18ವರ್ಷಕ್ಕೆ 3 ಮಕ್ಕಳ ತಂದೆಯ ಮದುವೆಯಾದ ನಟಿ, 38ನೇ ವಯಸ್ಸಿಗೇ ಸಾವು!
ಭಾರತೀಯ ಸಿನಿಮಾರಂಗದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ದುರಂತ ರಾಣಿ ಮೀನಾ ಕುಮಾರಿ (Meeena Kumari)ಅವರ ಹೆಸರು ಮೊದಲು ಕೇಳಿ ಬರುತ್ತದೆ. ಅವರು ಈ ಜಗತ್ತಿನಲ್ಲಿ ಇಲ್ಲದಿರಬಹುದು, ಆದರೆ ಅವರು ಮಾಡಿದ ಪಾತ್ರಗಳು ಅವರನ್ನು ಅಮರಗೊಳಿಸಿವೆ. ಆಗಸ್ಟ್ 1, 1933 ರಂದು ಜನಿಸಿದ ಮೀನಾ ಕುಮಾರಿ ಅವರು ತಮ್ಮ ಅಲ್ಪ ಆಯಸ್ಸಿನ ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಿದ್ದರು. ಅವರು ಚಲನಚಿತ್ರಗಳಲ್ಲಿ ಭಾವನಾತ್ಮಕ ದೃಶ್ಯಗಳನ್ನು ಮಾಡುವಾಗ ಅದಕ್ಕೆ ಜೀವ ತುಂಬುತ್ತಿದ್ದರು. ದೃಶ್ಯಗಳು ಎಷ್ಟು ನೈಜವಾಗಿದ್ದವು ಎಂದರೆ ಅವರಿಗೆ ಟ್ರಾಜಿಡಿ ಕ್ವೀನ್ ಎಂಬ ಪಟ್ಟ ದೊರಕಿತು. ಮೀನಾ ಕುಮಾರಿ ಅವರ ಲೈಫ್‌ನ ಕೆಲವು ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.
ಮೀನಾ ಕುಮಾರಿ ತುಂಬಾ ಚಿಕ್ಕ ವಯಸ್ಸಿನಲ್ಲೇ ಬಣ್ಣದ ಜಗತ್ತಿಗೆ ಪ್ರವೇಶಿಸಿದ್ದರು. ತಮಾಶಾ ಚಿತ್ರದ ಶೂಟಿಂಗ್ ಸಮಯದಲ್ಲಿ ದಾದಾ ಮುನಿ ಅಂದರೆ ಅಶೋಕ್ ಕುಮಾರ್ ಅವರನ್ನು ಚಲನಚಿತ್ರ ನಿರ್ಮಾಪಕ ಕಮಲ್ ಅಮ್ರೋಹಿಗೆ ಪರಿಚಯಿಸಿದರು. ಇದಾದ ನಂತರ ಕಮಲ್ ತಮ್ಮ ಅನಾರ್ಕಲಿ ಚಿತ್ರಕ್ಕೆ ಮೀನಾ ಕುಮಾರಿಯನ್ನು ಸಹಿ ಮಾಡಿದರು.
ಒಪ್ಪಂದಕ್ಕೆ ಸಹಿ ಹಾಕಿದ ಕೇವಲ 5 ದಿನಗಳ ನಂತರ 21 ಮೇ 1951 ರಂದು ಮೀನಾ ಕುಮಾರಿ ಅವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರು. ಇದರಲ್ಲಿ ಅವರ ಒಂದು ಬೆರಳು ತೀವ್ರವಾಗಿ ಪೆಟ್ಟಾಗಿತ್ತು. ಆಗ ವೈದ್ಯಕೀಯ ವಿಜ್ಞಾನ ಅಷ್ಟೊಂದು ಮುಂದುವರಿದಿರಲಿಲ್ಲ ಹಾಗೂ ಮೀನಾ ಕುಮಾರಿಯ ಆ ಬೆರಳು ಸರಿಯಾಗಲಿಲ್ಲ. ಇದರಿಂದಾಗಿ ಕ್ಯಾಮೆರಾ ಆನ್ ಆದ ಕೂಡಲೇ ದುಪಟ್ಟಾ ಅಥವಾ ಸೀರೆಯಿಂದ ಬೆರಳನ್ನು ಮರೆಮಾಚುತ್ತಿದ್ದರು.
