- Home
- Entertainment
- Cine World
- India's Floppest Star: ಇವರು ಭಾರತದ ಫ್ಲಾಪ್ ಸೂಪರ್ ಸ್ಟಾರ್… 180 ಸಿನಿಮಾಗಳು ಫ್ಲಾಪ್… ನೆಟ್ ವರ್ತ್ ಮಾತ್ರ…
India's Floppest Star: ಇವರು ಭಾರತದ ಫ್ಲಾಪ್ ಸೂಪರ್ ಸ್ಟಾರ್… 180 ಸಿನಿಮಾಗಳು ಫ್ಲಾಪ್… ನೆಟ್ ವರ್ತ್ ಮಾತ್ರ…
ಒಂದು ಕಾಲದಲ್ಲಿ ವಾಸಿಸಲು ಮನೆಯೂ ಇಲ್ಲದ ಈ ನಟ, ಅನೇಕ ಫ್ಲಾಪ್ ಚಿತ್ರಗಳನ್ನು ನೀಡಿ. ಈಗ ಉದ್ಯಮದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರಾಗಿದ್ದಾರೆ.

ಅತಿ ಹೆಚ್ಚು ಫ್ಲಾಪ್ ಚಿತ್ರಗಳನ್ನು ನೀಡಿದ ನಟ
80-90ರ ದಶಕದಲ್ಲಿ, ಬಾಲಿವುಡ್ ನಲ್ಲಿ (Bollywood) ಅಮಿತಾಬ್ ಬಚ್ಚನ್, ಧರ್ಮೇಂದ್ರ, ವಿನೋದ್ ಖನ್ನಾ ಮತ್ತು ರಾಜೇಶ್ ಖನ್ನಾ ಅವರಂತಹ ಸೂಪರ್‌ಸ್ಟಾರ್‌ಗಳೇ ಮೆರೆಯುತ್ತಿದ್ದರು. ಈ ಸಮಯದಲ್ಲಿ, ಈ ತಾರೆಯರಿಗೆ ಕಠಿಣ ಸ್ಪರ್ಧೆಯನ್ನು ನೀಡಿದ ನಟ ಬಾಲಿವುಡ್‌ಗೆ ಪ್ರವೇಶಿಸಿದರು. ಆದರೆ ಈ ನಟ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಫ್ಲಾಪ್ ಚಿತ್ರಗಳನ್ನು ನೀಡಿದ ದಾಖಲೆ ಹೊಂದಿರುವ ನಟನಾಗಿ ಜನಪ್ರಿಯತೆ ಪಡೆದಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ
1976 ರಲ್ಲಿ ಮೃಗಯಾ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ತಮ್ಮ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಮಿಥುನ್ ಚಕ್ರವರ್ತಿಯೇ (Mithun Chakraborty) ಆ ಫ್ಲಾಪ್ ಚಿತ್ರಗಳ ಮೂಲಕ ದಾಖಲೆ ಬರೆದ ನಟ.
180 ಫ್ಲಾಪ್ ಚಿತ್ರಗಳನ್ನು ನೀಡಿದ ಮಿಥುನ್ ದಾದ
ಬಾಲಿವುಡ್‌ನ ಅನೇಕ ಸೂಪರ್‌ಸ್ಟಾರ್‌ಗಳು (superstars) ತಮ್ಮ ವೃತ್ತಿಜೀವನದಲ್ಲಿ ದಾಖಲೆಯ ಫ್ಲಾಪ್ ಚಿತ್ರಗಳನ್ನು ನೀಡಿದ್ದಾರೆ. ಅನೇಕ ಚಲನಚಿತ್ರ ನಿರ್ಮಾಪಕರ ಮೊದಲ ಆಯ್ಕೆಯಾಗಿದ್ದರೂ, ಈ ನಟ ತಮ್ಮ 47 ವರ್ಷಗಳ ವೃತ್ತಿಜೀವನದಲ್ಲಿ 180 ಫ್ಲಾಪ್ ಚಿತ್ರಗಳನ್ನು ನೀಡಿದ ಬಾಲಿವುಡ್‌ನ ಏಕೈಕ ತಾರೆ.
