ಯೋಗ ಕ್ಲಾಸ್ ಹೊರಗೆ ಕಾಣಿಸಿಕೊಂಡ ಮಲೈಕಾ ಅರೋರಾ ಫೋಟೋ ವೈರಲ್
ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora ) ಆಗಾಗ ಸದ್ದು ಮಾಡುತ್ತಲೇ ಇರುತ್ತಾರೆ. ಫಿಟ್‌ನೆಸ್ ಫ್ರೀಕ್ ಮಲೈಕಾ ಆಗಾಗ ಜಿಮ್ ಅಥವಾ ಯೋಗ ಕ್ಲಾಸ್ ಹೊರೆಗೆ ಕಾಣಿಸಿಕೊಳ್ಳವುದು ಸಾಮಾನ್ಯ. ಅದೇ ರೀತಿ ನಟಿ ಮಲೈಕಾಅರೋರಾ ಬಂದ್ರಾದ ಯೋಗ ಕ್ಲಾಸ್ ಹೊರಗೆ ಪಾಪಾರಾಜಿಗಳ ಕ್ಯಾಮಾರಕ್ಕೆ ಸಿಲುಕಿದ್ದಾರೆ. ಈ ಸಮಯದ ಮಲೈಕಾರ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

ಮಲೈಕಾ ಅರೋರಾ ಬಾಲಿವುಡ್‌ನ ಫಿಟ್ ನಟಿಯರಲ್ಲಿ ಒಬ್ಬರು. 49 ವರ್ಷದ ಮಲೈಕಾ ಫಿಟ್‌ನೆಸ್ ವಿಷಯದಲ್ಲಿ ಯುವ ನಟಿಯರಿಗೂ ಸ್ವರ್ಧೆ ನೀಡುತ್ತಾರೆ.
ಜೊತೆಗೆ ಇವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲೂ ಸಹ ಯೋಗ ಮತ್ತು ವರ್ಕೌಟ್ ವಿಡೀಯೋ ಫೋಟೋಗಳುನ್ನು ಹಂಚಿಕೊಳ್ಳುತ್ತಾರೆ.
ಮುಂಬೈನ ಬಂದ್ರಾದ ಯೋಗ ಕ್ಲಾಸ್ ಹೊರಗೆ ಕಾಣಿಸಿಕೊಂಡ ಮಲೈಕಾ ಅರೋರಾ ಅವರ ಫೋಟೋಗಳು ಸಖತ್ ವೈರಲ್ ಆಗಿವೆ. ಯೋಗ ಕ್ಲಾಸ್ ಹೊರಗೆ ಪಾಪಾರಾಜಿಗಳ ಕ್ಯಾಮಾರಕ್ಕೆ ಸಿಲುಕಿದ್ದಾರೆ.
ಈ ಸಮಯದಲ್ಲಿ ಮಲೈಕಾ ಕಪ್ಪು ಲೆಂಗಿನ್ಸ್‌ಗೆ ಬಿಳಿ ಮತ್ತು ಕಪ್ಪು ಬಣ್ಣದ ಸ್ಪೋರ್ಟ್ಸ್ ಬ್ರಾ ಧರಿಸಿದ್ದರು. ತಲೆಗೆ ಕಪ್ಪು ಟೋಪಿ ಧರಿಸಿದ್ದ ನಟಿ ಕೈಯಲ್ಲಿ ವಾಟರ್ ಬಾಟಲ್ ಹಿಡಿದಿದ್ದರು.
ನಿನ್ನೆ ಮಲೈಕಾ ಅರೋರಾ ತಮ್ಮ ಸುಂದರವಾದ ಪೋಟೋ ಹೊಂಚಿಕೊಂಡು ' I said YES ಎಂದು ಕ್ಯಾಪ್ಷನ್ ನೀಡಿದ್ದರು. ಈ ಶೀರ್ಷಿಕೆ ಕಾರಣದಿಂದ ತಕ್ಷಣವೇ ಅರ್ಜುನ್ ಕಪೂರ್ ಜೊತೆಯ ಮಲೈಕಾರ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು.
ಆದರೆ ಕೆಲವು ಸಮಯದ ನಂತರ ಮಲೈಕಾ ತಮ್ಮ ಇನ್ನೊಂದು ಪೋಸ್ಟ್ ಮೂಲಕ ಅವರು ವೆಬ್‌ಸರಣಿಯಲ್ಲಿ ನಟಿಸಲು ಒಪ್ಪಿಕೊಂಡಿರುವುದಾಗಿ ಬಹಿರಂಗಪಡಿಸಿ ಎಲ್ಲಾ ರೂಮರ್‌ಗಳಿಗೆ ಫುಲ್ ಸ್ಟಾಪ್ ಇಟ್ಟರು.
ಡಿಸ್ನಿ+ ಹಾಟ್‌ಸ್ಟಾರ್‌ನೊಂದಿಗೆ ಬಹು ನಿರೀಕ್ಷಿತ ಡಿಜಿಟಲ್ ಚೊಚ್ಚಲ ಪ್ರವೇಶ ಮಾಡಲಿದ್ದಾರೆ. ಅವರು ತನ್ನ ಹಿಂದಿನ, ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಅನ್‌ಫಿಲ್ಟರ್ ಸಂಭಾಷಣೆಗಳನ್ನು ಅಭಿಮಾನಿಗಳಿಗೆ ನೀಡಲು ಸಿದ್ಧಳಾಗಿದ್ದಾರೆ.
ಮೂವಿಂಗ್ ಇನ್ ವಿಥ್ ಮಲೈಕಾ ಶೋ ಅನ್ನು ಬನಿಜಯ್ ಏಷ್ಯಾ ನಿರ್ಮಿಸುತ್ತಿದ್ದಾರೆ. ಈ ರೋಚಕ ಸರಣಿಯು ಡಿಸೆಂಬರ್ 5 ರಿಂದ ಬಿಡುಗಡೆಯಾಗಲಿದೆ. ಮಲೈಕಾರ ಸ್ನೇಹಿತರು ಮತ್ತು ಕುಟುಂಬದವರು ಇದರಲ್ಲಿ ಭಾಗವಹಿಸಲಿದ್ದಾರೆ.
'ಕಾಫಿ ವಿತ್ ಕರಣ್ ಸೀಸನ್ 7ನ ಯಶಸ್ವಿ ನಂತರ ,ನಮ್ಮ ವೀಕ್ಷಕರ ಮುಂದೆ ತರಲು ಮತ್ತೊಂದು ಅತ್ಯಾಕರ್ಷಕ ರಿಯಾಲಿಟಿ ಶೋ, ಮಲೈಕಾ ಜೊತೆ ಮೂವಿಂಗ್ ಇನ್ ನಾವು ಸಂತೋಷಪಡುತ್ತೇವೆ' ಎಂದು ಡಿಸ್ನಿ+ ಹಾಟ್‌ಸ್ಟಾರ್ ಮತ್ತು HSM ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಹೆಡ್-ಕಂಟೆಂಟ್ ಗೌರವ್ ಬ್ಯಾನರ್ಜಿ ಹೇಳಿದ್ದಾರೆ.