- Home
- Entertainment
- Cine World
- ಈ ನಟಿ ಗರ್ಭಿಣಿಯಾಗಿದ್ದಾಗ ಮಾಡಿದ್ರು ಆ ದೃಶ್ಯ…ಶೂಟಿಂಗ್ ನಡೆಯುವಾಗ್ಲೇ ಆಯ್ತು ರಕ್ತಸ್ರಾವ!
ಈ ನಟಿ ಗರ್ಭಿಣಿಯಾಗಿದ್ದಾಗ ಮಾಡಿದ್ರು ಆ ದೃಶ್ಯ…ಶೂಟಿಂಗ್ ನಡೆಯುವಾಗ್ಲೇ ಆಯ್ತು ರಕ್ತಸ್ರಾವ!
1974 ರ 'ರೋಟಿ ಕಪ್ಡಾ ಔರ್ ಮಕಾನ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಮೌಶುಮಿ ಚಟರ್ಜಿ ಗರ್ಭಿಣಿಯಾಗಿದ್ದರಂತೆ. ಈ ಚಿತ್ರದ ಚಿತ್ರೀಕರಣ ಸಮಯದಲ್ಲಿ ಏನಾಯ್ತು ಎನ್ನುವ ನೋವಿನ ಕಥೆ ಹೇಳಿದ್ದಾರೆ ನಟಿ.

ಮೌಶುಮಿ ಚಟರ್ಜಿ
ಬಾಲಿವುಡ್‌ನಲ್ಲಿ (Bollywood) ತಮ್ಮ ನಟನಾ ಕೌಶಲ್ಯದ ಆಧಾರದ ಮೇಲೆ ಜಗತ್ತಿನಲ್ಲಿ ಖ್ಯಾತಿ ಗಳಿಸಿದ ಅನೇಕ ನಟಿಯರು ಇದ್ದಾರೆ. ಆದ್ರೆ ಈ ನಟಿ ಎಲ್ಲರಿಗೂ ವಿಭಿನ್ನ. ಇವರು ತಮ್ಮ ನಟನಾ ಕೌಶಲ್ಯದಿಂದ ಎಲ್ಲರ ಹೃದಯವನ್ನು ಗೆದ್ದಿದ್ದಾರೆ. ಅವರು ಬೇರಾರೂ ಅಲ್ಲ 1974 ರ ರೋಟಿ, ಕಪ್ಡಾ ಔರ್ ಮಕಾನ್ ಚಿತ್ರದ ನಟಿ ಮೌಶುಮಿ ಚಟರ್ಜಿ.
ಗರ್ಭಿಣಿಯಾಗಿದ್ದಾಗ ಚಿತ್ರೀಕರಿಸಲಾದ ಅತ್ಯಾಚಾರ ದೃಶ್ಯ
1974 ರ ರೋಟಿ ಕಪ್ಡಾ ಔರ್ ಮಕಾನ್ (Roti Kapda aur Makaan) ಚಿತ್ರಕ್ಕೆ ಸಂಬಂಧಿಸಿದ ಒಂದು ನೋವಿನ ಕಥೆ ಇದೆ. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಮೌಶುಮಿ ಚಟರ್ಜಿ ಗರ್ಭಿಣಿಯಾಗಿದ್ದರು , ಆ ಸಮಯದಲ್ಲೇ ಅತ್ಯಾಚಾರ ದೃಶ್ಯವನ್ನು ಚಿತ್ರೀಕರಿಸಬೇಕಾಗಿತ್ತಂತೆ. ಅಂದು ನಡೆದ ಕಣ್ಣಿರ ಕಥೆ ಹೇಳಿದ್ದಾರೆ ಮೌಶಮಿ.
ಅತ್ಯಾಚಾರ ದೃಶ್ಯ ನೋಡಿ ಕಣ್ಣೀರಿಟ್ಟ ಪ್ರೇಕ್ಷಕರು
ರೋಟಿ ಕಪ್ಡಾ ಔರ್ ಮಕಾನ್ 1974 ರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿತ್ತು. ಈ ಚಿತ್ರದ 'ಮೈ ನಾ ಭೂಲುಂಗಾ ಹೈ ಯೇ ಮಜ್ಬೂರಿ' ನಂತಹ ಹಾಡುಗಳನ್ನು ಜನರು ಇನ್ನೂ ನೆನಪಿಸಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ಮೌಶುಮಿ ಚಟರ್ಜಿಯವರ (Moushumi Chatterjee) ಅತ್ಯಾಚಾರ ದೃಶ್ಯವು ಪರದೆಯ ಮೇಲೆ ಬಂದಾಗ, ವೀಕ್ಷಕರು ಅದನ್ನು ನೋಡಿ ಕಣ್ಣೀರಿಟ್ಟಿದ್ದರಂತೆ.
