Mother's Day 2022 ; ಬಾಲಿವುಡ್‌ನ ಫಿಟ್ ಹಾಗೂ ಗ್ಲಾಮರಸ್ ಮಮ್ಮಿಯಂದಿರು ಇವರು
Mother's Day ಅನ್ನು ಮೇ 8 ರಂದು ಅಂದರೆ ಇಂದು ಆಚರಿಸಲಾಗುತ್ತಿದೆ. ತಮ್ಮ ಮಕ್ಕಳನ್ನು ಬೆಳೆಸುವುದರ ಜೊತೆಗೆ ತಮ್ಮ ಫಿಟ್‌ನೆಸ್ ಅನ್ನು ನೋಡಿಕೊಳ್ಳುವ ಮತ್ತು 40 ವರ್ಷ ವಯಸ್ಸಿನ ಮೇಲೂ ಅವರು ಸಾಕಷ್ಟು ಗ್ಲಾಮರಸ್ ಆಗಿ ಕಾಣುವ ಬಾಲಿವುಡ್ ತಾಯಂದಿರು ಇವರು. ಬಾಲಿವುಡ್‌ನ ಫಿಟ್ ಹಾಗೂ ಹಾಟ್ ಮಮ್ಮಿಯರು ಎಲ್ಲಾ ತಾಯಂದಿರಿಗೆ ಸ್ಫೂರ್ತಿಯಾಗಿದ್ದಾರೆ.

48 ವರ್ಷ ವಯಸ್ಸಿನ ಮಲೈಕಾ ಅರೋರಾ ಬಾಲಿವುಡ್‌ನ ಹಾಟೆಸ್ಟ್ ಮತ್ತು ಫಿಟೆಸ್ಟ್ ಅಮ್ಮಂದಿರಲ್ಲಿ ಒಬ್ಬರು. ಅವರ ಮಗು ಅರ್ಹಾನ್ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾನೆ. ಮಗುವನ್ನು ಬೆಳೆಸುವುದರ ಜೊತೆಗೆ, ನಟಿ ತನ್ನ ಮೇಲೆ ಕೇಂದ್ರೀಕರಿಸುತ್ತಾರೆ. ಅವರು ಫಿಟ್ನೆಸ್ ಫ್ರೀಕ್. ಸದ್ಯ ಆಕೆ ತನಗಿಂತ 12 ವರ್ಷ ಚಿಕ್ಕವನಾದ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.
ಇನ್ನೂ ಕರೀನಾ ಕಪೂರ್ ಅವರ ಫಿಟ್ನೆಸ್,ಜಿಮ್, ಯೋಗ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ತೈಮೂರ್ ಮತ್ತು ಜೆಹ್ ಅವರ ತಾಯಿ ಬಾಲಿವುಡ್‌ನ ಸೂಪರ್ ಗ್ಲಾಮರಸ್ ಅಮ್ಮಂದಿರಲ್ಲಿ ಒಬ್ಬರು.
RRR ನಟಿ ಶ್ರಿಯಾ ಸರನ್ ಅವರಿಗೆ 39 ವರ್ಷ ಮತ್ತು ಮಗಳ ತಾಯಿ. ಆದರೆ ಇಂದಿಗೂ ಅವರು ತುಂಬಾ ಫಿಟ್ ಆಗಿದ್ದಾರೆ. ಇತ್ತೀಚೆಗಷ್ಟೇ ಆಕೆ ತನ್ನ ಮಗಳ ಜೊತೆ ಬಿಕಿನಿಯಲ್ಲಿ ಎಂಜಾಯ್ ಮಾಡುತ್ತಿದ್ದ ಫೋಟೊಗಳು ವೈರಲ್ ಆಗಿದ್ದವು.
ಶಿಲ್ಪಾ ಶೆಟ್ಟಿಗೆ 46 ವರ್ಷ. ಗರ್ಭಾವಸ್ಥೆಯಲ್ಲಿಯೂ ಅವರು ಸಾಕಷ್ಟು ಫಿಟ್ ಆಗಿದ್ದರು. ಆಕೆ ಯೋಗ ಟ್ರೈನರ್ ಕೂಡ ಹೌದು. ಶಿಲ್ಪಾ ಶೆಟ್ಟಿ ಎರಡು ಮಕ್ಕಳ ತಾಯಿಯಾಗಿದ್ದಾರೆ.
