ವೈವಾಹಿಕ ಜೀವನ ವಿಫಲವಾಗಿ 4 ಬಾರಿ ಮದುವೆಯಾದ ನಟಿಗೆ ಬಾಲಿವುಡ್ ಕೂಡ ಕೈ ಹಿಡಿಯಲಿಲ್ಲ!
ಪಾಕಿಸ್ತಾನಿ ನಟರಾದ ಮಹಿರಾ ಖಾನ್, ಫವಾದ್ ಖಾನ್ ಮತ್ತು ಇತರರು ಬಾಲಿವುಡ್‌ನಲ್ಲಿ ಪಾದಾರ್ಪಣೆ ಚಿತ್ರದಲ್ಲಿ ಗೆದ್ದು ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಆದರೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಂತರ ಭಾರತದಲ್ಲಿ ಮನೆಮಾತಾಗಿರುವ ಪಾಕಿಸ್ತಾನಿ ನಟಿಯೊಬ್ಬರು ತಮ್ಮ ಇತರ ಹಿಂದಿ ಚಿತ್ರದಲ್ಲಿ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲರಾದರು.
ನಟ ರಿಷಿ ಕಪೂರ್ ಅವರೊಂದಿಗೆ ಮೊದಲು ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ಬೇರೆ ಯಾರೂ ಅಲ್ಲ ಝೀಬಾ ಬಕ್ತಿಯಾರ್ ಈಕೆಗೆ ಅದ್ನಾನ್ ಸಾಮಿ ಮತ್ತು ಜಾವೇದ್ ಜಾಫರಿ ಜೊತೆಗೆ ಸಂಪರ್ಕವಿದೆ. ಝೆಬಾ ಬಖ್ತಿಯಾರ್ ಅವರು ಪಾಕಿಸ್ತಾನದ ಬಲೂಚಿಸ್ತಾನ್‌ನಲ್ಲಿ ಜನಿಸಿದರು ಮತ್ತು ಪಾಕಿಸ್ತಾನದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ ವಕೀಲರು, ರಾಜಕಾರಣಿ ಮತ್ತು ಸ್ವಾತಂತ್ರ್ಯಪೂರ್ವ ಮುಸ್ಲಿಂ ಲೀಗ್ ಕಾರ್ಯಕರ್ತ ಯಾಹ್ಯಾ ಬಖ್ತಿಯಾರ್ ಅವರ ಮಗಳು.
1988 ರಲ್ಲಿ ಪಾಕಿಸ್ತಾನದ ಟೆಲಿವಿಷನ್ ನಾಟಕ ಅನಾರ್ಕಲಿಯೊಂದಿಗೆ ಝೀಬಾ ದೂರದರ್ಶನಕ್ಕೆ ಪದಾರ್ಪಣೆ ಮಾಡಿದರು. ಈ ಸರಣಿಯಲ್ಲಿನ ಅಭಿನಯವು ಪ್ರೇಕ್ಷಕರಿಂದ ಹೆಚ್ಚು ಮೆಚ್ಚುಗೆ ಪಡೆಯಿತು. ಇದರ ನಂತರ, ಅವರು 1991 ರಲ್ಲಿ ರಣಧೀರ್ ಕಪೂರ್ ಅವರ ನಿರ್ದೇಶನದಲ್ಲಿ ರಿಷಿ ಕಪೂರ್ ಅವರೊಂದಿಗೆ ಹೆನ್ನಾ ಎಂಬ ಬಾಲಿವುಡ್ ಚಿತ್ರಕ್ಕೆ ಸಹಿ ಹಾಕಿದರು. ಈ ಚಿತ್ರವು ಝೀಬಾ ಅವರನ್ನು ಬಹು ಎತ್ತರಕ್ಕೆ ಕೊಂಡೊಯ್ಯಿತು. ಬಳಿಕ ಅವರು ಮೊಹಬ್ಬತ್ ಕಿ ಅರ್ಜೂ, 1994 ರಲ್ಲಿ ಸ್ಟಂಟ್‌ಮ್ಯಾನ್, 1995 ರಲ್ಲಿ ಜೈ ವಿಕ್ರಾಂತ ಮತ್ತು 1996 ರಲ್ಲಿ ಮುಕದಾಮಾದಂತಹ ಹೆಚ್ಚು ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದರೂ ಯಾವುದೂ ಕೂಡ ಹೆಸರು ತಂದು ಕೊಡಲಿಲ್ಲ.
