Maha Shivratri: ನಾದಿನಿ ಸೋಹಾ ಅಲಿ ಖಾನ್ ಜೊತೆ ಪೂಜಿಸಿದ ಸೈಫ್ ಪತ್ನಿ ಕರೀನಾ
ಮಹಾಶಿವರಾತ್ರಿ (Mahashivratri 2022)ಯನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸಾಮಾನ್ಯ ಜನರಂತೆ ಬಾಲಿವುಡ್ (Bollywood) ಸೆಲೆಬ್ರಿಟಿಗಳು ಕೂಡ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದೇ ವೇಳೆ ಕರೀನಾ ಕಪೂರ್ (Kareena Kapoor) ಅವರ ನಾದಿನಿ ಸೋಹಾ ಅಲಿ ಖಾನ್(Soha Ali Khan) ತಮ್ಮ ಮನೆಯಲ್ಲಿ ಶಿವನಿಗೆ ಪೂಜೆ ಸಲ್ಲಿಸಿದರು. ಸೋಹಾ ಪತಿ ಕುನಾಲ್ ಖೇಮು (Kunal Kemmu) ಮತ್ತು ಕುಟುಂಬ ಸದಸ್ಯರೊಂದಿಗೆ ಮಹಾಶಿವರಾತ್ರಿಯನ್ನು ಆಚರಿಸಿದರು. ಸೋಹಾ-ಕುನಾಲ್ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವುಗಳು ಸಖತ್ ವೈರಲ್ ಆಗಿವೆ.
ಸೋಹಾ ಆಲಿ ಖಾನ್ ಮತ್ತು ಕುನಾಲ್ ಖೇಮು ಅವರ ಮಗಳು ಇನಾಯಾ ಕೂಡ ಈ ಪೂಜೆಯಲ್ಲಿ ಪಾಲ್ಗೊಂಡಿದ್ದಳು. ಈ ಸಂದರ್ಭದಲ್ಲಿ ಇನಾಯಾ ಶಿವನಿಗೆ ಹಾಲನ್ನು ಅರ್ಪಿಸುತ್ತಿರುವುದು ಕಂಡುಬಂದಿತು.
ಸೋಹಾ-ಕುನಾಲ್ ಹಂಚಿಕೊಂಡಿರುವ ವೀಡಿಯೊದಲ್ಲಿ ಕುನಾಲ್ ಶಂಖವನ್ನು ಊದುತ್ತಿರುವುದನ್ನು ಕಾಣಬಹುದು. ಅವರ ಕುಟುಂಬದ ಸದಸ್ಯರೂ ಈ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಣಿಸಿಕೊಂಡ ಫೋಟೋಗಳಲ್ಲಿ, ಕುನಾಲ್ ಖೇಮು ಬೂದು ಕುರ್ತಾ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಇನಾಯಾ ಪಿಂಕ್ ಟಿ-ಶರ್ಟ್ ಮತ್ತು ನೇವಿ ಬ್ಲೂ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾಳೆ.
ಸೋಹಾ ಅಲಿ ಖಾನ್ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕುನಾಲ್ ಖೇಮು ನೆಲದ ಮೇಲೆ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ರಾಜ್ಮಾ, ಅನ್ನ, ಪಾಲಕ್ ಪನೀರ್, ಕರಿ ಸೇರಿದಂತೆ ಹಲವು ಖಾದ್ಯಗಳನ್ನು ಅವರಿಗೆ ಬಡಿಸಲಾಗಿದೆ. ಅದೇ ಸಮಯದಲ್ಲಿ, ಮಗಳು ಇನಾಯಾ ರಾಜ್ಮಾವನ್ನು ಪಾಪಾಗೆ ಬಡಿಸುತ್ತಿದ್ದಾಳೆ.
ಸೋಹಾ ಹಸಿರು ಕುರ್ತಾ ಧರಿಸಿದ್ದಾರೆ. ಅವರ ಹಣೆಯ ಮೇಲೆ ಬಿಂದಿ ಇಟ್ಟಿದ್ದರು ಮತ್ತು ಅವರ ಕೂದಲನ್ನು ಪೋನಿಟೇಲ್ ಆಗಿ ಕಟ್ಟಿದ್ದಾರೆ. ಈ ಲುಕ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ಕಾಶ್ಮೀರಿ ಪಂಡಿತರ ಸ್ಥಳದಲ್ಲಿ ಮಹಾಶಿವರಾತ್ರಿಯನ್ನು ಹೆರಾತ್ ಎಂದು ಕರೆಯಲಾಗುತ್ತದೆ ಮತ್ತು ಅದನ್ನು 3 ದಿನಗಳವರೆಗೆ ಮನೆಯಲ್ಲಿ ಪೂಜಿಸಲಾಗುತ್ತದೆ. ಹೆರಾತ್ ಪೂಜೆಯ ವಿಡಿಯೋವನ್ನು ಶೇರ್ ಮಾಡುವ ಮೂಲಕ ಕುನಾಲ್ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ.
'ಹೆರಾತ್ ಮುಬಾರಕ್... ನಿಮ್ಮೆಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳನ್ನು ಕೋರುತ್ತೇನೆ, ನಿಮಗೆಲ್ಲರಿಗೂ ಶಾಂತಿ, ಸಂತೋಷ, ಪ್ರೀತಿ ಮತ್ತು ಉಜ್ವಲ ಭವಿಷ್ಯವನ್ನು ಬಯಸುತ್ತೇನೆ. ಶಿವನ ಆರಾಧನೆ' ಎಂದು ಅವರು ಬರೆದಿದ್ದಾರೆ. ಕುನಾಲ್ ಖೇಮು ಅವರ ಈ ವೀಡಿಯೊ ಇಲ್ಲಿಯವರೆಗೆ 2.5 ಲಕ್ಷ ಲೈಕ್‌ಗಳನ್ನು ಪಡೆದುಕೊಂಡಿದೆ.