ಮಲೈಕಾ ಅರೋರಾ Yes ಅಂದಿದ್ದು ಅರ್ಜುನ್ ಕಪೂರ್‌ಗಲ್ಲ: ಮತ್ಯಾರಿಗೆ?
ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ ಇತ್ತೀಚಿಗೆ ಹಾಕಿದ್ದ ಪೋಸ್ಟ್ ಭಾರಿ ಕುತೂಹಲ ಮೂಡಿಸಿತ್ತು. ಮಲೈಕಾ I Said Yes ಎಂದು ಹೇಳಿದ್ದು ಯಾರಿಗೆ ಎಂದು ಅನೇಕರು ತಲೆಕೆಡಿಸಿಕೊಂಡಿದ್ದರು. ಇದೀಗ ಮಲೈಕಾ ಪೋಸ್ಟ್ ಯಾರಿಗೆ ಎಂದು ರಿವೀಲ್ ಆಗಿದೆ.
ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ ಇತ್ತೀಚಿಗೆ ಹಾಕಿದ್ದ ಪೋಸ್ಟ್ ಭಾರಿ ಕುತೂಹಲ ಮೂಡಿಸಿತ್ತು. ಅಷ್ಟಕ್ಕೂ ಮಲೈಕಾ ಗಹೇಳಿದ್ದೇನು ಅಂತೀರಾ. ಸುಂದರವಾದ ಫೋಟೋ ಶೇರ್ ಮಾಡಿ I Said Yes ಎಂದು ಕ್ಯಾಪ್ಷನ್ ನೀಡಿದ್ದರು. ಮಲೈಕಾ ಹೀಗೆ ಹೇಳುತ್ತಿದ್ದಂತೆ ಮದುವೆ ವಿಚಾರ ವೈರಲ್ ಆಗಿತ್ತು.
ಮಲೈಕಾ ಮತ್ತು ಅರ್ಜುನ್ ಕಪೂರ್ ಡೇಟಿಂಗ್ ಮಾಡುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಮದುವೆಗೆ ಸಿದ್ಧರಾದರು ಎಂದು ಎಲ್ಲರೂ ಅಂದುಕೊಂಡಿದ್ದರು. ಮಲೈಕಾ ಯೆಸ್ ಹೇಳಿದ್ದು ಅರ್ಜುನ್ ಕಪೂರ್ ಜೊತೆ ಮದುವೆಗೆ ಎನ್ನುವ ಸುದ್ದಿಯೇ ಎಲ್ಲಾ ಕಡೆ ಹರಿದಾಡಿತ್ತು.
ಆದರೀಗ ಮಲೈಕಾ ಯೆಸ್ ಹೇಳಿದ್ದು ಏನಕ್ಕೆ ಎಂದು ರಿವೀಲ್ ಮಾಡಿದ್ದಾರೆ. ಈ ಮೂಲಕ ಅರ್ಜುನ್ ಕಪೂರ್ ಜೊತೆಗಿನ ವದಂತಿಗೆ ಬ್ರೇಕ್ ಹಾಕಿದ್ದಾರೆ. ಮಲೈಕಾ ಯೆಸ್ ಎಂದಿರುವುದು ಹೊಸ ರಿಯಾಲಿಟಿಗೆ ಶೋ ಕಾರ್ಯಕ್ರಮಕ್ಕೆ.
ಮಲೈಕಾ ಅರೋರಾ ತನ್ನ ಪ್ರಿಯತಮ ಅರ್ಜುನ್ ಕಪೂರ್‌ಗೆ 'ಯೆಸ್' ಎಂದು ಹೇಳಿದ್ದಲ್ಲ. ಹೊಸ ರಿಯಾಲಿಟಿ ಶೋ 'ಮೂವಿಂಗ್ ಇನ್ ವಿತ್ ಮಲೈಕಾ' ಗಾಗಿ. ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಮಲೈಕಾ ಇನ್ಸ್ಟಾಗ್ರಾಮ್ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಮಲೈಕಾ, 'ನನ್ನ ಹೊಸ ರಿಯಾಲಿಟಿ ಶೋ ಹಾಟ್ ಸ್ಟಾರ್ ಸ್ಪೆಷಲ್ ಮೂವಿಂಗ್ ಇನ್ ವಿತ್ ಮಲೈಕಾ ಗಾಗಿ ನಾನು ಯೆಸ್ ಎಂದು ಹೇಳಿದ್ದೇನೆ. ನೀವು ನನ್ನನ್ನು ಹಿಂದೆಂದಿಗಿಂತಲೂ ಹತ್ತಿರದಿಂದ ಮತ್ತು ವೈಯಕ್ತಿಕವಾಗಿ ನೋಡುತ್ತೀರಿ. ನಿರೀಕ್ಷಿಸಿ, ನಾನು ಏನು ಮಾತನಾಡುತ್ತಿದ್ದೇನೆಂದು ನೀವು ಯೋಚಿಸಿದ್ದೀರಾ? ಡಿಸೆಂಬರ್ 5 ರಿಂದ ಸ್ಟ್ರೀಮ್ ಆಗುತ್ತಿದೆ' ಎಂದು ಹೇಳಿದ್ದಾರೆ.
ಫಿಟ್ನೆಸ್ ಫ್ರೀಕ್, ಹಾಟ್ ಬ್ಯೂಟಿ ಮಲೈಕಾ ಅರ್ಜಾಜ್ ಖಾನ್ ಅವರಿಂದ ವಿಚ್ಛೇದನ ಪಡೆದ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಅನೇಕ ವರ್ಷಗಳಿಂದನೇ ಕೇಳಿಬರುತ್ತಿದೆ. ಆದರೆ ಈ ಜೋಡಿ ಇನ್ನೂ ಮದುವೆಯ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಆದರೆ ಆಗಾಗ ಇಬ್ಬರ ಮದುವೆ ವಿಚಾರ ವೈರಲ್ ಆಗುತ್ತಲ್ಲೇ ಇರುತ್ತದೆ.