MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಬಾಲಿವುಡ್‌ನ ಪ್ರಸಿದ್ಧ ಖಳನಾಯಕರ Beautiful ಹೆಣ್ಣು ಮಕ್ಕಳು ಇವರು

ಬಾಲಿವುಡ್‌ನ ಪ್ರಸಿದ್ಧ ಖಳನಾಯಕರ Beautiful ಹೆಣ್ಣು ಮಕ್ಕಳು ಇವರು

ಚಲನಚಿತ್ರದ ಯಶಿಸ್ಸಿನ ಕ್ರೆಡಿಟ್‌ ಸಾಮಾನ್ಯವಾಗಿ ಮುಖ್ಯ ನಟ ಮತ್ತು ನಟಿಗೆ ನೀಡಲಾಗುತ್ತದೆ ಆದರೆ ಸಿನಿಮಾದ ಖಳನಾಯಕರು ಅಥವಾ ನೆಗೆಟಿವ್‌ ಪಾತ್ರಗಳು ಸಹ ಸಿನಿಮಾ ಪೂರ್ಣಗೊಳ್ಳಲು ಅಷ್ಟೇ ಮುಖ್ಯ.ಸಿನಿಮಾದಲ್ಲಿ ವಿಲನ್‌ಗಳ ರೋಲ್‌ಗಳನ್ನು ಕಡೆಗಣಿಸಲಾಗುವುದಿಲ್ಲ. ಇದೇ ರೀತಿ ಬಾಲಿವುಡ್‌ನ ಹಲವು ನಟರು ತಮ್ಮ ಕೆರಿಯರ್‌ನಲ್ಲಿ ಖಳನಾಯಕನ ಪಾತ್ರಗಳನ್ನೇ ಮಾಡಿ ಸಖತ್‌ ಫೇಮಸ್‌ ಆಗಿದ್ದಾರೆ ಮತ್ತು ಇಂದಿಗೂಅವರ ನಟನೆ ಜನರ ಮನಸ್ಸಿನಲ್ಲಿ ಉಳಿದಿದೆ. ಈ ನಟರ ಹೆಣ್ಣುಮಕ್ಕಳ ಪರಿಚಯ ಇಲ್ಲಿದೆ.

2 Min read
Author : Suvarna News
Published : Feb 07 2023, 04:49 PM IST
Share this Photo Gallery
  • FB
  • TW
  • Linkdin
  • Whatsapp
112

ಅಮರೀಶ್ ಪುರಿ - ನಮ್ರತಾ ಪುರಿ : ಮೊಗಾಂಬೋ, ಬಲ್ವಂತ್ ರಾಯ್ ಮುಂತಾದ ಪಾತ್ರಗಳಿಗೆ ತಮ್ಮ ಕ್ಲಾಸ್ ನಟನೆಯಿಂದ ಅಮರವಾಗಿಸಿದ ಅಮರೀಶ್ ಪುರಿ ಬೆಸ್ಟ್‌ ನಟರಲ್ಲಿ ಒಬ್ಬರು. ನಟನೆಯಿಂದ ದೂರವಿರುವ ಅವರ ಮಗಳು ನಮ್ರತಾ ಪುರಿ ವೃತ್ತಿಯಲ್ಲಿ ಸ್ಟೈಲಿಸ್ಟ್.

212

ಮೊಹ್ನಿಶ್ ಬಹ್ಲ್ - ಕ್ರಿಶಾ ಮತ್ತು ಪ್ರನೂತನ್: ಮೊಹ್ನಿಶ್ ಅವರು ಚಲನಚಿತ್ರಗಳು ಮತ್ತು ಟಿವಿಯಲ್ಲಿ  ನೆಗೆಟಿವ್‌  ಪಾತ್ರಗಳ ಜೊತೆ ಪೋಷಕ ಪಾತ್ರಗಳನ್ನೂ ಮಾಡಿದ್ದಾರೆ. ಅವರು ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿದ್ದಾರೆ, ಪ್ರಣುತನ್ ನೋಟ್‌ಬುಕ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ ಆದೇ ಕ್ರಿಶಾ  ಫೇಮ್‌ನಿಂದ ದೂರ ಇರುವ ಜೀವನವನ್ನು ಉಳಿಸಿಕೊಳ್ಳಲು ಇಷ್ಟಪಡುತ್ತಾರೆ.

312

ಶಕ್ತಿ ಕಪೂರ್ - ಶ್ರದ್ಧಾ ಕಪೂರ್: ಶಕ್ತಿ ಕಪೂರ್  ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ವಿಲನ್ ಆಗಿದ್ದಾರೆ ಮತ್ತು ಅವರ ಮಗಳು  ಶ್ರದ್ಧಾ ಕಪೂರ್ ಪ್ರಸ್ತುತ ಬಾಲಿವುಡ್‌ನ ಹೆಚ್ಚು ಬೇಡಿಕೆಯಿರುವ ನಟಿಯಾಗಿದ್ದಾರೆ.

