ಕೀರ್ತಿ ಸುರೇಶ್ ಡೀಪ್ ಡ್ರೆಸ್ ಹಾಕಿದ್ರೂ ಕತ್ತಲಿರೋ ತಾಳಿ ಮೇಲೇ ನೆಟ್ಟಿಗರ ಕಣ್ಣು; ಫೋಟೋ ವೈರಲ್
ವೈರಲ್ ಆಯ್ತು ಕೀರ್ತಿ ಸುರೇಶ್ ತಾಳಿ...ಮಾಡರ್ನ್ ಡ್ರೆಸ್ ಹಾಕಿದ್ದರೂ ಕೊರಳಿದೆ ಅರಿಶಿಣ ದಾರ. ಮೆಚ್ಚುಗೆ ವ್ಯಕ್ತ ಪಡಿಸುತ್ತಿರುವ ನೆಟ್ಟಿಗರು......
ತಮಿಳು ನಟಿ ಕೀರ್ತಿ ಸುರೇಶ್ ಮತ್ತು ಬಹು ಕಾಲದ ಗೆಳೆಯ ಆಂಟೋನಿ ತಾಟಿಲ್ ಡಿಸೆಂಬರ್ 12ರಂದು ಗೋವಾದಲ್ಲಿ ಸಖತ್ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದರು.
ಮೊದಲು ಹಿಂದೂ ಸಂಪ್ರದಾಯದಲ್ಲಿ ಮದುವೆ ಮಾಡಿಕೊಂಡು ಆನಂತರ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ವಿವಾಹವಾದರು. ಮದುವೆ ನಂತರ ಮೊದಲ ಬಾರಿಗೆ ಜನರ ಮುಂದೆ ಕಾಣಿಸಿಕೊಂಡಿದ್ದಾರೆ.
ಮದುವೆ ನಂತರ ಎರಡು ಕಾರ್ಯಕ್ರಮಗಳಲ್ಲಿ ಕೀರ್ತು ಸುರೇಶ್ ಕಾಣಿಸಿಕೊಂಡಿದ್ದಾರೆ. ಒಮ್ಮೆ ಕೆಂಪು ಬಣ್ಣದ ಮ್ಯಾಕ್ಸಿಯಲ್ಲಿ ಮತ್ತೊಮ್ಮೆ ಗ್ಲಿಟರ್ ಸಿಲ್ವರ್ ಬಣ್ಣದ ಮ್ಯಾಕ್ಸಿಯಲ್ಲಿ. ಈ ಎರಡೂ ಲುಕ್‌ಗಳಲ್ಲಿ ಕೀರ್ತಿ ಮಾಂಗಲ್ಯವೇ ಹೈಲೈಟ್ ಆಗಿದೆ.
ಅರಿಶಿಣ ದಾರಕ್ಕೆ ತಾಳಿ ಕಟ್ಟಿಕೊಂಡಿದ್ದಾರೆ. ಒಂದೆರಡು ಎಳೆ ಅಲ್ಲ ಸುಮಾರು 11-12 ಎಳೆ ಇರುವ ಅರಿಶಿಣ ದಾರ ಇದಾಗಿದ್ದು ಸಂಪ್ರದಾಯವನ್ನು ಪಾಲಿಸುತ್ತಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಸಾಮಾನ್ಯವಾಗಿ ಕೀರ್ತಿ ಸುರೇಶ್ ಮಾಡರ್ನ್ ಡ್ರೆಸ್ ಹಾಕುವುದು ತೀರ ಕಡಿಮೆ ಅದರಲ್ಲೂ ಮದುವೆ ಆದ ಮೇಲೆ ಎರಡು ಸಲ ಮಾಡರ್ನ್ ಡ್ರೆಸ್ ಧರಿಸಿದ್ದರೂ ನೆಟ್ಟಿಗರು ಕಣ್ಣು ತಾಳಿ ಮೇಲೆ ಬಿದ್ದಿದೆ.
ಬಾಲಿವುಡ್ ನಟಿಯರು ಮದುವೆ ಮಾರನೇ ದಿನವೇ ಕರಿಮಣಿ ಸರ ಧರಿಸುತ್ತಾರೆ ಅಷ್ಟೇ ಯಾಕೆ ಶೋಭಿನಾ ಏನೂ ಧರಿಸದೆ ಆರಾಮ್ ಆಗಿದ್ದರು ಆದರೆ ಕೀರ್ತಿ ಸುರೇಶ್ ಗ್ರೇಟ್ ಎನ್ನುತ್ತಿದ್ದಾರೆ ಅಭಿಮಾನಿಗಳು.
ಸುಮಾರು 15 ವರ್ಷಗಳ ಕಾಲ ಕೀರ್ತಿ ಮತ್ತು ಆಂಟೋನಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹೈಸ್ಕೂಲ್‌ನಲ್ಲಿ ಶುರುವಾದ ಈ ಪ್ರೀತಿಯನ್ನು ಪೋಷಕರು ಮೆಚ್ಚಿಕೊಂಡಿದ್ದಾರೆ. ಇಷ್ಟು ದಿನ ಸೀಕ್ರೆಟ್ ಆಗಿ ಇಟ್ಟಿದ್ದೇ ಶಾಕಿಂಗ್ ವಿಚಾರ.