ಇಂಟರ್‌ನೆಟ್ ಬಿಸಿ ಹೆಚ್ಚಿಸಿದ ದಿಶಾ ಪಟಾನಿ - ಮೌನಿ ರಾಯ್ ಕಿಸ್ಸಿಂಗ್ ಫೋಟೋಸ್
ಮೌನಿ ರಾಯ್ (Mouni Roy) ಮತ್ತು ದಿಶಾ ಪಟಾನಿ (Disha Patani) ಪ್ರಸ್ತುತ ಯುಎಸ್‌ಎನಲ್ಲಿದ್ದಾರೆ. ಈ ನಟಿಯರು ದಿ ಎಂಟರ್‌ಟೈನರ್ಸ್ ಟೂರ್‌ನ ಭಾಗವಾಗಿದ್ದಾರೆ. ಇವರಿಬ್ಬರ ಬೋಲ್ಡ್ ಫೋಟೋಗಳು ಸಖತ್ ವೈರಲ್ ಆಗಿವೆ. ಅದೇ ಸಮಯದಲ್ಲಿ ಟ್ರೋಲ್‌ಗೂ ಗುರಿಯಾಗಿದ್ದಾರೆ.

ಮೌನಿ ರಾಯ್ ಇತ್ತೀಚೆಗೆ ನಟಿ ದಿಶಾ ಪಟಾನಿ ಅವರ ಜೊತೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಜನರು ಅವರ ಫೋಟೋಗಳಿಗೆ ವಿಚಿತ್ರವಾದ ಕಾಮೆಂಟ್‌ಗಳನ್ನು ಮಾಡಲು ಪ್ರಾರಂಭಿಸಿದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ಫೋಟೋಗಳಲ್ಲಿ, ಮೌನಿ ರಾಯ್ ಮತ್ತು ದಿಶಾ ಪಟಾನಿ ಈಜುಕೊಳದ ಬಳಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಮೌನಿ ಮತ್ತು ದಿಶಾ ಇಬ್ಬರೂ ತಬ್ಬಿಕೊಳ್ಳುವುದನ್ನು ಕಾಣಬಹುದು.
ದಿಶಾ ಪಟಾನಿ ಬಿಳಿ ಈಜುಡುಗೆ ಟಾಪ್ ಮತ್ತು ಮಿನಿ ಟೈ-ಡೈ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡರೆ, ಮೌನಿ ರಾಯ್ ಸಣ್ಣ ಬಿಳಿ ಉಡುಪಿನಲ್ಲಿ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ದಿಶಾ-ಮೌನಿ ಸ್ಟೈಲ್‌ಗೆ ಕೆಲವರು ಆಕರ್ಷಿತರಾಗುತ್ತಿದ್ದಾರೆ. ಅದೇ ಸಮಯದಲ್ಲಿ, ಕೆಲವು ಬಳಕೆದಾರರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಇತ್ತೀಚಿನ ಫೋಟೋಗಳ ಕುರಿತು ಪ್ರತಿಕ್ರಿಯಿಸಿದ ಬಳಕೆದಾರರು ಇಬ್ಬರನ್ನೂ ಲೆಸ್ಬಿಯನ್ ಎಂದು ಕರೆದಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬ ಬಳಕೆದಾರರು ಬಿಕಿನಿಯಲ್ಲಿ ಸ್ಮೂತ್ ಎಂದು ಬರೆದಿದ್ದಾರೆ.
ಒಬ್ಬ ಬಳಕೆದಾರರು ಹೊಸ ಲೆಸ್ಬಿಯನ್‌ನ ಆರಂಭ ಎಂದೂ ಸಹ ಬರೆದಿದ್ದಾರೆ. ಇಬ್ಬರೂ ನಟಿಯರ ನಡುವಿನ ಬಾಂಧವ್ಯದ ಬಗ್ಗೆಯೂ ಕೆಲವರು ಲೇವಡಿ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.