- Home
- Entertainment
- Cine World
- ಯಪ್ಪಾ, ಹಿಂಗೆಲ್ಲ ಇರುತ್ತಾ ಆಡಿಶನ್?! 10 ಗಂಡಸರನ್ನು ನಿಲ್ಲಿಸಿ ನಟಿಯ ಬಳಿ ಕಿಸ್ ಮಾಡಲು ಹೇಳಿದ ನಿರ್ದೇಶಕ!
ಯಪ್ಪಾ, ಹಿಂಗೆಲ್ಲ ಇರುತ್ತಾ ಆಡಿಶನ್?! 10 ಗಂಡಸರನ್ನು ನಿಲ್ಲಿಸಿ ನಟಿಯ ಬಳಿ ಕಿಸ್ ಮಾಡಲು ಹೇಳಿದ ನಿರ್ದೇಶಕ!
ಚಲನಚಿತ್ರಗಳಿಗೆ ಆಯ್ಕೆಯಾಗೋದು ಸಣ್ಣ ಮಾತಲ್ಲ. ಅದರಲ್ಲೂ 20 ವರ್ಷಗಳ ಹಿಂದೆ ಅದು ಬಹಳ ಕಷ್ಟದ ವಿಷಯವೇ. ಆಗ ಆಡಿಶನ್‌ನಲ್ಲಿ ತನಗೆದುರಾದ ಸಂಕಟವನ್ನು ಹಂಚಿಕೊಂಡಿದ್ದಾರೆ ಸೂಪರ್ ಸ್ಟಾರ್ ನಟಿ..

ಚಿತ್ರಗಳಲ್ಲಿ ಇಂಟಿಮೇಟ್ ಸೀನ್‌ಗಳು ಈಗ ಸಾಮಾನ್ಯ. ಆದರೆ, 25 ವರ್ಷಗಳ ಹಿಂದೆ ಅವು ನಟನೆ ಇಷ್ಟ ಪಟ್ಟವರೆಲ್ಲರಿಗೂ ಒಗ್ಗುತ್ತಿದ್ದುದಲ್ಲ. ಅದರಲ್ಲೂ ಆಡಿಶನ್‌ನಲ್ಲಿ ಅಂಥಾ ನಟನೆ ಯಾವ ನಟಿಗೂ ಸುಲಭವಲ್ಲ.
ಆದರೆ, ಈ ನಟಿಗೆ 2000ದ ದಶಕದಲ್ಲಿ ತಾವು ಮೊದಲ ಬಾರಿ ಆಡಿಶನ್ ಕೊಡಲು ಹೋದಾಗ ನಿರ್ದೇಶಕರು 10 ಜನ ಗಂಡಸರನ್ನು ಕರೆಸಿ ಅವರೆಲ್ಲರ ಜೊತೆ ಬಹಳ ಆಪ್ತವಾಗಿ ಕಿಸ್ ಮಾಡುವಂತೆ ಹೇಳಿದ್ದರಂತೆ!
ಇತರ ನಟರ ಜೊತೆ ನಟಿಯ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಹೇಗೆ ಕಾಣುತ್ತದೆ ಎಂದು ಪರೀಕ್ಷಿಸಲು ನಿರ್ದೇಶಕರ ತಂತ್ರ ಇದಾಗಿತ್ತಂತೆ!
ಈ ಬಗ್ಗೆ ವಿವರಿಸಿದ ನಿರ್ದೇಶಕರು, 'ಇಷ್ಟೊಂದು ಸಹನಟರ ಜತೆ ಮೇಕ್ಔಟ್ ಸೆಶನ್‌ನಲ್ಲಿ ಭಾಗವಹಿಸಲು ನೀವು ಉತ್ಸುಕರಾಗಿಲ್ಲವೇ' ಎಂದು ಕೇಳಿದರಂತೆ.
ಈ ಎಲ್ಲ ಮೊದಲ ಅನುಭವ ಹಂಚಿಕೊಂಡಿದ್ದು, ಆಸ್ಕರ್ ವಿಜೇತೆ, ಹಾಲಿವುಡ್ ನಟಿ ಆನ್ನೆ ಹಾಥ್ವೆ. ತಾವು ಎದುರಿಸಿದ ಈ ಪ್ರಶ್ನೆಯಿಂದಾಗಿ ಆಕೆ, ತನ್ನಲ್ಲೇನೋ ತೊಂದರೆ ಇರಬೇಕು. ಅದಕ್ಕೇ ತಾನು ಎಕ್ಸೈಟ್ ಆಗುತ್ತಿಲ್ಲ ಎಂದುಕೊಂಡಿದ್ದಾಗಿ ಹೇಳಿದ್ದಾರೆ.
ಇಂಥ ಆಡಿಶನ್ ಅಭ್ಯಾಸ ಆ ಸಮಯದಲ್ಲಿ ಹಾಲಿವುಡ್‌ನಲ್ಲಿ ಸಾಮಾನ್ಯವಾಗಿತ್ತು, ಆದರೆ, ಈಗ ಇದು ಹಳತಾಗಿದೆ ಮತ್ತು ಅನಾನುಕೂಲತೆಯನ್ನು ನಟಿಯರು ಹೇಳಬಹುದು ಎಂದು ಆನ್ನೆ ತಿಳಿಸಿದ್ದಾರೆ.
ಆಗ ತಾನೇನಾದರೂ ನೋ ಎಂದರೆ ಆ ನಟಿಯೊಂದಿಗೆ ಏಗುವುದು ಕಷ್ಟ ಎನ್ನುತ್ತಾರೇನೋ ಎಂಬ ಸಂದಿಗ್ಧತೆಯನ್ನು ನಟಿ ಅನುಭವಿಸಿದ್ದರಂತೆ.
ಅನ್ನೆ ಹ್ಯಾಥ್ವೇ ಈಗ ಹಾಲಿವುಡ್‌ನ ಸೂಪರ್ ಸ್ಟಾರ್. 2024 ರ ಹೊತ್ತಿಗೆ ಆಕೆಯ ಅಂದಾಜು ನಿವ್ವಳ ಮೌಲ್ಯ $80 ಮಿಲಿಯನ್ (ರೂ. 6,66,97,08,000).
ಈ ವರ್ಷ ಮೇ 2 ರಂದು ಬಿಡುಗಡೆಯಾಗಲಿರುವ 'ದಿ ಐಡಿಯಾ ಆಫ್ ಯು' ಚಿತ್ರದಲ್ಲಿ ಅನ್ನಿ ಹ್ಯಾಥ್‌ವೇ ಈಗ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.