ಮೇಕಪ್ ಇಲ್ಲದ ಮಲೈಕಾ, ಜಿಮ್‌ನಲ್ಲಿ ಸಾರಾ, ಕಾರಿನಲ್ಲಿ ಕಂಗನಾ ಮುಂಬೈನಲ್ಲಿ ಕಾಣಿಸಿಕೊಂಡ ಸೆಲೆಬ್ರೆಟಿಗಳು!
ಬಾಲಿವುಡ್ (Bollywood) ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿಗಳು ಈ ದಿನಗಳಲ್ಲಿ ತಮ್ಮ ಮುಂಬರುವ ಪ್ರಾಜೆಕ್ಟ್‌ಗಳು ಮತ್ತು ಚಲನಚಿತ್ರಗಳ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಕೆಲವು ಸೆಲೆಬ್ರಿಟಿಗಳು ಮುಂಬೈನಲ್ಲಿ ಚಿತ್ರಗಳ ಚಿತ್ರೀಕರಣ ನಡೆಸುತ್ತಿದ್ದಾರೆ ಮತ್ತು ಕೆಲವರು ನಗರದಿಂದ ಬೇರೆ ನಗರಗಳಿಗೆ ಹೋಗುತ್ತಿದ್ದಾರೆ. ಅಷ್ಟೇ ಅಲ್ಲ, ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳ ಬಿಡುಗಡೆ ದಿನಾಂಕವನ್ನೂ ಪ್ರಕಟಿಸುತ್ತಿದ್ದಾರೆ. ಇತ್ತೀಚೆಗೆ ಯಶ್ ರಾಜ್ ಫಿಲ್ಮ್ಸ್ ತನ್ನ ಎರಡು ಚಿತ್ರಗಳಾದ ಪೃಥ್ವಿರಾಜ್ ಮತ್ತು ಶಂಶೇರಾ ಬಿಡುಗಡೆ ದಿನಾಂಕಗಳನ್ನು ಬಹಿರಂಗಪಡಿಸಿದೆ. ಅದೇ ಸಮಯದಲ್ಲಿ, ಕೆಲವು ಸೆಲೆಬ್‌ಗಳು ಈವೆಂಟ್‌ಗಳು, ಪಾರ್ಟಿಗಳು ಮತ್ತು ಜಿಮ್‌ಗಳ ಹೊರಗೆ ಕಂಡುಬರುತ್ತಾರೆ.
ಮಲೈಕಾ ಅರೋರಾ (Malaika Arora) ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಅವರು ಓವರ್ ಕೋಟ್ ಧರಿಸಿದ್ದರು. ಮಲೈಕಾ ತಮ್ಮ ಕೂದಲನ್ನು ಕಟ್ಟದೆ ಹಾಗೇ ಬಿಟ್ಟಿದ್ದರು ಮತ್ತು ಅವರು ಮೇಕಪ್ ಇಲ್ಲದೆ ಕಾಣಿಸಿಕೊಂಡರು.
ಮಲೈಕಾ ಅರೋರಾ ಮುಖದಲ್ಲಿ ಸ್ವಲ್ಪ ಗಾಬರಿ ಮತ್ತು ಯಾವುದೋ ಬಗ್ಗೆ ಅಸಮಾಧಾನಗೊಂಡಿರುವಂತೆ ಕಂಡು ಬರುತ್ತದೆ. ಮಲೈಕಾ ಅರೋರಾ ಅವರ ಸಹೋದರಿ ಅಮೃತಾ ಅರೋರಾ ಸಹ ಜೊತೆಗಿದ್ದರು. ಈ ವೇಳೆಯಲ್ಲಿ ಇಬ್ಬರು ಸಹೋದರಿಯರು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಾಸ್ಕ್ ಧರಿಸಿದ್ದರು.
ದಂಗಲ್ ನಟಿ ಸನ್ಯಾ ಮಲ್ಹೋತ್ರಾ (Sanya Malhotra) ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರು ಕಪ್ಪು ಬಟ್ಟೆ ಧರಿಸಿದ್ದರು. ಅವರ ಕೈಯಲ್ಲಿ ಒಂದು ಓವರ್ ಕೋಟ್ ಕೂಡ ಇತ್ತು.
