- Home
- Entertainment
- Cine World
- ಪ್ರಭಾಸ್ ಸಿನಿಮಾಗಳ ದಾಖಲೆ ಧೂಳಿಪಟ ಮಾಡಿದ 'ಮಹಾವತಾರ್ ನರಸಿಂಹ': ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ
ಪ್ರಭಾಸ್ ಸಿನಿಮಾಗಳ ದಾಖಲೆ ಧೂಳಿಪಟ ಮಾಡಿದ 'ಮಹಾವತಾರ್ ನರಸಿಂಹ': ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ
ಮೈಥಾಲಾಜಿಕಲ್ ಅನಿಮೇಷನ್ ಮೂವಿ 'ಮಹಾವತಾರ್ ನರಸಿಂಹ' ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡ್ತಿದೆ. ಈ ಸಿನಿಮಾ ಭಾರಿ ಕಲೆಕ್ಷನ್ ಮಾಡ್ತಿದೆ. ಹೊಸದಾಗಿ ಪ್ರಭಾಸ್ ಸಿನಿಮಾಗಳನ್ನೂ ಮೀರಿಸಿರೋದು ವಿಶೇಷ.
ಮೈಥಾಲಾಜಿಕಲ್ ಅನಿಮೇಷನ್ ಮೂವಿ 'ಮಹಾವತಾರ್ ನರಸಿಂಹ' ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡ್ತಿದೆ. ಯಾವ ನಿರೀಕ್ಷೆಯೂ ಇಲ್ಲದೆ ಬಂದ ಈ ಚಿತ್ರ ಈಗ ಕಲೆಕ್ಷನ್ ವಿಷಯದಲ್ಲಿ ಧೂಳೆಬ್ಬಿಸುತ್ತಿದೆ. ಇಂಡಿಯಾ ವೈಡ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡ್ತಿದೆ. ಬರೋಬ್ಬರಿ ಮುನ್ನೂರು ಕೋಟಿಗೆ ತಲುಪ್ತಿದೆ. ಮೊದಲ ದಿನ 1.75 ಕೋಟಿ ಕಲೆಕ್ಷನ್ ನಿಂದ ಶುರುವಾದ ಈ ಚಿತ್ರ ಈಗ ಮುನ್ನೂರು ಕೋಟಿಗೆ ತಲುಪಿರೋದು ವಿಶೇಷ.
'ಮಹಾವತಾರ್ ನರಸಿಂಹ' ಮೂವಿ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿದೆ. ಈ ಚಿತ್ರ ಹೊಸದಾಗಿ ಪ್ರಭಾಸ್ ಮೂವಿ ಕಲೆಕ್ಷನ್ ಗಳನ್ನು ಮೀರಿಸಿರೋದು ವಿಶೇಷ. ಹಿಂದಿ ಬೆಲ್ಟ್ ನಲ್ಲಿ ಪ್ರಭಾಸ್ ನಟಿಸಿದ ಎರಡು ಸಿನಿಮಾಗಳ ಕಲೆಕ್ಷನ್ ಗಳನ್ನು ಮೀರಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ಚಿತ್ರ ಪ್ರಭಾಸ್ ನಟಿಸಿದ ಯಾವ ಸಿನಿಮಾಗಳ ದಾಖಲೆಗಳನ್ನು ಮುರಿದಿದೆ ಅಂತ ನೋಡೋಣ.
ಪ್ರಭಾಸ್‌ಗೆ ನಾರ್ತ್ ನಲ್ಲಿ ಭಾರಿ ಅಭಿಮಾನಿ ಬಳಗ ಇದೆ. ಅದೇ ಸಮಯದಲ್ಲಿ ಒಳ್ಳೆ ಮಾರ್ಕೆಟ್ ಕೂಡ ಇದೆ. ಡಿವೈಡೆಡ್ ಟಾಕ್ ಬಂದ ಚಿತ್ರಗಳು ಕೂಡ ಅಲ್ಲಿ ಭಾರಿ ಕಲೆಕ್ಷನ್ ಮಾಡ್ತಿವೆ. 'ಬಾಹುಬಲಿ 2' ಬರೋಬ್ಬರಿ ಐದು ನೂರು ಕೋಟಿ ದಾಟಿದೆ. ಕಳೆದ ವರ್ಷ ಬಂದ 'ಕಲ್ಕಿ 2898 AD' ಕೂಡ ಸುಮಾರು 280 ಕೋಟಿ ಗಳಿಸಿದೆ. ಹಾಗೆಯೇ 'ಸಾಹೋ' ಮೂವಿ ಹಿಂದಿಯಲ್ಲಿ 150 ಕೋಟಿ ಗಳಿಸಿದೆ. ಮತ್ತೊಂದೆಡೆ 'ಸಲಾರ್' 153 ಕೋಟಿ ಗಳಿಸಿದೆ.