ಝೀಬಾ ನಂತರ ಪಾಕಿಸ್ತಾನಕ್ಕೆ ಮರಳಿದರು ಮತ್ತು ಸೈಯದ್ ನೂರ್ ನಿರ್ದೇಶನದ ಸರ್ಗಮ್ ಚಲನಚಿತ್ರದಲ್ಲಿ ಕೆಲಸ ಮಾಡಿದರು ಅದು ಯಶಸ್ವಿಯಾಯಿತು. ಆಕೆಯ ಇತರ ಚಲನಚಿತ್ರಗಳಲ್ಲಿ ಚೀಫ್ ಸಾಹಿಬ್, ಕೈದ್ ಮತ್ತು ಮುಸಲ್ಮಾನ್ ಸೇರಿವೆ. ಇದಲ್ಲದೆ, ಅವರು ತಾನ್ಸಾನ್, ಲಾಗ್ ಮತ್ತು ಪೆಹ್ಲಿ ಸೀ ಮೊಹಬ್ಬತ್‌ನಂತಹ ಕೆಲವು ಜನಪ್ರಿಯ ದೂರದರ್ಶನ ನಾಟಕಗಳಲ್ಲಿ ಕಾಣಿಸಿಕೊಂಡರು. ಬಳಿಕ ನಿರ್ದೇಶನ ಮತ್ತು ನಿರ್ಮಾಣ ಕೂಡ ಮಾಡಿದರು.
ಇನ್ನು ಅವರ ವೈಯಕ್ತಿಕ ಜೀವನ ಕಹಿಯಾಗಿಯೇ ಇದೆ. ಝೆಬಾ ಬಕ್ತಿಯಾರ್ 4 ಬಾರಿ ವಿವಾಹವಾಗಿದ್ದಾರೆ. ಆಕೆಯ ಮೊದಲ ಪತಿ ಸಲ್ಮಾನ್ ಗಲಿಯಾನಿ, ಅವರನ್ನು 1982 ರಲ್ಲಿ ವಿವಾಹವಾದರು. 1989 ರಲ್ಲಿ ಅವರು ಜಾವೇದ್ ಜಾಫ್ರಿ ಅವರನ್ನು ವಿವಾಹವಾದರು ಆದರೆ ಇದು ವದಂತಿ ಎಂದು ನಿರಾಕರಿಸಿದರು. ಜಾವೇದ್ ನಿಕಾಹ್ ನಾಮಾವನ್ನು ನಿರ್ಮಿಸಿದರು ಮತ್ತು ಒಂದು ವರ್ಷದ ನಂತರ ಇಬ್ಬರೂ ವಿಚ್ಛೇದನ ಪಡೆದರು.
ನಂತರ 1993 ರಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕ ಅದ್ನಾನ್ ಸಾಮಿ ಅವರ ವಿವಾಹವಾಗಿ ಸುದ್ದಿಯಾದರು. ಆ ಸಂಬಂಧವೂ ಉಳಿಯಲಿಲ್ಲ ಇಬ್ಬರೂ 1997 ರಲ್ಲಿ ವಿಚ್ಛೇದನ ಪಡೆದರು. ಇಬ್ಬರಿಗೂ ಅಜಾನ್ ಸಾಮಿ ಖಾನ್ ಎಂಬ ಮಗನಿದ್ದಾನೆ. ಅದಾದ ಬಳಿಕ ನಟಿ 2008 ರಲ್ಲಿ ಸೊಹೈಲ್ ಖಾನ್ ಲೆಘರಿಯೊಂದಿಗೆ ವಿವಾಹವಾಗಿ ಪಾಕಿಸ್ತಾನದಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ.
ನಟನೆಯ ಹೊರತಾಗಿ, ನಟಿ ಸಾಮಾಜಿಕ ಕೆಲಸವನ್ನೂ ಮಾಡುತ್ತಿದ್ದಾರೆ ಮತ್ತು ಕರಾಚಿ ಮೂಲದ ದಿಯಾ W.F.C ಯ ಅಧ್ಯಕ್ಷೆಯಾಗಿ ಪಾಕಿಸ್ತಾನದ ಮಹಿಳಾ ಸಂಘದ ಫುಟ್‌ಬಾಲ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಮಧುಮೇಹ ಜಾಗೃತಿ ಅಭಿಯಾನದಲ್ಲಿ ಭಾಗವಹಿಸುತ್ತಾರೆ.