವರ ಹೇರ್‌ಸ್ಟೈಲ್‌ನಿಂದದ ನಡಿಗೆಯ ಸ್ಟೈಲ್‌ವರೆಗೆ ಎಲ್ಲವೂ ವಿಭಿನ್ನವಾಗಿತ್ತು. ಯಾವಾಗಲೂ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ನಟಿ ಒಮ್ಮೆಲೇ ಬಿಕಿನಿ ತೊಟ್ಟು ಸಂಚಲನ ಮೂಡಿಸಿದ್ದರು. ಫಿರೋಜ್ ಖಾನ್ (Feroz Khan) ಅವರ ಒತ್ತಾಯದ ಮೇರೆಗೆ ನಟಿ ಬಿಕಿನಿ ಧರಿಸಿ ಯುವಕರ ನಿದ್ರೆಗೆಡಿಸಿದ್ದರು. ಮುಮ್ತಾಜ್ ಜೀವನಕ್ಕೆ ಸಂಬಂಧಿಸಿದ ಕೆಲವು ಕುತೂಹಲಕಾರಿ ವಿಷಯಗಳು ಇಲ್ಲಿವೆ.
ರಾಜೇಶ್ ಖನ್ನಾ ಜೊತೆಗಿನ ಮುಮ್ತಾಜ್ ಜೋಡಿಯು ಅತ್ಯಂತ ಸೂಪರ್ ಹಿಟ್ ಆಗಿತ್ತು. ಇಬ್ಬರೂ ಒಟ್ಟಿಗೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ನಂತರ, ಅವರು ಫಿರೋಜ್ ಖಾನ್ ಅವರೊಂದಿಗೆ ಜೋಡಿಯಾದರು. ಇವರಿಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಜನ ತುಂಬಾ ಇಷ್ಟಪಟ್ಟಿದ್ದಾರೆ.
ಮುಮ್ತಾಜ್ ಸಾಮಾನ್ಯವಾಗಿ ಪ್ರತಿ ಚಿತ್ರದಲ್ಲೂ ಸೀರೆ ಮತ್ತು ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದರ ಹೊರತಾಗಿಯೂ, ಅವರು ಬೋಲ್ಡ್ ನಟಿಯೆಂದೇ ಪರಿಗಣಿಸಲ್ಪಟ್ಟಿದ್ದರು.
ಅವರು ತಮ್ಮ ನಟನೆಯಿಂದ ಜನರ ಹೃದಯ ಕದ್ದಿದ್ದರು. ಮುಮ್ತಾಜ್ ಒಂದೇ ಒಂದು ಚಿತ್ರದಲ್ಲಿ ಸಖತ್ ಬೋಲ್ಡ್ ದೃಶ್ಯಗಳನ್ನು ನೀಡಿದರು. ಈ ನಟಿ ಒಮ್ಮೆಲೇ ಬಿಕಿನಿ ತೊಟ್ಟು ಸಂಚಲನ ಮೂಡಿಸಿದ್ದರು
'ಫಿರೋಜ್ ಖಾನ್ ಜೊತೆ ಕ್ರೈಮ್ ಸಿನಿಮಾ ಮಾಡಿದ್ದೇನೆ. ಈ ವೇಳೆ ಫಿರೋಜ್ ಅವರು ಬಿಕಿನಿ ಧರಿಸುವಂತೆ ಮನವಿ ಮಾಡಿದರು. ತಾನು ಈಜುಡುಗೆ ಮಾತ್ರ ಧರಿಸುತ್ತಿದ್ದೆ' ಎಂದು ನಟಿ ಎಂದು ಮುಮ್ತಾಜ್ ಸಂದರ್ಶನವೊಂದರಲ್ಲಿ ಹೇಳಿದ್ದರು.
'ನಾನು ದಪ್ಪವಾಗಿದ್ದು, ಬಿಕಿನಿ ನನಗೆ ಚೆನ್ನಾಗಿ ಕಾಣಿಸುವುದಿಲ್ಲ ಎಂದು ನಾನು ಭಾವಿಸುತ್ತಿದ್ದೆ ಹಾಗೂ ಚಿತ್ರೀಕರಣದ ನಂತರ ದೃಶ್ಯ ಇಷ್ಟವಾಗದಿದ್ದರೆ ತೆಗೆದು ಹಾಕುತ್ತೇನೆ ಎಂದು ಫಿರೋಜ್ ಹೇಳಿದ್ದರು' ಎಂಬ ವಿಷಯವನ್ನು ನಟಿ ಹೇಳಿದ್ದಾರೆ
ಬಳಿಕ ಬಿಕಿನಿ ತೊಟ್ಟಿದ್ದರು. ಆ ದೃಶ್ಯದಲ್ಲಿ ತನ್ನನ್ನು ನೋಡಿದಾಗ ಅವಳು ನಿಜವಾಗಿಯೂ ಮಾದಕವಾಗಿ ಕಾಣುತ್ತಿದ್ದೇನೆ ಎಂದು ಅನಿಸಿತು ಎಂದು ಸ್ವತಃ .ಮುಮ್ತಾಜ್ ಹೇಳಿಕೊಂಡಿದ್ದರು
ಮುಮ್ತಾಜ್ ತಮ್ಮ ವೃತ್ತಿ ಜೀವನದಲ್ಲಿ ಸುಮಾರು 109 ಚಿತ್ರಗಳಲ್ಲಿ ನಟಿಸಿದ್ದಾರೆ. ಮುಮ್ತಾಜ್ ಮೇಳ, ಕ್ರೈಮ್, ನಾಗಿನ್, ಬ್ರಹ್ಮಚಾರಿ, ರಾಮ್ ಔರ್ ಶ್ಯಾಮ್, ದೋ ರಾಸ್ತೆ ಮತ್ತು ಟಾಯ್‌ನಂತಹ ಅನೇಕ ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಫಿರೋಜ್ ಖಾನ್ ಮುಮ್ತಾಜ್ ಅವರನ್ನು ಮದುವೆಯಾಗಲು ಬಯಸಿದ್ದರು ಎನ್ನಲಾಗಿದೆ. ಆದರೆ ಇದು ಸಾಧ್ಯವಾಗಲಿಲ್ಲ. ನಟಿ 1974 ರಲ್ಲಿ ಉದ್ಯಮಿ ಮಯೂರ್ ಮಾಧ್ವನಿ ಅವರನ್ನು ವಿವಾಹವಾದರು. ಅವರಿಗೆ ನತಾಶಾ ಮಾಧ್ವನಿ ಮತ್ತು ತಾನ್ಯಾ ಮಾಧ್ವನಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು.
ಫಿರೋಜ್ ಮದುವೆಯಾಗಲು ಬಯಸಿದ ನಟಿ ನಂತರ ಅವರ ಬೀಗರಾದರು. ವಾಸ್ತವವಾಗಿ, ಫರ್ದೀನ್ ಖಾನ್ ಮುಮ್ತಾಜ್ ಅವರ ಹಿರಿಯ ಮಗಳು ನತಾಶಾ ಮಾಧ್ವನಿ ಅವರನ್ನು ವಿವಾಹವಾದರು. ಫರ್ದೀನ್ ಖಾನ್ ಫಿರೋಜ್ ಅವರ ಮಗ.