ತಾಯಿ ಮನೆಯಲ್ಲಿ ಓಣಂ; ನಟಿ ಮಲೈಕಾ ಅರೋರಾ ನೋಡಿ ನಗಾಡಿದ ನೆಟ್ಟಿಗರು!
ಕುಟುಂಬದ ಜೊತೆ ಓಣಂ ಆಚರಿಸಿದ ಮಲೈಕಾ ಅರೋರಾ. ವೈರಲ್ ಆಯ್ತು ನಟಿ ಸೆಲ್ವಾರ್ ಲುಕ್....
ಬಾಲಿವುಡ್ ಹಾಟ್ ನಟಿ, ಸೂಪರ್ ಮಾಮ್ ಮಲೈಕಾ ಆರೋರಾ (Malaika Arora) ಈ ವರ್ಷ ಓಣಂ ಹಬ್ಬವನ್ನು ಪೋಷಕರ ಮನೆಯಲ್ಲಿ ಆಚರಿಸಿದ್ದಾರೆ.
ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಪೋಷಕರ ಮನೆಗೆ ಮಲೈಕಾ ಅರೋರಾ ಮತ್ತು ಅಮೃತಾ ಅರೋರಾ ಭೇಟಿ ನೀಡಿದ್ದಾರೆ.
ಸದಾ ಜಿಮ್ ವೇರ್ ಮತ್ತು ಹಾಟ್ ಡ್ರೆಸ್ ಧರಿಸುವ ಮಲೈಕಾ ವೈಟ್ ರೇಶ್ಮೆ ಸೆಲ್ವಾರ್‌ಗೆ ಹಳದಿ ಬಣ್ಣದ ದುಪಟಾ ಧರಿಸಿದ್ದಾರೆ. ಕೂದಲನ್ನು ಬನ್ ರೀತಿ ಕಟ್ಟಿದ್ದಾರೆ.
ಅಮೃತಾ ಅರೋರಾ ಮನೆಯಲ್ಲಿ ಹಸಿರು ಬಣ್ಣದ ಕಾಟನ್ ಸೆಲ್ವಾರ್ ಧರಿಸಿದ್ದು ರಾತ್ರಿ ಹೊರ ಬರುತ್ತಿದ್ದಂತೆ ಪ್ಯಾಪರಾಜಿಗಳ ಮುಂದೆ ಶಾರ್ಟ್‌ನಲ್ಲಿದ್ದರು.
ಮಲೈಕಾ ಅರೋರಾ ಧರಿಸಿರುವ ಸೆಲ್ವಾರ್‌ನ ಬೆಲೆ ಸುಮಾರು 10 ಸಾವಿರವಿದೆ ಎನ್ನಲಾಗಿದೆ. ಮಲೈಕಾ ಧರಿಸುವುದು ಡಿಸೈನರ್ ಉಡುಪುಗಳೇ.
ಮಲೈಕಾ ಹಬ್ಬದ ಲುಕ್‌ನ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಮಲೈಕಾ ತಾಯಿ ಕೂಡ ಪಕ್ಕಾ ಮಲಯಾಳಿ ರೀತಿ ರೆಡಿಯಾಗಿರುವುದು ಖುಷಿ ವಿಚಾರ.
ಟ್ರೋಲ್ ಯಾಕೆ? ಮಲೈಕಾ ತಾಯಿ ನೋಡಲು ತುಂಬಾ ಸಿಂಪಲ್ ಆಗಿದ್ದಾರೆ ಆದರೆ ಮಕ್ಕಳು ಸ್ಟೈಲಿಷ್ ಆಗಿರುವುದರಿಂದ ನೀವು ಬ್ಲೌಸ್ ಹೀಗೆ ಧರಿಸುವುದೇ? ಎಂದಿದ್ದಾರೆ.
ಇನ್ನು ಸ್ಟಾರ್ ಹೋಟೆಲ್‌ನಲ್ಲ ವೆರೈಟಿ ಆಹಾರ ಸೇವಿಸುವ ಮಲೈಕಾ ಅರೋರಾ ತಾಯಿ ಮನೆಯಲ್ಲಿ ಬಾಳೆಎಲೆ ಊಟ ಮಾಡಿದ್ದಾರೆ. ನೆಲದ ಮೇಲೆ ಊಟ ಮಾಡಬೇಕು ಎಂದು ಅದಕ್ಕೂ ಕಾಲೆಳೆದಿದ್ದಾರೆ.