ಈ ಅಪಘಾತದ ನಂತರ, ಮೀನಾ ಕುಮಾರಿ ಹಲವಾರು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. ಈ ಸಮಯದಲ್ಲಿ ಕಮಲ್ ಅಮ್ರೋಹಿ ಅವರನ್ನು ಭೇಟಿಯಾಗಲು ಆಗಾಗ್ಗೆ ಆಸ್ಪತ್ರೆಗೆ ಬರುತ್ತಿದ್ದರು ಮತ್ತು ಇಬ್ಬರೂ ಹತ್ತಿರವಾದರು.
ಇದಾದ ನಂತರ, 14 ಫೆಬ್ರವರಿ 1952 ರಂದು, ಕೇವಲ 18 ವರ್ಷ ವಯಸ್ಸಿನ ಮೀನಾ ಕುಮಾರಿ ತನ್ನ ಎರಡು ಪಟ್ಟು ಹೆಚ್ಚು ವಯಸ್ಸಿನ ಕಮಲ್ ಅಮ್ರೋಹಿಯೊಂದಿಗೆ ಗುಟ್ಟಾಗಿ ವಿವಾಹವಾದರು, ಆ ಸಮಯದಲ್ಲಿ ಅವರು ಮೂರು ಮದುವೆಯಾಗಿದ್ದರು. ಮಕ್ಕಳ ತಂದೆಯೂ ಆಗಿದ್ದರು.
ಈ ದಾಂಪತ್ಯವು ಹೆಚ್ಚು ಕಾಲ ಉಳಿಯಲಿಲ್ಲ. 1964ರಲ್ಲಿ, ಮೀನಾ ಕುಮಾರಿ ಮತ್ತು ಕಮಲ್ ಅಮ್ರೋಹಿ ಅವರ ಸಂಬಂಧವು ಮುರಿದುಹೋಯಿತು. ಇಬ್ಬರೂ ವಿಚ್ಛೇದನ ಪಡೆಯಲಿಲ್ಲ. ಆದರೆ ಅವರು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು.
ಮೀನಾ ಅನಾರೋಗ್ಯದಿಂದ ಬಳಲುತ್ತಿದ್ದರು, ಆದರೆ ಅವರು 'ಪಕೀಜಾ' ಚಿತ್ರೀಕರಣವನ್ನು ಮುಂದುವರೆಸಿದರು. ಈ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅವರು ನಿಧನರಾದರು. ಮೀನಾ ಕುಮಾರಿ ಕಮಲ್ ಅಮ್ರೋಹಿ ಎಂಬ ಹೆಸರನ್ನು ಹೇಳಿ ಕೋಮಾಕ್ಕೆ ಹೋಗಿದ್ದರು. ಮತ್ತೆ ಕೆಲವು ದಿನಗಳ ನಂತರ ಕೊನೆಯುಸಿರೆಳೆದರು.
ಮೀನಾ ಕುಮಾರಿ ಅವರ ಸಮಕಾಲೀನರಲ್ಲಿ ಬೆಸ್ಟ್ ನಟಿ. ಅವರ ನಿಜವಾದ ಹೆಸರು 'ಮಹಜಬಿ ಬಾನೋ'. ಚಲನಚಿತ್ರಗಳಲ್ಲಿನ ಅತ್ಯುತ್ತಮ ಭಾವನಾತ್ಮಕ ದೃಶ್ಯಗಳ ಹೊರತಾಗಿ, ಅವರ ಇಡೀ ಜೀವನವು ಹೋರಾಟದಲ್ಲಿ ಕಳೆದಿದೆ. ಇದರಿಂದ ಅವರನ್ನು ದುರಂತ ರಾಣಿ ಎಂದು ಕರೆಯಲಾಯಿತು.