412

ಕುಲಭೂಷಣ ಖರಬಂದ – ಶ್ರುತಿ ಖರಬಂದ :  ಕುಲಭೂಷಣ್ ಖರ್ಬಂದಾ ಅವರು ತಮ್ಮ ಪ್ರಸಿದ್ಧ ವೃತ್ತಿಜೀವನದಲ್ಲಿ ಹಲವಾರು ವಿಭಿನ್ನ ಪಾತ್ರಗಳನ್ನು ಹೊಂದಿದ್ದಾರೆ. ಆದಾಗ್ಯೂ,ಅಮಿತಾಭ್ ಬಚ್ಚನ್ ಮತ್ತು ಶಶಿ ಕಪೂರ್ ಅವರ ಶಾನ್ ಚಿತ್ರದಲ್ಲಿನ ಶಾಕಾಲ್ ಎಂಬ ಪಾತ್ರಕ್ಕಾಗಿ ಅವರು ಹೆಚ್ಚು ಜನಪ್ರಿಯರಾಗಿದ್ದಾರೆ. ಅವರ ಮಗಳು ಶ್ರುತಿ ಖರ್ಬಂದಾ ಅವರು ಬಾಲಿವುಡ್‌ನಿಂದ ದೂರ ಇದ್ದಾರೆ. ಆದರೆ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಸಕ್ರಿಯರಾಗಿದ್ದಾರೆ.

512

ಅಮ್ಜದ್ ಖಾನ್ - ಅಹ್ಲಾಮ್ ಖಾನ್: ಅಮ್ಜದ್ ಖಾನ್ ಅವರು ಬಹುಶಃ ಬಾಲಿವುಡ್‌ನ ಅತ್ಯಂತ ಪ್ರೀತಿಯ ಖಳನಾಯಕ ನಟರಾಗಿದ್ದರು ಮತ್ತು ಅವರು ಶೋಲೆ ಚಿತ್ರದಲ್ಲಿ ನಟಿಸಿದ ಗಬ್ಬರ್ ಸಿಂಗ್ ಪಾತ್ರಕ್ಕಾಗಿ ಅವರು ಹೆಚ್ಚು ಜನಪ್ರಿಯರಾಗಿದ್ದಾರೆ. ಅವರ  ಮಗಳು ಅಹ್ಲಾಮ್ ಖಾನ್ ನಟಿ ಮತ್ತು ಒಂದೆರಡು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಆದರೆ ಅವರು ರಂಗಭೂಮಿಯನ್ನು ಹೆಚ್ಚು  ಇಷ್ಷಪಡುತ್ತಾರೆ.

612

ಪ್ರಾಣ್-ಪಿಂಕಿ ಸಿಕಂದ್::ಪ್ರಾಣ್ ಅವರ ಸಂಪೂರ್ಣ ಹೆಸರು ಪ್ರಾಣ್ ಕಿಶನ್ ಸಿಕಂದ್ ಕೂಡ ತಮ್ಮ ನಟನೆಯಮೂಲಕ ಛಾಪು ಮೂಡಿಸರುವ ನಟರು  ಅವರು ತಮ್ಮ ಐವತ್ತು ವರ್ಷಗಳ ನಟನಾ ವೃತ್ತಿಜೀವನದಲ್ಲಿ ವಿಭಿನ್ನ ಪಾತ್ರಗಳನ್ನು ವಹಿಸಿಕೊಂಡರು. ಪ್ರಾಣ್‌ಗೆ ಪಿಂಕಿ ಸಿಕಂದ್ ಎಂಬ ಮಗಳಿದ್ದಾಳೆ, ಅವರು ಬಾಲಿವುಡ್‌ಗೆ ಪ್ರವೇಶಿಸಿಲ್ಲ 
.

712

ನಾಸಿರುದ್ದೀನ್ ಶಾ - ಹೀಬಾ ಶಾ: ನಾಸಿರುದ್ದೀನ್ ಶಾ ನಿಸ್ಸಂದೇಹವಾಗಿ ಅತ್ಯುತ್ತಮ ನಟರಲ್ಲಿ ಒಬ್ಬರು ಮತ್ತು ಅವರ ಮಗಳು  ಹೀಬಾ ಷಾ ಅವರ ನಟನೆ ಕೂಡ ಮೆಚ್ಚುಗೆ ಗಳಿಸಿದೆ. ಹೀಬಾ ಅವರು ರಂಗಭೂಮಿಯಲ್ಲಿ ಕೆಲಸ ಮಾಡಲು ಇಷ್ಟಪಟ್ಟರೂ ಒಂದೆರಡು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

812

ಮ್ಯಾಕಿಂತೋಷ್ ಮೋಹನ್ - ಮಂಜರಿ ಮತ್ತು ವಿನತಿ: ಮ್ಯಾಕಿಂತೋಷ್ ಮೋಹನ್ ಅವರು ಶೋಲೆ ಚಿತ್ರದ ಸಾಂಬಾ ಪಾತ್ರದ ಜೊತಗೆ ಹಲವು ಪಾತ್ರಗಳಲ್ಲಿ ತಮ್ಮ ಛಾಪು  ಮೂಡಿಸಿದ್ದಾರೆ. ಇವರ ಮಕ್ಕಳಾದ ಮಂಜರಿ ಮತ್ತು ವಿನತಿ ಶೀಘ್ರದಲ್ಲೇ ಬಾಲಿವುಡ್‌ಗೆ ಲೇಖಕಿ ಮತ್ತು ನಿರ್ಮಾಪಕಿಯಾಗಿ ಡೆಸರ್ಟ್ ಡಾಲ್ಫಿನ್ ಚಿತ್ರದ ಮೂಲಕ ಎಂಟ್ರಿ ನೀಡಲಿದ್ದಾರೆ.