35 ವರ್ಷದ ಲಿಸಾ ಹೇಡನ್ ಮೂರು ಮಕ್ಕಳ ತಾಯಿ. ಆದರೆ ಇಂದಿಗೂ ಆಕೆಯನ್ನು ಕಂಡರೆ ಯಾರೂ ಮೂರು ಮಕ್ಕಳನ್ನು ಹೊಂದಿದ್ದಾರೆ ಎನ್ನುವಂತಿಲ್ಲ. ಫಿಟ್‌ನೆಸ್‌ನಲ್ಲಿ ಎಲ್ಲರನ್ನೂ ಸೋಲಿಸುತ್ತಾರೆ. ಆಕೆಯನ್ನು ಸೂಪರ್ ಫಿಟ್ ಮಾಮ್ ಎಂದು ಕರೆದರೆ ತಪ್ಪಾಗುವುದಿಲ್ಲ.
ಬಾಲಿವುಡ್ ನಟಿ ಟ್ವಿಂಕಲ್ ಖನ್ನಾಗೆ 47 ವರ್ಷ ತುಂಬಿದೆ. ಆದರೆ ಆಕೆ ಎಷ್ಟು ಫಿಟ್ ಆಗಿದ್ದಾರೆ ಎಂದರೆ 19 ವರ್ಷದ ಮಗ ಮತ್ತು ಮಗಳು ಇದ್ದಾರೆ ಎಂದು ಯಾರೂ ಹೇಳಲಾರರು. ಎರಡು ಮಕ್ಕಳ ತಾಯಿ ಬೆಳ್ಳಿತೆರೆಯಿಂದ ದೂರ ಇದ್ದರು ಇಂದಿಗೂ ಫಿಟ್ ಹಾಗೂ ಗ್ಲಾಮರ್ಸ್ ಅಮ್ಮಂದಿರಲ್ಲಿ ಒಬ್ಬರಾಗಿದ್ದಾರೆ.
ಕರಿಷ್ಮಾ ಕಪೂರ್ ಇಬ್ಬರು ಮಕ್ಕಳ ತಾಯಿ. ಸಮೈರಾ ಮತ್ತು ಕಿಯಾನ್ ರಾಜ್ ಕಪೂರ್ ಇಬ್ಬರೂ ಸಾಕಷ್ಟು ದೊಡ್ಡವರಾಗಿದ್ದಾರೆ. ಆದರೆ ನಟಿಯ ಚರ್ಮದಲ್ಲಿ ಸಹ ಅವರ ವಯಸ್ಸನ್ನು ಊಹಿಸಲು ಸಾಧ್ಯವಾಗುವುದಿಲ್ಲ. 47ರ ಹರೆಯದಲ್ಲೂ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ.
49 ವರ್ಷದ ಮಂದಿರಾ ಬೇಡಿ ಅವರು ಫಿಟ್ನೆಸ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಇಬ್ಬರು ಮಕ್ಕಳ ತಾಯಿ ಮಂದಿರಾ ಅವರು ಫಿಟ್ನೆಸ್ ಹಾಗೂ ಹಾಟ್ನೆಸ್‌ಗೆ ಯುವ ನಟಿಯರು ಸಾಟಿಯಿಲ್ಲ. ಅವರು ವರ್ಕೌಟ್ ಮೇಲೆ ಸಂಪೂರ್ಣ ಗಮನಹರಿಸಿದ್ದಾರೆ. ಮಂದಿರಾ ಅವರಿಗೆ ಒಬ್ಬ ಸ್ವಂತ ಮಗನಿದ್ದಾನೆ ಮತ್ತು ಮಗಳನ್ನು ದತ್ತು ಪಡೆದಿದ್ದಾರೆ.
<p style="text-align: justify;"><strong>Hrithik Roshan</strong><br />Hrithik Roshan loves being doing all of the fun stuff with his two kids. Once hi ex-wife Sussane called him as, 'best-dad ever'.</p>
ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸಾನೆ ಖಾನ್ ಕೂಡ ಫಿಟ್ನೆಸ್ ಫ್ರೀಕ್. 43 ವರ್ಷದ ಸುಸ್ಸೇನ್ ಎರಡು ಮಕ್ಕಳ ತಾಯಿಯಾಗಿದ್ದರೂ ಇನ್ನೂ ತುಂಬಾ ಗ್ಲಾಮರಸ್ ಆಗಿ ಕಾಣಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.