ಮಸಾಬಾ ಗುಪ್ತಾ, ಸತ್ಯದೀಪ್ ಮಿಶ್ರಾ ವಿವಾಹ ಪಾರ್ಟಿ ಫೋಟೋ ವೈರಲ್
ಪ್ರಸಿದ್ಧ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ (Masaba Gupta) ಅವರು ನಟ ಸತ್ಯದೀಪ್ ಮಿಶ್ರಾ ಅವರನ್ನು ಜನವರಿ 27 ರಂದು ವಿವಾಹವಾದರು. ಮಸಾಬಾ ಅವರು ತಮ್ಮ ಮದುವೆಯ ಫೋಟೋಗಳ ಸಂಗ್ರಹವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ತಂದೆ, ಕ್ರಿಕೆಟ್ ಐಕಾನ್ ವಿವಿಯನ್ ರಿಚರ್ಡ್ಸ್ ಮತ್ತು ಆಕೆಯ ತಾಯಿ ನೀನಾ ಗುಪ್ತಾ ಇಬ್ಬರೂ ಸಂಭ್ರಮಾಚರಣೆಯಲ್ಲಿ ಇದ್ದರು ಎಂದು ಅವರು ಪೋಸ್ಟ್ ಮಾಡಿದ ಕುಟುಂಬ ಫೋಟೋದಲ್ಲಿ ತಿಳಿಯುತ್ತದೆ
ಪ್ರಸಿದ್ಧ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ಅವರು ನಟ ಸತ್ಯದೀಪ್ ಮಿಶ್ರಾ ಅವರನ್ನು ಜನವರಿ 27 ರಂದು ವಿವಾಹವಾದರು. ಮಸಾಬಾ ಅವರು ತಮ್ಮ ಮದುವೆಯ ಫೋಟೋಗಳ ಸಂಗ್ರಹವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.
ಮಧ್ಯದಲ್ಲಿ ಸತ್ಯದೀಪ್ ಮತ್ತು ಮಸಾಬ ಅವರ ಪಕ್ಕದಲ್ಲಿ ವಿವ್ ರಿಚರ್ಡ್ಸ್ ನಿಂತಿದ್ದಾರೆ. ನೀನಾ ಗುಪ್ತಾ ಅವರು ತಮ್ಮ ಪತಿ ವಿವೇಕ್ ಮೆಹ್ರಾ ಅವರೊಂದಿಗೆ ಕುಳಿತಿದ್ದಾರೆ ಹಾಗೂ ಸತ್ಯದೀಪ್ ಅವರ ತಾಯಿ ಮತ್ತು ಸಹೋದರಿ ಇನ್ನೊಂದು ಬದಿಯಲ್ಲಿದ್ದಾರೆ. ಫೋಟೋವನ್ನು ಹಂಚಿಕೊಂಡ, ಮಸಾಬಾ ಅವರು 'ಮೊದಲ ಬಾರಿಗೆ - ನನ್ನ ಇಡೀ ಜೀವನ ಒಟ್ಟಿಗೆ ಸೇರಿದೆ. ಇದು ನಾವು. ನನ್ನ ಸುಂದರ ಸಂಯೋಜಿತ ಕುಟುಂಬ ಇಲ್ಲಿಂದ ಎಲ್ಲವೂ ಕೇವಲ ಬೋನಸ್ ಆಗಿದೆ' ಎಂದು ಕ್ಯಾಪ್ಷನ್ ನೀಡಿದ್ದಾರೆ
ಮಸಾಬ ಮತ್ತು ಸತ್ಯದೀಪ್ ಅವರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ತಮ್ಮ ವಿಶೇಷ ದಿನವನ್ನು ಆಚರಿಸಲು ಸಂಜೆ ಪಾರ್ಟಿಯನ್ನು ಆಯೋಜಿಸಿದರು.
ಮಸಾಬ ಗುಪ್ತಾ, ಸತ್ಯದೀಪ್ ಮಿಶ್ರಾ ವಿವಾಹ ಪಾರ್ಟಿಯಲ್ಲಿ ಸೋನಂ ಕಪೂರ್ ಕಪ್ಪು ಬಣ್ಣದ ಅನಾರ್ಕಲಿ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದರು.
ದಿಯಾ ಮಿರ್ಜಾ ಮತ್ತು ಅವರ ಪತಿ ವೈಭವ್ ರೇಖಿ ಮಸಾಬಾ ಮತ್ತು ಸತ್ಯದೀಪ್ ಅವರ ಮದುವೆಯ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಇಬ್ಬರೂ ನಗುತ್ತಾ ಕ್ಯಾಮಾರಾಗಳಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.
