ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮದುವೆ ದಿನಾಂಕ ಬಹಿರಂಗಪಡಿಸಿದ ಕಿಯಾರಾ ಆಡ್ವಾಣಿ?
ನಟಿ ಕಿಯಾರಾ ಅಡ್ವಾಣಿ (Kiara Adwani) ಭಾನುವಾರ ಮಧ್ಯಾಹ್ನ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ದೊಡ್ಡ ಘೋಷಣೆ ಮಾಡಿದ್ದಾರೆ. ವಿಡೀಯೋ ಶೀರ್ಷಿಕೆಯು ಸಿದ್ಧಾರ್ಥ್ ಮಲ್ಹೋತ್ರಾ (Siddharth Malhotra) ಅವರೊಂದಿಗಿನ ವಿವಾಹದ ವದಂತಿಗಳಿಗೆ ಉತ್ತೇಜನ ನೀಡಿದೆ. ಅವರು ತಮ್ಮ ಸುಂದರವಾದ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಶೇರ್ ಮಾಡುವ ಮೂಲಕ ಪ್ರಕಟಿಸಿದ್ದಾರೆ.
ವೀಡಿಯೊದಲ್ಲಿ, ಕಿಯಾರಾ ಕ್ಯಾಮೆರಾಗೆ ಪೋಸ್ ನೀಡುತ್ತಾ ನಾಚಿಕೆಕೊಂಡು 'ಇದನ್ನು ಹೆಚ್ಚು ಕಾಲ ರಹಸ್ಯವಾಗಿಡಲು ಸಾಧ್ಯವಿಲ್ಲ. ಶೀಘ್ರದಲ್ಲೇ ಪ್ರಕಟಿಸಲಾಗುವುದು. ಟ್ಯೂನ್ ಆಗಿರಿ... 2 ನೇ ಡಿಸೆಂಬರ್'ಎಂದು ಬರೆದಿದ್ದಾರೆ.
ವಿಡಿಯೋ ಸಖತ್ ವೈರಲ್ ಆಗಿದ್ದು. ಅನೇಕ ನೆಟಿಜನ್‌ಗಳು ಈ ವಿಡಿಯೋ ಆಕೆಯ ಮತ್ತು ಸಿದ್ಧಾರ್ಥ್ ಅವರ ಮದುವೆಗೆ ಸಂಬಂಧಿಸಿದ್ದು ಎಂದು ಊಹಿಸಲು ಪ್ರಾರಂಭಿಸಿದರು.
ಅಭಿಮಾನಿಯೊಬ್ಬರು, 'ಅವಳು ಮದುವೆಯಾಗುತ್ತಿದ್ದಾಳೆ ಅಥವಾ ಏನು?' ಎಂದು ಕಾಮೆಂಟ್‌ಮಾಡಿದ್ದಾರೆ ಇನ್ನೊಬ್ಬ ಅಭಿಮಾನಿ, 'ಪ್ರೀ ವೆಡ್ಡಿಂಗ್ ಶೂಟ್ ಇದ್ಯಾ? ಎಂದು ಕಾಮೆಂಟ್‌ನಲ್ಲಿ ಕೇಳಿದ್ದಾರೆ. 'ನಿಮ್ಮ ಮತ್ತು ಸಿದ್ಧ್ ಮದುವೆ, ಈ ಬಗ್ಗೆ ಇಡೀ ದೇಶಕ್ಕೆ ಗೊತ್ತು, ಬೇರೆ ಏನಾದರೂ ಸೀಕ್ರೇಟ್ ಇದ್ಯಾ' ಎಂದು ಇನ್ನೊಬ್ಬರು ಕೇಳಿದ್ದಾರೆ.
ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ 7 ನಲ್ಲಿ, ಶಾಹಿದ್ ಕಪೂರ್ ಕಿಯಾರಾ ಮತ್ತು ಸಿದ್ಧಾರ್ಥ್ ಅವರ ಮದುವೆಯ ಬಗ್ಗೆ ದೊಡ್ಡ ಸುಳಿವು ನೀಡಿದರು.
ಸಿದ್ಧಾರ್ಥ್ ಅವರೊಂದಿಗಿನ ಸಂಬಂಧವನ್ನು ನೀವು ನಿರಾಕರಿಸುತ್ತೀರಾ ಎಂದು ಕರಣ್ ಕಿಯಾರಾ ಅವರನ್ನು ಕೇಳಿದಾಗ ಅದಕ್ಕೆ 'ನಾನು ನಿರಾಕರಿಸುವುದಿಲ್ಲ ಅಥವಾ ಸ್ವೀಕರಿಸುವುದಿಲ್ಲ. ನಾವು ಖಂಡಿತವಾಗಿಯೂ ಆತ್ಮೀಯ ಸ್ನೇಹಿತರು ಎಂದು ಕಿಯಾರಾ ಹೇಳಿದ್ದರು. ಆ ಸಮಯದಲ್ಲಿ 'ವರ್ಷದ ಕೊನೆಯಲ್ಲಿ ದೊಡ್ಡ ಘೋಷಣೆಗೆ ಸಿದ್ಧರಾಗಿರಿ' ಎಂದು ಶಾಹಿದ್ ಹಿಂಟ್ ನೀಡಿದ್ದರು.
ಕಿಯಾರಾ ಅಡ್ವಾಣಿ ಅವರ ಗೋವಿಂದ ನಾಮ್ ಮೇರಾ ಡಿಸೆಂಬರ್ 16 ರಂದು OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. ಅವರು ಮುಂದಿನ ಪ್ರಾಜೆಕ್ಟ್‌ಗಳೆಂದರೆ ಕಾರ್ತಿಕ್ ಆರ್ಯನ್ ಅವರೊಂದಿಗೆ ಸತ್ಯ ಪ್ರೇಮ್ ಕಿ ಕಥಾ ಮತ್ತು ರಾಮ್ ಚರಣ್ ಅವರೊಂದಿಗೆ ಆರ್‌ಸಿ 15 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.