ಸಾರಾ ಅಲಿ ಖಾನ್ (Sara Ali Khan) ಜಿಮ್ ಹೊರಗೆ ಕಾಣಿಸಿಕೊಂಡರು. ಶಾರ್ಟ್ಸ್ ಮತ್ತು ಹಾಫ್ ಟಿ-ಶರ್ಟ್ ಧರಿಸಿದ್ದ ಸಾರಾ ಛಾಯಾಗ್ರಾಹಕರನ್ನು ನೋಡಿ ಮುಗುಳ್ನಕ್ಕರು. ಆದಾಗ್ಯೂ, ಈ ಸಮಯದಲ್ಲಿ ನಟಿ ತುಂಬಾ ಅವಸರದಲ್ಲಿ ಇದ್ದಂತೆ ಕಾಣಿಸಿಕೊಂಡರು.
ಕಂಗನಾ ರಣಾವತ್ (Kangana Ranaut) ಮುಂಬೈನ ಖಾರ್ ಏರಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಅವರು ತನ್ನದೇ ಆದ ಲೋಕದಲ್ಲಿದ್ದರು. ಕಂಗನಾ ಶೀಘ್ರದಲ್ಲೇ OTT ನಲ್ಲಿ ರಿಯಾಲಿಟಿ ಶೋ ಲಾಕಪ್ ಅನ್ನು ಹೋಸ್ಟ್ ಮಾಡಲಿದ್ದಾರೆ.
ಇತ್ತೀಚಿಗಷ್ಟೇ ಕೋವಿಡ್ ಸೊಂಕಿನಿಂದ ಚೇತರಿಸಿಕೊಂಡಿರುವ ಕಾಜೋಲ್ (Kajol) ಮುಂಬೈನ ಖಾರ್ ಏರಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಡ್ರೆಸ್ ಧರಿಸಿದ್ದ ಕಾಜೋಲ್ ಕನ್ನಡಕ ಧರಿಸಿದ್ದರು ಮತ್ತು ಈ ಸಮಯದಲ್ಲಿ ಛಾಯಾಗ್ರಾಹಕರಿಗೆ ಪೋಸ್ ಕೊಡುವುದು ಅಗತ್ಯ ಎಂದು ಅವರು ಪರಿಗಣಿಸಲಿಲ್ಲ.
ನುಸ್ರತ್ ಭರುಚಾ ( Nushrat Bharucha ) ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರು ಮಾಸ್ಕ್ ಧರಿಸಿದ್ದರು, ಆದರೆ ಫೋಟೋಗೆ ಪೋಸ್ ನೀಡಲು ತಮ್ಮ ಮಾಸ್ಕ್ ಅನ್ನು ತೆಗೆದರು.
ಬಾಲಿವುಡ್ ನಟಿ ಸೋನಾಕ್ಷಿ ಬಹಳ ದಿನಗಳ ನಂತರ ಪಾಪಾರಾಜಿಗಳ ಕ್ಯಾಮಾರಾಕ್ಕೆ ಸಿಲುಕಿದ್ದಾರೆ. ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಮಧ್ಯರಾತ್ರಿ ಬಾಂದ್ರಾದಲ್ಲಿ ಬೈಕ್ ಓಡಿಸುತ್ತಿದ್ದರು. ಈ ವೇಳೆ ಬೈಕ್ ನಿಲ್ಲಿಸಿ ಕ್ಯಾಮರಾಮನ್ ಗೆ ಪೋಸ್ ನೀಡಿದರು.
ವಿಮಾನ ನಿಲ್ದಾಣದಲ್ಲಿ ಸೋನು ನಿಗಮ್ ಕಾಣಿಸಿಕೊಂಡಿದ್ದಾರೆ. ಬಿಳಿ ಬಟ್ಟೆ ಧರಿಸಿ ಸೋನು ಮಾಸ್ಕ್ ತೆಗೆದು ಮೀಡಿಯಾ ಕ್ಯಾಮಾರಾಮ್ಯಾನ್‌ಗಳಿಗೆ ಪೋಸ್ ಕೊಟ್ಟಿದ್ದಾರೆ. ಪೋಸ್ ಕೊಟ್ಟ ನಂತರ ಮತ್ತೆ ಮಾಸ್ಕ್ ಹಾಕಿಕೊಂಡರು.