100 ಕೋಟಿ ಗಳಿಸಿದ ಮೊದಲ ಚಿತ್ರ
ರಾಷ್ಟ್ರೀಯ ಪ್ರಶಸ್ತಿ ಗೆಲ್ಲುವುದರ ಜೊತೆಗೆ, ಅವರು ಚಿತ್ರರಂಗಕ್ಕೆ 100 ಕೋಟಿ ಗಳಿಸಿದ ಮೊದಲ ಚಿತ್ರ ಡಿಸ್ಕೋ ಡ್ಯಾನ್ಸರ್ (Disco Dancer) ಅನ್ನು ನೀಡಿದರು. 80 ರ ದಶಕದಲ್ಲಿ, ಅವರು ಹಲವಾರು ಹಿಟ್ ಸಿನಿಮಾ ನೀಡಿದ್ದರು.
ಫುಟ್‌ಪಾತ್‌ನಲ್ಲಿ ಮಲಗುತ್ತಿದ್ದರು
ಸೂಪರ್‌ಸ್ಟಾರ್ ಆಗುವ ಮೊದಲು, ನಟ ಹಲವು ಕಷ್ಟಗಳನ್ನು ಎದುರಿಸಿದ್ದರು. ಅವರು ಬಾಲಿವುಡ್ ನಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವಾಗ, ಅವರಿಗೆ ಮನೆಯೇ ಇರಲಿಲ್ಲವಂತೆ, ಫುಟ್ ಪಾತ್ ನಲ್ಲಿ ಮಲಗುತ್ತಿದ್ದರು ಈ ಸ್ಟಾರ್.
50 ಹಿಟ್ ಚಿತ್ರಗಳಲ್ಲಿ ನಟಿಸಿದ ದಾಖಲೆ
ಮಿಥುನ್ ಚಕ್ರವರ್ತಿ 180 ಫ್ಲಾಪ್ ಚಿತ್ರಗಳಲ್ಲಿ (180 flop films) ನಟಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ, ಅಷ್ಟೇ ಅಲ್ಲ ಅವರು 50 ಹಿಟ್ ಚಿತ್ರಗಳಲ್ಲಿ ನಟಿಸಿದ ದಾಖಲೆಯನ್ನು ಹೊಂದಿದ್ದಾರೆ.
400 ಕೋಟಿಯ ನೆಟ್ ವರ್ತ್
ವರದಿ ಪ್ರಕಾರ ಅವರ ನಿವ್ವಳ ಮೌಲ್ಯ (networth) 50 ಮಿಲಿಯನ್ ರೂ.ಗಳಾಗಿದ್ದು, ಇದು ಸುಮಾರು 400 ಕೋಟಿ ರೂ.ಗಳಿಗೆ ಸಮಾನವಾಗಿದೆ. ಇದರ ಹೊರತಾಗಿ, ಅವರು ಭಾರತದಾದ್ಯಂತ ಹಲವಾರು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಕೂಡ ಹೊಂದಿದ್ದಾರೆ.
ಯಶಸ್ಸು ಮತ್ತು ವೈಫಲ್ಯವನ್ನು ಕಂಡ ಚಕ್ರವರ್ತಿ
ಸರಣಿಯ ಸೋಲಿನ ಹೊರತಾಗಿಯೂ, ಮಿಥುನ್ ಚಕ್ರವರ್ತಿ ಕಳೆದ ಕೆಲವು ವರ್ಷಗಳಿಂದ ತಮ್ಮ ಸೂಪರ್‌ಸ್ಟಾರ್ ಸ್ಥಾನ ಮಾತ್ರವಲ್ಲದೆ ತಮ್ಮ ಸಂಪತ್ತನ್ನೂ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.