912

 ರಾಜ್ ಬಬ್ಬರ್ - ಜೂಹಿ ಬಬ್ಬರ್ :ರಾಜ್ ಬಬ್ಬರ್ ಹಲವಾರು ಹಿಂದಿ ಮತ್ತು ಪಂಜಾಬಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರಾಜ್ ಬಬ್ಬರ್ ಅವರ ಮಗಳು  ಜೂಹಿ ಬಬ್ಬರ್  ಅವರು ಬಾಲಿವುಡ್‌ನಲ್ಲಿ ಯಾವುದೇ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ, ಆದರೆ ಟಿವಿ ಮತ್ತು ರಂಗಭೂಮಿಯಲ್ಲೂ ಕೆಲಸ ಮಾಡಿದ್ದಾರೆ. ಅವರು ಟಿವಿ ನಟ ಅನುಪ್ ಸೋನಿ ಅವರನ್ನು  ಮದುವೆಯಾಗಿದ್ದಾರೆ ಮತ್ತು ದಂಪತಿಗೆ ಒಂದು ಮಗುವಿದೆ.

1012

ಓಂ ಶಿವಪುರಿ - ರಿತು ಶಿವಪುರಿ: ಓಂ ಶಿವಪುರಿ ಹಲವಾರು ಸಿನಿಮಾಗಳಲ್ಲಿ ನೆಗೆಟಿವ್ ಭಾಗಗಳನ್ನು ಧರಿಸಿದ್ದಾರೆ ಮತ್ತು ಅವರ ಮಗಳು  ರಿತು ಶಿವಪುರಿ ಕೂಡ ಒಂದೆರಡು ಸಿನಿಮಾಗಳಲ್ಲಿ ಕೆಲಸ ಮಾಡಿರುವ ನಟಿ.

1112

ರಂಜೀತ್ - ದಿವ್ಯಾಂಕ ಬೇಡಿ: ರಂಜೀತ್ ಅವರು ಹಿಂದಿ ಮತ್ತು ಪಂಜಾಬ್ ಚಲನಚಿತ್ರೋದ್ಯಮದ  ಅತ್ಯಂತ  ಮೆಚ್ಚುಗೆ ಪಡೆದ ಖಳನಾಯಕರಾಗಿದ್ದಾರೆ, ಆದರೆ ಅವರ ಮಗಳು  ನಟನೆಯಲ್ಲಿ  ಪ್ರಯತ್ನ ಮಾಡಲಿಲ್ಲ ಮತ್ತು ದಿವ್ಯಾಂಕ ಖ್ಯಾತ ಸ್ಟೈಲಿಸ್ಟ್ ಆಗಿದ್ದಾರೆ.

1212

ಡ್ಯಾನಿ ಡೆನ್ಜಾಂಗ್ಪಾ - ಪೆಮಾ ಡೆನ್ಜಾಂಗ್ಪಾ: ಬಾಲಿವುಡ್‌ನ ಇನ್ನೊಬ್ಬ ಅದ್ಭುತ ಖಳ ನಾಯಕ ಡ್ಯಾನಿ ಡೆನ್‌ಜಾಂಗ್‌ಪಾ  ಅವರ ಮಗಳು ಪೆಮಾ ಡೆನ್‌ಜಾಂಗ್ಪಾ ಅವರು ಬಾಲಿವುಡ್‌ನಿಂದ ದೂರವಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಬಾಲಿವುಡ್

Latest Videos
Recommended Stories
Recommended image1
ರಶ್ಮಿಕಾ-ವಿಜಯ್ ಮದುವೆಯಾಗುತ್ತಿರುವ ಹೊಟೇಲ್ ರೂಮಿನ ಒಂದು ದಿನದ ಬಾಡಿಗೆ ಇಷ್ಟೊಂದಾ?
Recommended image2
ಅಯ್ಯಪ್ಪ ಮಾಲೆ ಧರಿಸಿ ಎಣ್ಣೆ ಪಾರ್ಟಿಗೆ ಬಂದ ರಾಮ್‌ ಚರಣ್‌ ತೇಜ, ನೆಟ್ಟಿಗರ ಟ್ರೋಲ್‌!
Recommended image3
Nayanthara Caravan: ಭಾರೀ ಕಂಡೀಷನ್ಸ್ ಹಾಕ್ತಾರಾ ನಯನತಾರಾ? ಕ್ಯಾರವಾನ್‌ ಒಳಗೆ ಏನೆಲ್ಲಾ ಇರಬೇಕಂತೆ ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved