ಬೇಬಿಬಂಪ್ ದುಪ್ಪಟ್ಟಾದಿಂದ ಮರೆಮಾಡಿದ್ರಾ ಕತ್ರಿನಾ ಕೈಫ್?
ಬಾಲಿವುಡ್‌ನಲ್ಲಿ ಸದ್ಯದಲ್ಲೇ ಮತ್ತೊಂದು ಗುಡ್ ನ್ಯೂಸ್ ಹೊರಬೀಳಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ. ನಟಿ ಕತ್ರಿನಾ ಕೈಫ್ (Katrina Kaif) ತಾಯಿಯಾಗಲಿದ್ದಾರೆ ಎಂದು ಊಹಿಸಲಾಗುತ್ತಿದ್ದು, ಕತ್ರಿನಾ ಅವರ ವೀಡಿಯೊ ಇದಕ್ಕೆ ಕಾರಣವಾಗಿದೆ ಮತ್ತು ಇದು ವೇಗವಾಗಿ ವೈರಲ್ ಆಗುತ್ತಿದೆ. ಕತ್ರಿನಾ ಕೈಫ್ ಇತ್ತೀಚೆಗೆ ಆಭರಣ ಬ್ರಾಂಡ್ ಅನ್ನು ಪ್ರಚಾರ ಮಾಡಲು ಹೈದರಾಬಾದ್‌ಗೆ ಹೋದಾಗಿನ ವೀಡಿಯೊ ಇದಾಗಿದೆ.
ಕತ್ರಿನಾ ಕೈಫ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ನೋಡಿದ ನಂತರ, 40 ವರ್ಷದ ನಟಿ ಗರ್ಭಿಣಿಯಾಗಿದ್ದಾರೆ ಮತ್ತು ತನ್ನ ಬೇಬಿ ಬಂಪ್ ಅನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಊಹಾಪೋಹಗಳನ್ನು ಮಾಡಲಾಗುತ್ತಿದೆ.
ಕತ್ರಿನಾ ಕೈಫ್ ಸುಂದರವಾದ ಕೆಂಪು ಬಣ್ಣದ ಸೂಟ್ ಧರಿಸಿದ್ದು ಅದರಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದುದನ್ನು ವಿಡಿಯೋದಲ್ಲಿ ಕಾಣಬಹುದು.
ಆದರೆ ಈ ಸಮಯದಲ್ಲಿ ಅವರು ತನ್ನ ಹೊಟ್ಟೆಯ ಮೇಲೆ ದುಪಟ್ಟಾವನ್ನು ಸರಿಪಡಿಸುತ್ತಿದ್ದರು. ಇದನ್ನು ನೋಡಿದಾಗ ನಟಿ ತನ್ನ ಬೇಬಿ ಬಂಪ್ ಅನ್ನು ಮರೆಮಾಡುತ್ತಿದ್ದರು ಎಂದು ಜನರು ಊಹಿಸುತ್ತಿದ್ದಾರೆ.
ಅಷ್ಟೇ ಅಲ್ಲ ಹೊರಬಿದ್ದ ಫೋಟೋಗಳಲ್ಲಿ ಸಹ ಕತ್ರಿನಾ ಕೈಫ್ ತಮ್ಮಹೊಟ್ಟೆಯನ್ನು ದುಪಟ್ಟಾದಿಂದ ಮುಚ್ಚಿಕೊಂಡಿರುವಂತೆ ತೋರುತ್ತದೆ.
ವೀಡಿಯೊವನ್ನು ವೀಕ್ಷಿಸಿದ ನಂತರ, 'ಓ ದೇವರೇ! ಅವರು ನಿಜವಾಗಿಯೂ (ಗರ್ಭಿಣಿ), ನಾನು ತುಂಬಾ ಉತ್ಸುಕನಾಗಿದ್ದೇನೆ ' ಎಂದು ಬಳಕೆದಾರರು ಕಾಮೆಂಟ್ ಬಾಕ್ಸ್‌ನಲ್ಲಿ ಬರೆದಿದ್ದಾರೆ.
ವಿಷಯವನ್ನು ಪೋಸ್ಟ್ ಮಾಡಿ ಒಂದು ಗಂಟೆಯಾಗಿದೆ, ಆದರೆ ಅವರು ದುಪಟ್ಟಾದಿಂದ ಹೊಟ್ಟೆಯನ್ನು ಮುಚ್ಚಿರುವುದರಿಂದ ಅವರು ಗರ್ಭಿಣಿ ಎಂದು ಯಾರೂ ಹೇಳಲಿಲ್ಲ' ಎಂದು ಮತ್ತೊಬ್ಬ ಬಳಕೆದಾರರ ಕಾಮೆಂಟ್ ಮಾಡಿದ್ದಾರೆ.
ಪ್ರಸ್ತುತ, ವೈರಲ್ ವೀಡಿಯೊ ಮತ್ತು ಊಹಾಪೋಹಗಳ ಬಗ್ಗೆ ಕತ್ರಿನಾ ಕೈಫ್ ಅಥವಾ ಅವರ ತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕತ್ರಿನಾ ಕೈಫ್ 2021 ರಲ್ಲಿ ವಿಕ್ಕಿ ಕೌಶಲ್ ಅವರನ್ನು ರಾಜಸ್ಥಾನದ ಬಾರ್ಬರಾದ ಸಿಕ್ಸ್ ಸೆನ್ಸ್ ಫೋರ್ಟ್‌ನಲ್ಲಿ ವಿವಾಹವಾದರು ಆ ಬಳಿಕ ಕತ್ರಿನಾ ಕೈಫ್ ಗರ್ಭಿಣಿಯಾಗಿರುವ ಸುದ್ದಿ ಹಲವು ಬಾರಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು, ಅದನ್ನು ನಟಿ ನಿರಾಕರಿಸಿದ್ದರು.
ಈ ದಿನಗಳಲ್ಲಿ ಕತ್ರಿನಾ ಕೈಫ್ ತನ್ನ ಮುಂಬರುವ ಚಿತ್ರ 'ಟೈಗರ್ 3' ಪ್ರಚಾರದಲ್ಲಿ ನಿರತರಾಗಿದ್ದಾರೆ, ಇದರಲ್ಲಿ ಸಲ್ಮಾನ್ ಖಾನ್ ಮುಖ್ಯ ಪಾತ್ರದಲ್ಲಿದ್ದಾರೆ. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರವು 'ಟೈಗರ್' ಫ್ರಾಂಚೈಸ್‌ನ ಮೂರನೇ ಚಿತ್ರವಾಗಿದ್ದು, ಯಶ್ ರಾಜ್ ಫಿಲ್ಮ್ಸ್ ತನ್ನ ಸ್ಪೈ ಯೂನಿವರ್ಸ್ ಅಡಿಯಲ್ಲಿ ನಿರ್ಮಿಸಿದೆ.
ಈ ಚಿತ್ರವು ಈ ವರ್ಷದ ನವೆಂಬರ್ 12 ರಂದು ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ, ಇದರ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್‌ಗೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಿದೆ.