ಬಾಲಿವುಡ್ ನಟಿ ಜರೀನ್‌ಗೆ ಬಂಧನ ಭೀತಿ, ಅರೆಸ್ಟ್ ವಾರೆಂಟ್ ಹೊರಡಿಸಿದ ನ್ಯಾಯಾಲಯ!
ಬಾಲಿವುಡ್ ನಟಿ ಜರೀನ್ ಖಾನ್‌ಗೆ ಸಂಕಷ್ಟ ಹೆಚ್ಚಾಗಿದೆ. ವಂಚನೆ ಪ್ರಕರಣ ಸಂಬಂಧ ಕೋಲ್ಕತಾ ನ್ಯಾಯಾಲಯ ಅರೆಸ್ಟ್ ವಾರೆಂಟ್ ಹೊರಡಿಸಿದೆ.
ವೀರ್, ಹೇಟ್ ಸ್ಟೋರಿ 3, ಅಕ್ಸರ್, ಹೌಸ್‌ಫುಲ್ 2 ಸೇರಿದಂತೆ ಹಲವು ಜನಪ್ರಿಯ ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡ ಜನರ ಮನಗೆದ್ದಿರುವ ಬಾಲಿವುಡ್ ನಟಿ ಜರೀನ್ ಖಾನ್‌ಗೆ ಸಂಕಷ್ಟ ಶುರುವಾಗಿದೆ.
ವಂಚನೆ ಪ್ರಕರಣ ಸಂಬಂಧ ಕೋಲ್ಕತಾ ನ್ಯಾಯಾಲಯ ಜರೀನ್ ಖಾನ್ ವಿರುದ್ಧ ಅರಸ್ಟ್ ವಾರೆಂಟ್ ಹೊರಡಿಸಿದೆ. ಇದೀಗ ನಟಿ ಬಂಧನ ಭೀತಿ ಎದುರಿಸುತ್ತಿದ್ದಾರೆ.
2016ರಲ್ಲಿ ದಾಖಲಾಗಿದ್ದ ಪ್ರಕರಣ ಕುರಿತು ಜರೀನ್ ಖಾನ್ ಇದುವರೆಗೂ ಕೋರ್ಟ್ ವಿಚಾರಣೆಗೆ ಹಾಜರಾಗಿಲ್ಲ. ಈ ಕುರಿತು ಹಲವು ನೋಟಿಸ್ ನೀಡಿದ್ದ ಕೋರ್ಟ್ ಇದೀಗ ಅರೆಸ್ಟ್ ವಾರೆಂಟ್ ಹೊರಡಿಸಿದೆ
ಅರೆಸ್ಟ್ ವಾರೆಂಟ್ ಕುರಿತು ಪ್ರತಿಕ್ರಿಯೆ ನೀಡಿರುವ ಜರೀನ್ ಖಾನ್, ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಇದರಲ್ಲಿ ಸತ್ಯವಿಲ್ಲ ಅನ್ನೋದು ನನ್ನ ನಂಬಿಕೆ, ವಕೀಲರ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ.
2016ರಲ್ಲಿ ಕೋಲ್ಕತಾದಲ್ಲಿ ಆಯೋಜಿಸಿದ್ದ ದುರ್ಗಾ ಪೂಜೆ ಕಾರ್ಯಕ್ರಮಕ್ಕ ಜರೀನ್ ಖಾನ್‌ಗೆ ಆಹ್ವಾನ ನೀಡಲಾಗಿತ್ತು. ಇದಕ್ಕಾಗಿ ಹಣವನ್ನು ಪಾವತಿ ಮಾಡಲಾಗಿತ್ತು. ಆದರೆ ಜರೀನ್ ಖಾನ್ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಕಾರ್ಯಕ್ರಮ ಆಯೋಜಕರು ಜರೀನ್ ಖಾನ್ ಕೆಲವೇ ಕ್ಷಣಗಳಲ್ಲಿ ಆಗಮಿಸುತ್ತಾರೆ ಎಂದು ಹಲವು ಬಾರಿ ಮೈಕ್ ಮೂಲಕ ಘೋಷಣೆ ಮಾಡಿದ್ದರು. ಆದರೆ ಜರೀನ್ ಖಾನ್ ಕಾರ್ಯಕ್ರಮಕ್ಕೆ ಬರಲೇ ಇಲ್ಲ.
ಇದರಿಂದ ಕುಪಿತಗೊಂಡಿದ್ದ ಆಯೋಜಕರು ಜರೀನ್ ಖಾನ್ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಗೆ ಸತತವಾಗಿ ಜರೀನ್ ಖಾನ್ ಗೈರಾಗಿದ್ದರು.
ವಿಮಾನ ಟಿಕೆಟ್, ಉಳಿದುಕೊಳ್ಳಲು ಹೊಟೆಲ್ ವ್ಯವಸ್ಥೆ ಸೇರಿದಂತೆ ಕೆಲ ಅಸರ್ಮಪಕ ವ್ಯವಸ್ಥೆಗಳಿಂದ ಈ ಕಾರ್ಯಕ್ರಮದಿಂದ ಜರೀನ್ ಖಾನ್ ದೂರ ಉಳಿದಿದ್ದರು ಎಂದು ಜರೀನ್ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ.
ಇದೀಗ ಬಂಧನ ವಾರೆಂಟ್ ಬೆನ್ನಲ್ಲೇ ಜರೀನ್ ಖಾನ್ ತಮ್ಮ ವಕೀಲ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಂದಿನ ಕಾನೂನು ಹೋರಾಟದ ಕುರಿತು ಚರ್ಚಿಸಿದ್ದಾರೆ.