ಕೊಂಕಣ ಸೇನ್ ಶರ್ಮಾ ಅವರು ಮಸಾಬಾ ಮತ್ತು ಸತ್ಯದೀಪ್ ಅವರ ವಿವಾಹ ಸಮಾರಂಭದಲ್ಲಿ ಕಾಣಿಸಿಕೊಂಡರು. ಅವಳು ಸಂಪೂರ್ಣ ಕಪ್ಪು ಬಟ್ಟೆಯನ್ನು ಧರಿಸಿದ್ದರು.
ಸಂಜೆಯ ಪಾರ್ಟಿಗೆ ಮಸಾಬಾ ತನ್ನ ತಂದೆ ವಿವ್ ರಿಚರ್ಡ್ಸ್ ಜೊತೆ ಬಂದಿದ್ದರು. ವಿವಿಯನ್ ರಿಚರ್ಡ್ಸ್ ಸಾಂಪ್ರದಾಯಿಕ ಬೂದು ಬಣ್ಣದ ಸೂಟ್ ಅನ್ನು ಬಿಳಿ ಅಂಗಿಯೊಂದಿಗೆ ಧರಿಸಿದ್ದರು, ಆದರೆ ಮಸಾಬಾ ಕಪ್ಪು ತಿಳಿ ನಲಿ ಬಣ್ನದ ಡ್ರೆಸ್ ಧರಿಸಿದ್ದರು
ಸತ್ಯದೀಪ್ ಮಿಶ್ರಾ ಅವರು ಬೀಜ್ ಜಾಕೆಟ್, ಬಿಳಿ ಶರ್ಟ್ ಮತ್ತು ಸಂದರ್ಭಕ್ಕೆ ಹೊಂದಿಕೆಯಾಗುವ ಔಟ್‌ಫಿಟ್‌ನಲ್ಲಿ ಸಖತ್ ಸ್ಮಾರ್ಟ್ ಆಗಿ ಕಾಣಿಸಿಕೊಂಡರು. ನೀನಾ ಗುಪ್ತಾ ಸ್ಟನ್ನಿಂಗ್ ಬಿಳಿ ಒನ್-ಶೋಲ್ಡರ್ ಗೌನ್ ಧರಿಸಿದ್ದರು.
ನೀನಾ ಗುಪ್ತಾ ಮತ್ತು ಅವರ ಪತಿ ವಿವೇಕ್ ಮೆಹ್ರಾ ಸಹ ಪಾರ್ಟಿಯಲ್ಲಿದ್ದರು. ಮಸಾಬ ಮತ್ತು ಸತ್ಯದೀಪ್ ಅವರ ಕುಟುಂಬಗಳು ಕಾಲ್ಪನಿಕ ಮರದ ಕೆಳಗೆ ಒಟ್ಟಿಗೆ ಫೋಟೋಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.
ಮಸಾಬ ಮತ್ತು ಸತ್ಯದೀಪ್ ಮಿಶ್ರಾ ನ್ಯಾಯಾಲಯದಲ್ಲಿ ವಿವಾಹವಾದರು. ಅವರು ಶುಕ್ರವಾರ ಬೆಳಿಗ್ಗೆ ವಿವಾಹವಾದರು ಮತ್ತು ತಮ್ಮ ಮದುವೆಯನ್ನು Instagram ನಲ್ಲಿ ಘೋಷಿಸಿದರು.
ಮಸಾಬಾ ಅವರು ಫೋಟೋಗಳಲ್ಲಿ ಗುಲಾಬಿ ಮತ್ತು ಹಸಿರು ಬಣ್ಣದ ಲೆಹೆಂಗಾದಲ್ಲಿ ಅತ್ಯದ್ಭುತವಾಗಿ ಕಾಣುತ್ತಿದ್ದರೆ, ಸತ್ಯದಾದೀಪ್ ಗುಲಾಬಿ ಬಣ್ಣದ ಶೇರ್ವಾನಿಯಲ್ಲಿ ಡ್ಯಾಶಿಂಗ್ ಆಗಿ ಕಾಣುತ್ತಿದ್ದಾರೆ.
ಮದುವೆಯ ಫೋಟೋ ಹಂಚಿಕೊಂಡು 'ಈ ಬೆಳಿಗ್ಗೆ ನಾನು ನನ್ನ ಶಾಂತಿಯ ಸಾಗರವನ್ನು ಮದುವೆಯಾಗಿದ್ದೇನೆ. ಇದು ಅನೇಕ ಜೀವಿತಾವಧಿಯ ಪ್ರೀತಿ, ಶಾಂತಿ, ಸ್ಥಿರತೆ ಮತ್ತು ಮುಖ್ಯವಾಗಿ ನಗು. ಈ ಶೀರ್ಷಿಕೆಯನ್ನು ಆಯ್ಕೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಇದು ಅದ್ಭುತವಾಗಿರುತ್ತದೆ' ಎಂದು ಮಸಾಬಾ ಬರೆದಿದ್ದಾರೆ.