ಡ್ಯಾನ್ಸಿಂಗ್ ಕ್ವೀನ್‌ ಮಾಧುರಿಯಿಂದ ಮಗನಿಗೆ ಕಥಕ್‌ ಪಾಠ

First Published 16, Apr 2020, 7:54 PM

ಮಾಧುರಿ ದೀಕ್ಷಿತ್ ಬಾಲಿವುಡ್‌ನ ಡ್ಯಾನ್ಸಿಂಗ್ ಕ್ವೀನ್. ಧಕ್‌ ಧಕ್‌  ಹುಡುಗಿಯ ಕುಣಿತಕ್ಕೆ ಮನಸೋಲದವರೇ ಇಲ್ಲ. ಲಾಕ್‌ಡೌನ್‌ನಿಂದ ಜೀವನ ಮನೆಯ 4 ಗೋಡೆಗೆ ಸೀಮಿತವಾಗಿದ್ದರೂ, ಅವರು  ನೃತ್ಯ ಅಭ್ಯಾಸದಿಂದ ಬ್ರೇಕ್‌ ತೆಗೆದುಕೊಂಡಿಲ್ಲ. ಮಗ ಅರಿನ್ ನುಡಿಸುತ್ತಿರುವ ತಬಲಾ ತಾಳಕ್ಕೆ ಇವರು ಹೆಜ್ಜೆ ಹಾಕುತ್ತಿರುವ ವಿಡಿಯೋ ಒಂದು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಮಾಧುರಿ ತನ್ನ ಮಗನಿಗೆ ಶಾಸ್ತ್ರೀಯ ನೃತ್ಯ ಕಥಕ್‌ನ ಕೆಲವು ಸ್ಟೇಪ್ಸ್‌ ಕಲಿಸುತ್ತಿರುವುದನ್ನು ನಾವು ನೋಡಬಹುದು. ಅಮ್ಮ ಮಗನ ಈ ವಿಡಿಯೋ ವೈರಲ್‌ ಆಗಿದೆ.
ಸಖತ್‌ ಫೇಮಸ್‌ ಆಗಿರುವ ಅಮ್ಮ ಮಗನ ಡ್ಯಾನ್ಸ್‌ ಮತ್ತು ತಬಲ ಜುಗಲ್‌ ಬಂಧಿ ವಿಡಿಯೋ.

ನಟಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಅರಿನ್ ತಬಲಾ ನುಡಿಸುತ್ತಿದ್ದರೆ, ಮಾಧುರಿ ನೃತ್ಯ ಮಾಡುತ್ತಾರೆ. ಕೆಲವು ಸೆಕೆಂಡುಗಳ ನಂತರ, ಅರಿನ್ ತನ್ನ ತಾಯಿ ನೃತ್ಯಕ್ಕೆ ಸಾಥ್‌ ನೀಡುತ್ತಾನೆ ಮತ್ತು ಮಾಧುರಿ ಅರಿನ್‌ಗೆ ಕೆಲವು ಕಥಕ್ ಸ್ಟೇಪ್ಸ್‌ ಕಲಿಸುತ್ತಾರೆ.

"ಕ್ಯಾರೆಂಟೈನ್ ನಮ್ಮೆಲ್ಲರನ್ನೂ ನಾವು ಯಾವಾಗಲೂ ಬಯಸುತ್ತಿರುವ ಕೆಲಸಗಳನ್ನು ಮಾಡುವಂತೆ ಮಾಡುತ್ತಿದೆ. ನಾನು ಯಾವಾಗಲೂ ಏನು ಮಾಡಲು ಬಯಸುತ್ತೇನೆ ಎಂಬುದನ್ನು ಕಂಡುಹಿಡಿಯಲು ಕೊನೆಯವರೆಗೂ ನೋಡಿ. #WhenArinDancedWithMadhuri."

ಅಮ್ಮ ಮಗನ ಈ ಕ್ಯೂಟ್‌ ವಿಡಿಯೋಗೆ ನೆಟ್ಟಿಗರು ಫಿದಾ.

ಮಾಧುರಿ ದೀಕ್ಷಿತ್‌ 2 ಗಂಡು ಮಕ್ಕಳು, ಅರಿನ್ ನೆನೆ ಮತ್ತು ರಿಯಾನ್ ನೆನೆಯ ಹೆಮ್ಮೆಯ ತಾಯಿ.  

'ರಾಯನ್ ನಾಚಿಕೆ ಮತ್ತು ಅಂತರ್ಮುಖಿ. ಆದರೆ ಅರಿನ್ ಶಾಲಾ ನಾಟಕಗಳಲ್ಲಿ ಭಾಗವಹಿಸುತ್ತಾನೆ, ಡ್ರಮ್, ತಬಲಾ ಮತ್ತು ಪಿಯಾನೋ ನುಡಿಸುತ್ತಾನೆ ಮತ್ತು ನೃತ್ಯ ಮಾಡಲು ಇಷ್ಟಪಡುತ್ತಾನೆ. ಅವನು ಹಿಪ್ ಹಾಪ್‌ ಕಲಿಯಲು ಬಯಸಿದ್ದನು,' ಎಂದು ಈ ಹಿಂದೆ ಮಕ್ಕಳ ಬಗ್ಗೆ ಹೇಳಿಕೊಂಡಿದ್ದರು ಮಾಧುರಿ.

ಆಗಾಗ್ಗೆ ಫ್ಯಾಮಿಲಿ ಜೊತೆ ಕಾಲಕಳೆಯುವ ಫೋಟೋವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ದಿವಾ.

ಲಾಕ್‌ಡೌನ್‌ನಿಂದ ಜೀವನ ಮನೆಯ 4 ಗೋಡೆಗೆ ಸೀಮಿತವಾಗಿದ್ದರೂ, ಡ್ಯಾನ್ಸ್‌ ಪ್ರಾಕ್ಟೀಸ್‌ ಬಿಟ್ಟಿಲ್ಲ ಈ ಸ್ಟಾರ್‌. ಇದಕ್ಕೂ ಮೊದಲು, ಮಾಧುರಿ ತಮ್ಮ ಡ್ಯಾನ್ಸಿಂಗ್ ಸೆಷನ್‌ನ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. 

ಪತಿ ಶ್ರೀರಾಮ್‌ ನೆನೆ ಮತ್ತು ಮಕ್ಕಳ ಜೊತೆ ಮಾಧುರಿ ಧೀಕ್ಷಿತ್‌.

ಸದ್ಯಕ್ಕೆ ಮುಂಬಯಿಯ ತಮ್ಮ ಮನೆಯಲ್ಲಿ ಫ್ಯಾಮಿಲಿ ಒಟ್ಟಿಗೆ ಕ್ವಾಲೀಟಿ ಟೈಮ್‌ ಕಳೆಯುತ್ತಿದ್ದಾರೆ ಬಾಲಿವುಡ್‌ ನಟಿ.

loader