ಈಗ 'ಮಹಾವತಾರ್ ನರಸಿಂಹ' ಮೂವಿ 'ಸಾಹೋ', 'ಸಲಾರ್' ದಾಖಲೆಗಳನ್ನು ಮುರಿದಿದೆ. ಈ ಚಿತ್ರ ಹಿಂದಿಯಲ್ಲಿ ಬರೋಬ್ಬರಿ 160 ಕೋಟಿ ಗಳಿಸಿದೆ. ಹಿಂದಿಯಲ್ಲೇ ಈ ಚಿತ್ರಕ್ಕೆ ಅತಿ ಹೆಚ್ಚು ಕಲೆಕ್ಷನ್ ಬಂದಿರೋದು ವಿಶೇಷ. ಈ ಸಿನಿಮಾಗೆ ಇಂಡಿಯಾದಲ್ಲೇ 250 ಕೋಟಿ ಬಂದಿದೆ. ತೆಲುಗಿನಲ್ಲಿ 44 ಕೋಟಿ ಗಳಿಸಿದೆ. ಓವರ್ಸೀಸ್ ನಲ್ಲೂ ಒಳ್ಳೆ ಕಲೆಕ್ಷನ್ ಬರ್ತಿದೆ. ಈ ಸಿನಿಮಾ ಕೇವಲ 15 ಕೋಟಿ ಬಜೆಟ್ ನಲ್ಲಿ ತಯಾರಾಗಿದ್ದು, ಈಗ 17 ಪಟ್ಟು ಗಳಿಕೆ ಮಾಡಿದೆ. ಲಾಭದ ಫಸಲು ತೆಗೆಯುತ್ತಿದೆ.
ಅಶ್ವಿನ್ ಕುಮಾರ್ ನಿರ್ದೇಶನದ 'ಮಹಾವತಾರ್ ನರಸಿಂಹ' ಚಿತ್ರವನ್ನು ಕ್ಲೀಮ್ ಪ್ರೊಡಕ್ಷನ್ ನಿರ್ಮಿಸಿದೆ. ಹೊಂಬಾಳೆ ಫಿಲ್ಮ್ಸ್ ಬಿಡುಗಡೆ ಮಾಡಿದೆ. ಜುಲೈ 25 ರಂದು ಬಿಡುಗಡೆಯಾದ ಈ ಮೂವಿಯನ್ನು ತೆಲುಗಿನಲ್ಲಿ ಗೀತಾ ಆರ್ಟ್ಸ್ ವಿತರಣೆಯಲ್ಲಿ ಅಲ್ಲು ಅರವಿಂದ್ ಬಿಡುಗಡೆ ಮಾಡಿದ್ದಾರೆ. ವಿಷ್ಣುವಿನ ಅವತಾರಗಳಲ್ಲಿ ಒಂದಾದ ನರಸಿಂಹ ಅವತಾರವನ್ನು ಆಧರಿಸಿ, ಆತನ ಭಕ್ತ ಪ್ರಹ್ಲಾದನ ಕಥೆಯನ್ನು ಈ ಅನಿಮೇಷನ್ ಚಿತ್ರದಲ್ಲಿ ತೋರಿಸಲಾಗಿದೆ. ಇಂಡಿಯಾದಲ್ಲೇ ಅನಿಮೇಷನ್ ನಲ್ಲಿ ಇಷ್ಟು ಚೆನ್ನಾಗಿ ಇದುವರೆಗೆ ಯಾವ ಸಿನಿಮಾ ಬಂದಿಲ್ಲ. ಹೀಗಾಗಿ ಈ ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.