ತುರ್ತುಪರಿಸ್ಥಿತಿಯಲ್ಲಿ ಈ ಗಾಯಕನನ್ನು ಬ್ಯಾನ್ ಮಾಡಿದ್ದ ಸರ್ಕಾರ!
ಕಿಶೋರ್ ಕುಮಾರ್ (Kishore Kumar) ಅವರು ಬಾಲಿವುಡ್ ಕಂಡ ಬಹುಮುಖ ಪ್ರತಿಭೆ. ಇಂದು ಅಂದರೆ ಆಗಸ್ಟ್ 4 ಅವರ ಜನ್ಮದಿನ. ಕಿಶೋರ್ ಕುಮಾರ್ ಅವರ ಬಹುತೇಕ ಕಥೆಗಳು ಚಿತ್ರರಂಗದಲ್ಲಿ ಕೇಳಿಬರುತ್ತವೆ. ಅವರು , ತಮ್ಮ ಇಷ್ಟಕ್ಕೆ ಅನುಗುಣವಾಗಿ ಜೀವನ ನಡೆಸಿದ್ದರು. ಯಾವುದೇ ಒಪ್ಪಂದದ ಬಗ್ಗೆ ಚಿಂತಿಸದೆ, ಹಣದ ದುರಾಸೆಯಿಲ್ಲದ ಅವರು ರೆಕಾರ್ಡಿಂಗ್‌ನ ಸಮಯದಲ್ಲಿ ಬಂದಾಗಲೆಲ್ಲಾ ತಮ್ಮ ಮಾತುಗಳಿಂದ ಜನರನ್ನು ನಗಿಸಿದರು ಮತ್ತು ನಗುತ್ತಿದ್ದರು. ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಕುತೂಹಲಕಾರಿ ಕಥೆಗಳನ್ನು ಇಲ್ಲಿವೆ
ಕಿಶೋರ್ ದಾ ಅವರು 4 ಆಗಸ್ಟ್ 1929 ರಂದು ಮಧ್ಯ ಪ್ರದೇಶದ ಖಾಂಡ್ವಾದಲ್ಲಿ ಜನಿಸಿದರು. ಅವರ ಪೋಷಕರು ಅವರಿಗೆ ಅಭಾಸ್ ಕುಮಾರ್ ಗಂಗೂಲಿ ಎಂದು ಹೆಸರಿಟ್ಟರು. ಸಂಗೀತಾಸಕ್ತಿಯಿಂದ ಕಿಶೋರ್ ಮುಂಬೈಗೆ ಬಂದಿದ್ದರು.
ಕಿಶೋರ್ ಕುಮಾರ್ ಅವರು ಲತಾ ಮಂಗೇಶ್ಕರ್ ಅವರನ್ನು ತುಂಬಾ ಆಶ್ಚರ್ಯಗೊಳಿಸುತ್ತಿದ್ದರು. ಅನೇಕ ಬಾರಿ ಅವರು ಹಾಡನ್ನು ಬೇರೆ ರೀತಿ ಹಾಡಿ ರೆಕಾರ್ಡಿಂಗ್ ಮಾಡುವಾಗ ಲತಾ ಜೀ ಅವರಿಗೆ ಕೇಳಿಸುತ್ತಿದ್ದರು. ಅನೇಕ ಬಾರಿ ಲತಾ ಜೀ ಅವರು ತಮ್ಮ ಹಾಡಿನ ಭಾಗವನ್ನು ಹಾಡಿದ ನಂತರ ಸ್ಟುಡಿಯೊದಿಂದ ಬೇಗನೆ ಹೊರಡುತ್ತಿದ್ದರು.
ತುರ್ತು ಪರಿಸ್ಥಿತಿ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಕಿಶೋರ್ ಕುಮಾರ್ ಅವರನ್ನು ಸರ್ಕಾರವನ್ನು ಉತ್ತೇಜಿಸುವ ಹಾಡನ್ನು ಹಾಡಲು ಕೇಳಿತ್ತು, ಅದನ್ನು ಕಿಶೋರ್ ಕುಮಾರ್ ನಿರಾಕರಿಸಿದರು. ಕಿಶೋರ್ ಕುಮಾರ್ ಹಾಡಿದ ಹಾಡುಗಳನ್ನು ಆಲ್ ಇಂಡಿಯಾ ರೇಡಿಯೋದಲ್ಲಿ ನಿಷೇಧಿಸಲಾಯಿತು.
ವಾಸ್ತವವಾಗಿ, ಮುಂಬೈನಲ್ಲಿ ಶ್ರೀಮಂತರು ನಾಯಿಗಳನ್ನು ಸಾಕಲು ಇಷ್ಟಪಡುತ್ತಿದ್ದರು ಮತ್ತು ಮನೆಯ ಹೊರಗೆ ನಾಯಿ ಎಚ್ಚರಿಕೆ ಫಲಕಗಳನ್ನು ಹಾಕುತ್ತಿದ್ದರು, ಆದರೆ ಕಿಶೋರ್ ಕುಮಾರ್ ಅವರ ಬಂಗಲೆಯ ಮುಂದೆ 'ಕಿಶೋರ್ ಕುಮಾರ್ ಇದ್ದಾರೆ ಎಚ್ಚರಿಕೆ' ಎಂದು ಬೋರ್ಡ್ ಹಾಕಿಕೊಂಡಿದ್ದರು.
ಕಿಶೋರ್ ತನ್ನ ಮನೆಯ ಹೊರಗೆ 'ಬಿವೇರ್ ಆಫ್ ಕಿಶೋರ್' ಎಂಬ ಬೋರ್ಡನ್ನು ನೇತು ಹಾಕಿದ್ದರು. ಚಿತ್ರನಿರ್ಮಾಪಕ ಹೆಚ್.ಎಸ್.ರವಾಯಿಲ್ ಅವರು ಯಾವುದೋ ಕೆಲಸದ ನಿಮಿತ್ತ ಮನೆಗೆ ಬಂದಾಗ ಕಿಶೋರ್ ಅವರ ಕೈಯನ್ನು ಕಚ್ಚಿದ್ದರು ಮತ್ತು ರಾವಾಯಿಲ್ ಇದಕ್ಕೆ ಕಾರಣ ಕೇಳಿದಾಗ ಕಿಶೋರ್ ನೀವು ಮನೆ ಪ್ರವೇಶಿಸುವ ಮುನ್ನ ಬೋರ್ಡ್ ನೋಡಿಲ್ವಾ ಎಂದು ಕೇಳಿದ್ದರು
ಬಾಲಿವುಡ್‌ನ ಅತ್ಯುತ್ತಮ ಗಾಯಕ ಮತ್ತು ನಟ ಕಿಶೋರ್ ಕುಮಾರ್ ಅಕ್ಟೋಬರ್ 13, 1987 ರಂದು ಮುಂಬೈನಲ್ಲಿ ನಿಧನರಾದರು. ಇಂದು ಅವರು ಈ ಲೋಕದಲ್ಲಿ ಇಲ್ಲದಿದ್ದರೂ ಅವರು ಹಾಡಿದ ಹಾಡುಗಳು ಅಮರವಾಗಿವೆ.