ಆ ಅತ್ಯಾಚಾರ ದೃಶ್ಯ ಎಂದಿಗೂ ಮರೆಯಲ್ಲ ಎಂದ ಮೌಶಮಿ
ಆದರೆ, ಚಿತ್ರದ ಚಿತ್ರೀಕರಣದ ಸಮಯದಲ್ಲಿ ಮೌಶುಮಿ ಗರ್ಭಿಣಿಯಾಗಿದ್ದರಿಂದ, ಈ ದೃಶ್ಯದಲ್ಲಿ ಅಭಿನಯಿಸೋದು ಅವರಿಗೆ ತುಂಬಾ ಕಷ್ಟಕರ ಮತ್ತು ನೋವಿನಿಂದ ಕೂಡಿತ್ತು. ಸಂದರ್ಶನವೊಂದರಲ್ಲಿ, ಮೌಶುಮಿ ಈ ಚಿತ್ರದ ಅತ್ಯಾಚಾರ ದೃಶ್ಯವನ್ನು(rape scene) ಎಂದಿಗೂ ಮರೆಯಲು ಸಾಧ್ಯವಿಲ್ಲ, ಅದನ್ನ ನೆನೆದರೆ ಕಣ್ಣಲ್ಲಿ ನೀರು ಬರುತ್ತೆ ಎನ್ನುತ್ತಾರೆ.
ಆ ದೃಶ್ಯ ನನಗೆ ಇಷ್ಟವಾಗಲಿಲ್ಲ
ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಮೌಶುಮಿ ಗರ್ಭಿಣಿಯಾಗಿದ್ದರಿಂದ, ಅತ್ಯಾಚಾರದ ದೃಶ್ಯ ಮಾಡೋದು ತುಂಬಾನೆ ಕಷ್ಟವಾಗಿತ್ತು. ಯಾಕಂದ್ರೆ, ಆ ದೃಶ್ಯದಲ್ಲಿ ಹೊಡೆತ, ಮೈಮೇಲೆ ಬೀಳೋದು ಎಲ್ಲವೂ ಇತ್ತು. ಇದರಿಂದ ಮಗುವಿಗೆ ಏನಾದರೂ ತೊಂದರೆಯಾಗಬಹುದು ಎನ್ನುವ ಭಯ ಇತ್ತಂತೆ ನಟಿಗೆ.
ಶೂಟಿಂಗ್ ಸಮಯದಲ್ಲಿ ನಟಿಗೆ ರಕ್ತಸ್ರಾವ
ಆದರೂ, ಹೇಗೋ ಮೌಶುಮಿ ಈ ದೃಶ್ಯದ ಚಿತ್ರೀಕರಣಕ್ಕೆ ಸಿದ್ಧರಾಗಿದ್ದರಂತೆ. ಈ ಸಮಯದಲ್ಲಿ, ಗಲಾಟೆ ನಡೆದು, ಮೌಶುಮಿ ಮೈಮೇಲೆಲ್ಲಾ ಹಿಟ್ಟು ಬೀಳುವ ದೃಶ್ಯದ ಶೂಟಿಂಗ್ ನಡೆಯುತ್ತಿತ್ತು. ನಟಿಯ ದೇಹ ಪೂರ್ತಿ ಹಿಟ್ಟಿನಿಂದ ಕೂಡಿತ್ತಂತೆ. ಬಾಯಿ, ಮುಖ, ಎಲ್ಲೆಡೆ ಹಿಟ್ಟು ತುಂಬಿ, ನಟಿಯ ಆರೋಗ್ಯ ಹದಗೆಟ್ಟುತ್ತಂತೆ. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಆಕೆಗೆ ಬ್ಲೀಡಿಂಗ್ ಆಗೋದಕ್ಕೆ ಶುರುವಾಯಿತು.
ನನ್ನ ಮಗುವನ್ನು ಕಳೆದುಕೊಂಡಿಲ್ಲ
ಆ ಸಂದರ್ಭದಲ್ಲಿ ನಟಿಗೆ ತಾನು ಮಗುವನ್ನು ಕಳೆದುಕೊಂಡು ಬಿಟ್ಟೆ ಎನ್ನುವ ಭಯ ಆವರಿಸಿತ್ತಂತೆ. ಆದರೆ ‘ನನ್ನ ಮಗುವನ್ನು ಕಳೆದುಕೊಳ್ಳದಿರುವುದು ನನ್ನ ಅದೃಷ್ಟ’ ಎಂದು ನಟಿ ಹೇಳಿದ್ದರು. ಚಿತ್ರ ಬಿಡುಗಡೆಯಾದಾಗ, ಅದು ಅದ್ಭುತ ಯಶಸ್ಸನ್ನು ಗಳಿಸಿತು.
ಸೂಪರ್‌ಹಿಟ್ ಚಿತ್ರ 'ರೋಟಿ ಕಪ್ಡಾ ಔರ್ ಮಕಾನ್'
ಮನೋಜ್ ಕುಮಾರ್ ಚಿತ್ರಕಥೆ, ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ಈ ಸೂಪರ್‌ಹಿಟ್ ಚಿತ್ರದಲ್ಲಿ ಮೌಶುಮಿ ಚಟರ್ಜಿ, ಜೀನತ್ ಅಮನ್, ಅಮಿತಾಬ್ ಬಚ್ಚನ್, ಶಶಿ ಕಪೂರ್ ಅವರಂತಹ ಶ್ರೇಷ್ಠ ತಾರೆಯರು ನಟಿಸಿದ್ದರು.